Saturday 11 December 2021

ಉಪ್ಪವಡಿಸಯ್ಯ ಉಡುಪಿನ ಕೃಷ್ಣ ಚೆಲ್ವ ಕಂದರ್ಪನಪ್ಪನೆ ankita hayavadana UPPAVADISAYYA UDUPINA KRISHNA CHELVA KANDARPANAPPANE



ಉಪ್ಪವಡಿಸಯ್ಯ ಉಡುಪಿನ ಕೃಷ್ಣ ಚೆಲ್ವಕಂ-

ದರ್ಪನಪ್ಪನೆ ಕಣ್ದೆರೆ ಪ.


ಸರ್ಪನಂಗದಲಿ ರುಕ್ಮಿಣಿ ಸತ್ಯಭಾಮೆಯರಅಪ್ಪಿಕೊಂಡಿಪ್ಪ ಬಲು ಸುಪ್ರಸಿದ್ಧಅಪ್ರತಿಮ ಗುಣಗಣಾಂಬುಧಿ ಕರುಣಾನಿಧಿಯೆಸುಪ್ರೇಮದಿಂದ ನೋಡಾ ದೇವ 1

ದೇಹಿಗಳ ನಿದ್ರೆಯನು ತಿಳುಹಿಸುವರಾರು ನಿ-ರ್ವಾಹಕನು ನೀನು ನಿದ್ರೆಯ ಕೈಕೊಳೆಆಹುತಿಗಳನುವಾದ ಅನಲಮುಖದಲಿ ನಿನಗೆಶ್ರೀಹರಿಯೆ ದುರಿತಾರಿಯೆ ದೇವ 2

ನಿದ್ರೆಯಂ ತೊರೆದು ಸಿದ್ಧಾಸನದಿ ಕುಳ್ಳಿರ್ದುಸಿದ್ಧರೆಲ್ಲರು ತಮ್ಮ ಹೃದಯಕಮಲಸದ್ಮವನು ಬೆಳಗಿ ನಿನ್ನನೆ ಅರಸುತೈದಾರೆಮುದ್ದುಮೊಗವನು ತೋರಿಸಾ ದೇವ 3

ಇನನುದಯಗಿರಿ ಪೀಠದಲಿ ಕುಳಿತು ಪದ್ಮಗಳಅನಯನ ನೇಮದಿ ಪಿಡಿದು ತಮವೋಡಿಸೆ ಅನುರಾಗಮಂ ತುಂಬಿ ಕರೆಯಕಳುಹಿದ ನಿನ್ನಮನೆಯ ಬಾಗಿಲೊಳರಸುತ್ತ ದೇವ 4

ಕಮಲಕೊಬ್ಬಿತು ಸೂರ್ಯನತಿ ಪೆರ್ಮೆಯಂ ಪೊತ್ತಕ್ರಮದಿಂದ ನಿನ್ನ ಪೂರ್ವಜಸೋಮನೊಭ್ರಮೆಗೊಂಡವನ ಪರಿವಾರಕಾಯಿತು ಸೋಲುಸುಮುಖಚಂದ್ರನೆ ಬೆಳಗಿಸಾ ದೇವ 5

ಅಮಲಜಲದಲ್ಲಿ ಮಜ್ಜನವ ಮಾಡುವೆನೆಂದುಕ್ರಮದಿಂದ ತೀರ್ಥಗಳು ಕರೆದು ನಿನ್ನ ರಮಣೀಯ ಮೂರುತಿಯ ಮನದಲ್ಲಿ ನಿಲಿಸುವಶ್ರಮವ ಸಾರ್ಥಕ ಮಾಡೊ ದೇವ 6

ಅತಿಶೀತ ಹರುಷದಿಂ ಪುಳಕ ಶೋಭಿತರಾಗಿಪ್ರತಿಕ್ಷಣದಿ ನಿನ್ನನೇ ನೆನೆದು ನೆನೆದುವ್ರತದಿಂದ ಪೇಳುವ ಶ್ರುತಿ ಪುರಾಣದೊಳಿಪ್ಪಸ್ತುತಿಯನಾಲೈಸಿ ಕೇಳಾ ದೇವ 7

ತನುವ ರಂಜಿಸಿ ಶಂಖ ಚಕ್ರೋಧ್ರ್ವಪುಂಡÀ್ರದಿಂಪ್ರಣಮಮಂ ಪೇಳಿ ಮಂತ್ರಿತ ವಾರಿಯಘನ ಮಹಿಮ ನಿನ್ನ ಹಸ್ತದಲಿ ತರ್ಪಣ ಮಾಡಲನುವಾದರಯ್ಯ ಬುಧರು 8

ಎನಲುಪ್ಪವಡಿಸಿ ಶ್ರೀಕೃಷ್ಣ ಹಯವದನ ತಂ-ಪಿನ ನಾಗಭೋಗ ವಿಸ್ತರದಿ ಕುಳಿತುವನಜಸಂಭವಸಹಿತ ವಿಬುಧರೊಡ್ಡೋಲಗದಿಮುನಿಗಳರ್ಚಿಸಿ ಮೆಚ್ಚಿಸೆ ದೇವ9

***


pallavi


P: uppavaDisayya uDupina kRuShNa celvakaM-|

darpanappane kaNdere ||pa||

sarpanaMgadali rukmiNi satyaBAmeyara |

appikoMDippa balu suprasiddha |

apratima guNagaNAMbudhi karuNAnidhiye |

suprEmadiMda nODA dEva ||1||

dEhigaLa nidreyanu tiLuhisuvarAru ni- |

rvAhakanu nInu nidreya kaikoLe |

AhutigaLanuvAda analamuKadali ninage |

SrIhariye duritAriye dEva ||2||

nidreyaM toredu siddhAsanadi kuLLirdu |

siddharellaru tamma hRudayakamala |

sadmavanu beLagi ninnane arasutaidAre |

muddu mogavanu tOrisO dEva ||3||

inanudayagiri pIThadali kuLitu padmagaLa|

Anayana nEmadi piDidu tamavODise |

anurAgamana tuMbi kareyakaLuhida ninna |

maneya bAgiloLarasutta dEva ||4||

kamalakobbitu sUryanati permeyaM potta |

karmadiMda ninna pUrvajasOmano |

BramegoMDavana parivArakAyitu sOla |

sumuKacaMdrane beLagisA dEva ||5||

amalajaladalli majjanava mADuveneMdu |

kramadiMda tIrthagaLu karedu ninna |

ramaNIya mUrutiya manadalli nilisuva |

Sramava sArthaka mADo dEva ||6||

ati SIta haruShadiM puLaka SOBitarAgi |

pratikShaNadi ninnanE nenedu nenedu |

vratadiMda pELuva Sruti purANadoLippa |

stutiyanAlaisi kELA dEva ||7||

tanuva raMjisi SaMKa cakrOrdhvapuMDhradiM |

praNavamaM pELi maMtrita vAriya |

Gana mahima ninna hastadali ta- |

rpaNa pADalanuvAdarayya budharu ||8||

enaluppavaDisi SrIkRuShNa hayavadana taM-|

pina nAgaBOga vistaradi kuLitu |

vanajasaMBavasahita vibudharoDDOlagadi |

munigaLarcisi meccise dEva

***



No comments:

Post a Comment