Wednesday, 1 September 2021

ನೀಚವೃತ್ತಿಯ ಬಿಟ್ಟು ಸೋಚಿತ ಕರ್ಮವನೇ ಯೋಚನೆ ಮಾಡುತಾ ankita gurujagannatha vittala

 ..


ನೀಚವೃತ್ತಿಯ ಬಿಟ್ಟು ಸೋಚಿತ ಕರ್ಮವನೇ

ಯೋಚನೆ ಮಾಡುತಾ ಪ


ನೀಚ ಜನರುನು ಯಾಚಿಸದೆ ಸವ್ಯ

ಸಾಚಿಯ ಸಖನ ಭಜಿಸೋ ಪ್ರಾಣೀ

ಸರಸ ಸಲ್ಲಾಪ ಶ್ರೀ ಹರಿಕಥಾ ಶ್ರವಣ ನೀ

ಪರಮಭಕ್ತರ ಸಂಗವಾ

ನಿರುತದಲಿ ನೀ ಮಾಡಿ ಹರುಷ ಮನವನು ತಾಳಿ

ಚರಿಸೊ ಈ ಧರಣಿ ಮಂಡಲಾ

ಅರಸಿಗಾದರು ಒಮ್ಮೆ ಶಿರಸುಬಾಗದಲೆ ಶ್ರೀ

ಹರಿದಾಸರಾ ಚರಣಕೆ

ಎರಗ್ಯವರ ಮನಿದ್ವಾರಪರಿಚರನು ಎಂದೆನಿಸಿ

ಭರದಿಂದ ಬಾಳಿ ಬದಕೋ ಇದಕೋ 1


ಅಲ್ಪ ಆಶೆಯ ಮಾಡಿ ಅಲ್ಪ ಮಾನವನಾಗಿ

ಕಲ್ಪನೀಯನು ಮಾಡದೆ

ಸ್ವಲ್ಪ ಫಲದಲಿ ಮನಸು ಕಲ್ಪಿಸಿ ಪ್ರಿತಿದಿನವ

ನಲ್ಪ ಜನರನು ನಿಂದಿಸೀ

ಅಲ್ಪನಾರೇರು ಮಾಳ್ಪ ಒಲ್ಪಿಗೆ ಮರುಳಾಗಿ

ಪಲ್ಕಿಸಿದು ಬಾಯ್ದೆರೆಯದೆ

ಸ್ವಲ್ಪಗಾಲದಲಹಿತಲ್ಪ ಪದಪದುಮಗಳ ಕಿಂ -

ಜಲ್ಕ ನೀನಾಸ್ವಾದಿಸೋ ಲೇಸೋ2


ಪೊಡವಿ ಮೊದಲಾದ ಈ ಮಡದಿ ಮಕ್ಕಳು ಗೇಹ

ವಡವಿ ವಸನವ ಬಯಸದೆ

ಪೊಡವಿಮಂಡಲದಿ ಬಹು ಬಡವ ನಾನೆನುತಲೀ

ಪೊಡವಿ ಪಾಲರ ಸೇವೆಯಾ

ಧೃಢಮನದಿ ನೀ ಮಾಡೆ ಕೊಡರೊಂದು ದುಗ್ಗಾಣಿ

ಕಡುಮೂರ್S ಎಲೊ ಪಾಪಿಯೇ

ಬಿಡದೆ ದೈನ್ಯದಿ ನೀನು ಜಡಜನಾಭನ ಪಾದ

ಬಿಡದೆ ಸೇವಿಸಲು ಫಲವ ಕೂಡುವಾ 3


ನಾ ಮಾಡೋ ವ್ಯಾಪಾರ ನೀ ಮಾಡಿಸುವಿ ಎಂಬ

ಈ ಮಹಾಙÁ್ಞನ ಮಾರ್ಗ

ನೇಮವಾಗಿ ತಿಳಿದು ಗ್ರಾಮ ಗ್ರಾಮದಲ್ಲಿದ್ದ

ಪಾಮರೋತ್ತಮ ಜನರಿಗೆ

ಧಾಮನಾಗಿಹ ನಮ್ಮ ರಾಮದೇವನ ಪಾದ

ತಾಮರಸ ಕೊಂಡಾಡುತಾ

ಪ್ರೇಮ ಹರುಷಾಮರ್ಷ ಯಾಮಯಾಮಕೆ ಬರಲು

ಕಾಮಿಪುದು ನಿನಗೆ ಸಲ್ಲಾ ಖುಲ್ಲಾ 4


ನಗುವ ಜನರಾ ಕಂಡು ನಗುವುದೇ ಲೇಸೆಂದು

ಸಿಗದೆ ಜನರೊಳು ತಿರುಗುತಾ

ಬಗೆ ಬಗೆಯ ಮಾತುಗಳ ಬೊಗಳುವಾ ಜನರಿಗೆ

ಹಗಲಿರಳು ಹರಿ ಕಾಯಲೀ

ಜಗದಿ ಜೀವರು ಎಲ್ಲ ನಿಗಮ ವಂದಿತನ ಪ್ರತಿ

ಮೆಗಳು ಇವು ಎಂದು ತಿಳಿಯೇ

ನಗುತ ಹರುಷವ ಕೊಡುವ ಸುಗುಣಪೂರಣ ಗುರು

ಜಗನ್ನಾಥವಿಠಲರಾಯಾ ಮರೆಯಾ 5

***


No comments:

Post a Comment