Wednesday, 1 September 2021

ಜಾಗಿಸಬೇಕು ಜಗದ್ಗುರುವಿನ ಕೃಪೆಯಿಂದ ankita mahipati

 ಜಾಗಿಸಬೇಕು ಜಗದ್ಗುರುವಿನ ಕೃಪೆಯಿಂದ ಪ 


ಜಾಗಿಸದಲ್ಲದೆ ಖೂನ ಸುಗಮ ಸುಪಥದೋರದು ನಿಧಾನ ಯೋಗಿಜನರ ನಿಜಧನ ಆಗುದು ಸ್ವಾಧೀನ 1 

ಜಾಗಿಸಿ ನೋಡಲು ಸ್ವಸುಖ ಬಗೆಬಗೆದೋರುತದೆ ಅನೇಕ ಅಗಣಿತಗಮ್ಯಾಲೋಲಿತ ಶ್ರೀಗುರು ಕೌತುಕ 2 

ಝಗಿಝಗಿಸುವ ಜಗಜ್ಯೋತಿ ಜಾಗಿಸಿದ ಶ್ರೀ ಸದ್ಗುರುಮೂರ್ತಿ ಸಾಗಿ ಭವನಿದ್ರೆಯವಾರ್ತಿ ನೀಗಿದ ಮಹಿಪತಿ 3

****


No comments:

Post a Comment