ಸೋಮಾಸುರನೆಂಬ ಅಸುರನು
ಸಾಮಕವೇದವ ಒಯ್ಯಲು ಮಾ
ಸೋಮಾಸುರದೈತ್ಯನ ಕೊಂದು
ಸಾಮಕವೇದವ ತಂದನು ಮಾ ||೧||
ಗುಡ್ಡವು ಮುಳುಗಿ ಪೋಗಲು ನಮ್ಮ ದೇವ
ಗುಡ್ಡ ಬೆನ್ನೊಳಗಿತ್ತನು ಮಾ
ಗುಡ್ಡದಂಥ ದೈತ್ಯರನೆಲ್ಲ
ಅಡ್ಡ ಕೆಡಹಿ ಬಿಸುಟನು ಮಾ ||೨||
ಚಿನ್ನಗಣ್ಣಿನವನು ಬಂದು
ಕನ್ನೆ ಹೆಣ್ಣನೊಯ್ಯಲು ಮಾ
ವರ್ಣರೂಪವ ತಾಳಿದಸುರನ
ಛಿನ್ನಭಿನ್ನವ ಮಾಡಿದನು ಮಾ ||೩||
ಕಂಬದಿಂದಲಿ ಬಂದು ನಮ್ಮ ದೇವ
ಇಂಬಾದಸುರನ ಬಗಿದನು ಮಾ
ನಂಬಿದ ಪ್ರಹ್ಲಾದನ ಕಾಯ್ದ
ಅಂಬುಜನಾಭ ನೃಸಿಂಹನು ಮಾ ||೪||
ಮುರುಡನಾಗಿ ಬಂದು ನಮ್ಮ ದೇವ
ಬಲಿಯ ದಾನವ ಬೇಡಿದನು ಮಾ
ಇಳೆಯ ಈರಡಿಯ ಮಾಡಿ
ಬಲಿಯ ಪಾತಾಳಕ್ಕೊತ್ತಿದನು ಮಾ ||೫||
ಕೊಡಲಿಯನು ಪಿಡಿದು ನಮ್ಮ ದೇವ
ಕಡಿದ ಕ್ಷತ್ರಿಯರನು ಮಾ
ಹಡೆದ ತಾಯಿಯ ಶಿರವ ತರಿದು
ಪಡೆದನಾಕೆಯ ಪ್ರಾಣನು ಮಾ ||೬||
ಎಂಟು ಎರಡು ತಲೆಯ ಅಸುರನ
ಕಂಠವ ಛೇದಿಸಿ ಬಿಸುಟನು ಮಾ
ಒಂಟೀ ರೂಪವ ತಾಳಿದಸುರನ
ಗಂಟ ವಿಭೀಷಣಗಿತ್ತನು ಮಾ ||೭||
ಸೋಳಸಾಸಿರ ಗೋಪಿಯರೊಡನೆ
ಕೇಳಿಮೇಳದೊಳಿದ್ದನು ಮಾ
ಬಾಲಕನಾಗಿ ತನ್ನುದರದಲಿ
ಲೋಲ ಲಕ್ಷ್ಮಿಗರಸನು ಮಾ ||೮||
ಒಪ್ಪದಿಂದಲಿ ಬಂದು ನಮ್ಮ ದೇವ
ಇಪ್ಪ್ಪೆವನದೊಳಗಿಪ್ಪನು ಮಾ
ಸರ್ಪಶಯನನಾಗಿ ಪೋಗಿ
ತ್ರಿಪುರಸಂಹಾರ ಮಾಡಿದನು ಮಾ ||೯||
ಏನು ಮಾಯನು ಮಾಯನು ಮಾ ನಮ್ಮ ದೇವ
ಬಲ್ಲಿದ ಕಲ್ಕ್ಯಾವತಾರನು ಮಾ
ಇಳೆಯ ಸ್ವರ್ಗ ಪಾತಾಳಕ್ಕೊಡೆಯ
ಚೆಲುವ ಶ್ರೀ ಹಯವದನನು ಮಾ ||೧೦||
***
Somasuranemba asuranu
samakavedava oyyalu ma
somasuradaityana kondu
samakavedava tandanu ma ||1||
Guddavu mulugi pogalu namma deva
gudda bennolagittanu ma
guddadantha daityaranella
adda kedahi bisutanu ma ||2||
Chinnaganninavanu bandu
kanne hennanoyyalu ma
varnarupava talidasurana
chinnabhinnava madidanu ma ||3||
Kambadindali bandu namma deva
imbadasurana bagidanu ma
nambida prahladana kayda
ambujanabha nrusinhanu ma ||4||
Murudanagi bandu namma deva
baliya danava bedidanu ma
ileya iradiya madi
baliya patalakkottidanu ma ||5||
