..
kruti by ವೀರನಾರಾಯಣ Veeranarayana
ಕೇಳಿಸಲೊಲ್ಲದೇನೋ ಕೃಷ್ಣಾ ಕೇಳಿಕೇಳದಂತಿರುವಿಯೇನೋ ಪ
ಬಾಳುವೆಯೊಲು ಕೀಳಾದೆನಾನಿಂತುಏಳಿಸೆನ್ನನು ಎಂದು ಕೇಳಿಕೊಳ್ಳುವದಿನ್ನು ಅ.ಪ
ಯಾವತ್ತೂ ತಿಳಿದವನು ಎಂಬರು ಎನ್ನನೋವು ತಿಳಿಯದಾಯ್ತೇನುಸಾವಿರ ವಿಥಿಗಳಿದ್ದೆನ್ನಯ ಪಾಲಿಗೆದೇವಾ ಅವಲ್ಲವು ಕಿವುಡಾದವೇನೋ 1
ಈ ವಿಶ್ವವನು ತುಂಬಿ ನಿಂತಿಹನೆಂಬೀಭಾವಕೆ ನೀನೆಂಬಿ ಆವಾವಜೀವರ ಭಾವವರಿತು ನೀಕಾವುದೆಂತೆಂಬೊ ಈ ವಚನವು ನಿನಗೆ 2
ಭೇದಭಾವವು ಇಲ್ಲೆಂದೂ ಸಾಧಿಸುವವುವೇದಗಳೆಲ್ಲ ಎಂದುಬಾಧೆಯ ಬಿಡಿಸೆಂದು ಬೇಡಿಕೊಳ್ಳುವೆಗದುಗಿನ ಆಧಾರಿ ದೇವನೆ ವೀರನಾರಾಯಣ 3
***
No comments:
Post a Comment