Wednesday, 1 September 2021

ದಾರಿಯ ವಿಡಿರಣ್ಣ ಸ್ವಹಿತದ ದಾರಿಯ ಹಿಡಿರಣ್ಣಾ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ದಾರಿಯ ವಿಡಿರಣ್ಣ | ಸ್ವಹಿತದ ದಾರಿಯ ಹಿಡಿರಣ್ಣಾ ಪ 


ದಾರಿಯ ವಿಡಿನಿಜ ಸಾರಿಹ ಶೃತಿಗಳ | ಚಾರು ಭಕುತಿಯಾ ಅ.ಪ 


ಬಲ್ಲವರಿಗೆ ಬೆಸಗೊಳ್ಳುತ ಮನಸಿನ | ಖುಳ್ಳತನದ ಗುಣವೆಲ್ಲವು ಹೋಗಿ | ಬಲ್ಲವರನು ಕಂಡು ಮೆಲ್ಲಡಿಗಳ ವಿಡಿ | ದುಳ್ಳ ಸಿದ್ಧಾಂತದ ಸೊಲ್ಲವ ಕೇಳಿ | ಉಲ್ಹಾಸದಿಂದಲಿ ಮೆಲ್ಲನ ಭ್ಯಾಸವ | ಮೆಲ್ಲನೆ ಮಾಡುತ ಸುಲ್ಲಭ ತೆರದಾ 1 

ಕಂಡ ಪಥಕ ಹರಿದಂಡಲೆಯದೆನೆರೆ | ತಂಡಿಸುತಿಹ ಪಾಷಾಂಡ ಹೋಗಿ | ಚಂಡ ಸುಜ್ಞಾನದ ಲುಂಡನು ಭವದೃಢ | ಗಂಡು ಸದ್ಭೋಧದಿ ಪಂಡಿತನಾಗಿ | ಹಿಂಡ ಭಾಗವತರ ಮಂಡಲದೊಳು ಕೂಡಿ | ಪುಂಡರೀಕಾಕ್ಷನ ಕೊಂಡಾಡುತ ನಿಜ 2 

ಹಿಂದಿನ ಸುಕೃತಗಳಿಂದ ನೃದೇಹದಿ | ಬಂದೆನು ನಾನಿನ್ನು ಮುಂದಣ ಗತಿಯಾ | ಹೊಂದುವೆ ನಾವದುಯಂದು ವಿಚಾರವಾ | ತಂದು ಸದ್ಭಾವಲಿಂದೇ ನಿಷ್ಠೆಯಲಿ ತಂದೆ ಮಹಿಪತಿ ಪ್ರಭುಪದ ಭವ ಬಂಧನ ಹರಿವಾ 3

***

 

No comments:

Post a Comment