Kodaliyanu pididu namma deva
kadida kshatriyaranu ma
hadeda tayiya shirava taridu
padedanakeya prananu ma ||6||
Entu eradu taleya asurana
kanthava chedisi bisutanu ma
onti rupava talidasurana
ganta vibhishanagittanu ma ||7||
Solasasira gopiyarodane
kelimeladoliddanu ma
balakanagi tannudaradali
lola lakshmigarasanu ma ||8||
Oppadindali bandu namma deva
ipppevanadolagippanu ma
sarpashayananagi pogi
tripurasanhara madidanu ma ||9||
Enu mayanu mayanu ma namma deva
ballida kalkyavataranu ma
ileya svarga patalakkodeya
cheluva sri hayavadananu ma ||10||
***
ಸೋಮಾಸುರನೆಂಬ ಅಸುರನು
ಸಾಮಕವೇದವ ಒಯ್ಯಲು ಮಾ
ಸೋಮಾಸುರದೈತ್ಯನ ಕೊಂದು
ಸಾಮಕವೇದವ ತಂದನು ಮಾ 1
ಗುಡ್ಡವು ಮುಳುಗಿ ಪೋಗಲು ನಮ್ಮ ದೇವ
ಗುಡ್ಡ ಬೆನ್ನೊಳಗಿತ್ತನು ಮಾ
ಗುಡ್ಡದಂಥ ದೈತ್ಯರನೆಲ್ಲ
ಅಡ್ಡ ಕೆಡಹಿ ಬಿಸುಟನು ಮಾ 2
ಚಿ
ನ್ನಗಣ್ಣಿನವನು ಬಂದು
ಕನ್ನೆ ಹೆಣ್ಣನೊಯ್ಯಲು ಮಾ
ವರ್ಣರೂಪವ ತಾಳಿದಸುರನ
ಛಿನ್ನಭಿನ್ನವ ಮಾಡಿದನು ಮಾ 3
ಕಂಬದಿಂದಲಿ ಬಂದು ನಮ್ಮ ದೇವ
ಇಂಬಾದಸುರನ ಬಗಿದನು ಮಾ
ನಂಬಿದ ಪ್ರಹ್ಲಾದನ ಕಾಯ್ದ
ಅಂಬುಜನಾಭ ನೃಸಿಂಹನು ಮಾ 4
ಮುರುಡನಾಗಿ ಬಂದು ನಮ್ಮ ದೇವ
ಬಲಿಯ ದಾನವ ಬೇಡಿದನು ಮಾ
ಇಳೆಯ ಈರಡಿಯ ಮಾಡಿ
ಬಲಿಯ ಪಾತಾಳಕ್ಕೊತ್ತಿದನು ಮಾ 5
ಕೊಡಲಿಯನು ಪಿಡಿದು ನಮ್ಮ ದೇವ
ಕಡಿದ ಕ್ಷತಿಯರಾಯ (ಯರ?) ನು ಮಾ
ಹಡೆದ ತಾಯಿಯ ಶಿರವ ತರಿದು
ಪಡೆದನಾಕೆಯ ಪ್ರಾಣ(ಣವ?) ನು ಮಾ 6
ಎಂಟು ಎರಡು ತಲೆಯ ಅಸುರನ
ಕಂಠವ ಛೇದಿಸಿ ಬಿಸುಟನು ಮಾ
ಒಂಟೀ ರೂಪವ(?) ತಾಳಿದಸುರನ
ಗಂಟ ವಿಭೀಷಭಣಗಿತ್ತನು ಮಾ 7
ಸೋಳಸಾಸಿರ ಗೋಪಿಯರೊಡನೆ
ಕೇಳಿಮೇಳದೊಳಿದ್ದನು ಮಾ
ಬಾಲಕನಾಗಿ ತನ್ನುದರದಲಿ
ಲೋಲ ಲಕ್ಷ್ಮಿಗರಸನು ಮಾ 8
ಒಪ್ಪದಿಂದಲಿ ಬಂದು ನಮ್ಮ ದೇವ
ಇಪ್ಪ್ಪೆವನದೊಳಗಿಪ್ಪನು ಮಾ
ಸರ್ಪಶಯನನಾಗಿ ಪೋಗಿ
ತ್ರಿಪುರಸಂಹಾರ ಮಾಡಿದನು ಮಾ 9
ಏನು ಮಾಯನು ಮಾಯನು ಮಾ ನಮ್ಮ ದೇವ
ಬಲ್ಲಿದ ಕಲ್ಕ್ಯಾವತಾರನು ಮಾ
ಇಳೆಯ ಸ್ವರ್ಗ ಪಾತಾಳಕ್ಕೊಡೆಯ
ಚೆಲುವ ಶ್ರೀ ಹಯವದನನು ಮಾ 10
***
No comments:
Post a Comment