Wednesday, 1 September 2021

ನಿನ್ನ ನೀ ತಿಳಿದು ನೋಡು ಯನ್ನ ಮನವೇ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ನಿನ್ನನೀ ತಿಳಿದು ನೋಡು | ಯನ್ನ ಮನವೇ ಪ 


ನಿನ್ನ ನೀ ತಿಳಿದು ನೋಡು | ಎನ್ನ ಹಿತವು ದಾವುದೆಂದು | ಮುನ್ನಿನವ ಗುಣ ಜರಿದು | ಇನ್ನಾರೆ ನೀ ಮನವೇ 1 

ಒಳ್ಳೆವರಾ ಕಂಡು ಬಾಗಿ | ಬಡಿವಾರ ನೀಗಿ | ಸೊಲ್ಲವ ನಾಲಿಸು ಅವರಾ | ನಿಲ್ಲದೇ ನೀ ಮನವೇ 2 

ತಂದೆ ಮಹಿಪತಿ ದಯಾ | ದಿಂದ ಪಡೆಯೋ ವಿಜಯಾ | ಮಂದ ನಾಗದಿರು ಬಂದಾ | ಛಂದ ವಿಂದು ಮನವೇ 3

****


No comments:

Post a Comment