Saturday, 4 December 2021

ಹಣವೇ ನಿನ್ನಯ ಗುಣವೇನು ಬಣ್ಣಿಪೆನೊ ಹಣವಿಲ್ಲದ ankita hayavadana HANAVE NINNAYA GUNAVENU BANNIPENO HANAVILLADA



ಹಣವೆ ನಿನ್ನಯ ಗುಣವೇನು ಬಣ್ಣಿಪೆನೊ  ||ಪ||


ಹಣವಿಲ್ಲದವನೊಬ್ಬ ಹೆಣವೆ ಸರಿ ಕಂಡ್ಯ ||ಅಪ||


ಬೆಲೆಯಾಗದವನೆಲ್ಲ ಬೆಲೆಯ ಮಾಡಿಸುವಿ

ಎಲ್ಲ ವಸ್ತುಗಳನಿದ್ದಲ್ಲೆ ತರಿಸುವಿ

ಕುಲಗೆಟ್ಟವರ ಸತ್ಕುಲಕೆ ಸೇರಿಸುವಿ

ಹೊಲೆಯನಾದರೂ ತಂದೊಳಗಿರಿಸುವಿ   ||೧||


ಅಂಗನೆಯರ ಸಂಗ ಅತಿಶಯದಿ ಮಾಡಿಸುವಿ

ಶೃಂಗಾರಾಭರಣಂಗಳ ಬೇಗ ತರಿಸುವಿ

ಮಂಗನಾದರೂ ಅನಂಗನೆಂದೆನಿಸುವಿ

ಕಂಗಳಿಲ್ಲದವಗೆ ಮಗಳ ಕೊಡಿಸುವಿ ||೨||


ಚರಣಕ್ಕೆ ಬಂದಂಥ ದುರಿತವನು ಬಿಡಿಸುವಿ

ಸರುವರಿಗೆ ಶ್ರೇಷ್ಠನರನ ಮಾಡಿಸುವಿ

ಅರಿಯದ ಶುಂಠನ ಅರಿತವನೆನಿಸುವಿ

ಸಿರಿಹಯವದನನ ಸ್ಮರಣೆ ಮರೆಸುವಿ ||೩||

***


haNave ninnaya guNavEnu baNNipeno  ||pa||

haNavilladavanobba heNave sari kaMDya ||apa||


beleyaagadavanella beleya maaDisuvi

ella vastugaLaniddalle tarisuvi

kulageTTavara satkulake sErisuvi

holeyanaadarU taMdoLagirisuvi   ||1||


aMganeyara saMga atiSayadi maaDisuvi

SRuMgaaraabharaNaMgaLa bEga tarisuvi

maMganaadarU anaMganeMdenisuvi

kaMgaLilladavage magaLa koDisuvi ||2||


caraNakke baMdaMtha duritavanu biDisuvi

saruvarige SrEShThanarana maaDisuvi

ariyada SuMThana aritavanenisuvi

sirihayavadanana smaraNe maresuvi ||3||


***


ಹಣವೇ ನಿನ್ನಯ ಗುಣವೇನು ಬಣ್ಣಿಪೆನೊ ಪ.


ಹಣವಿಲ್ಲದವನೊಬ್ಬ ಹೆಣವೇ ಸರಿ ಕಂಡ್ಯಾ ಅ.ಪ.


ಬೆಲೆಯಾಗದವನೆಲ್ಲ ಬೆಲೆಯ ಮಾಡಿಸುವಿ

ಎಲ್ಲ ವಸ್ತುಗಳನಿದ್ದಲ್ಲೆ ತರಿಸುವಿ

ಕುಲಗೆಟ್ಟವರ ಸತ್ಕುಲಕೆ ಸೇರಿಸುವಿ

ಹೊಲೆಯನಾದರೂ ತಂದೊಳಗಿರಿಸುವಿ 1


ಅಂಗನೆಯರ ಸಂಗ ಅತಿಶಯದಿ ಮಾಡಿಸುವಿ

ಶೃಂಗಾರಾಭರಣಂಗಳ ಬೇಗ ತರಿಸುವಿ

ಮಂಗನಾದರೂ ಅನಂಗನೆಂದೆನಿಸುವಿ

ಕಂಗಳಿಲ್ಲದವಗೆ ಮಗಳ ಕೊಡಿಸುವಿ 2


ಚರಣಕ್ಕೆ ಬಂದಂಥ ದುರಿತವನು ಬಿಡಿಸುವಿ

ಸÀರುವರಿಗೆ ಶ್ರೇಷ್ಠನರನ ಮಾಡಿಸುವಿ

ಅರಿಯದ ಶುಂಠನ ಅರಿತವನೆನಿಸುವಿ

ಸಿರಿ ಹಯವದನನ ಸ್ಮರಣೆ ಮರೆಸುವಿ 3

***


No comments:

Post a Comment