..
kruti by ವೀರನಾರಾಯಣ Veeranarayana
ನಿನ್ನ ದಿವ್ಯ ಸ್ವರೂಪವನು ಕಣ್ಣಿಲಿ ನೋಡಿಧನ್ಯನಾದೆನು ಇಂದು ಪನ್ನಗಶಯನ ಪ
ಚೆನ್ನ ಪಾದಂಗಳಲಿ ಚಿನ್ನದಾ ಕಡಗರುಳಿಹನ್ನೆರಡು ನಿರುಗೆಗಳ ಹೊನ್ನ ಪೀತಾಂಬರಕೆರನ್ನಮಯದೊಡ್ಯಾಣವನ್ನು ಸುತ್ತಿದ ನಡುವುಚನ್ನ ಪದಗಳ ಮುಟ್ಟುವನ್ನಕ್ಕ ವನಮಾಲೆ 1
ನನ್ನೀಯಿಂದೆಸೆವ ಕಂಪನ್ನ ಕೌಸ್ತುಭದೆದೆಯುಕನ್ನಿಕೆಯು ಲಕ್ಷುಮಿಯ ಚಿಹ್ನ ಧರಿಸಿದ ವಕ್ಷಘನ್ನ ಚಕ್ಕರ ಶಂಖ ಸನ್ನೆ ಕೌಮೋದಕಿಯುಕನ್ನೈದಿಲೆಯ ವಿಡಿದ ಇನ್ನಂತು ನಾಲ್ಕೈಯು 2
ಪನ್ನೀರು ಬೆರೆತು ಬಾವನ್ನ ಕಂಪಿನ ಮೈಯುಬೆನ್ನಗಲ ಹೆಗಲು ದುಂಡನ್ನ ತೊಳಗುವ ಕೊರಳುಕನ್ನವುರ ಕುಂಡಲಂಗಳನ್ನು ಧರಿಸಿದ ಕಿವಿಯುಜೊನ್ನ ಪಸರಿಪ ನಗೆಯ ಮನ್ನಿಸುವ ಕೆಂದುಟಿಯು 3
ಮುನ್ನೂರು ಕೋಟಿ ರವಿ ಸನ್ನಿಭದ ಚೆಲ್ವ ಮೊಗಕನ್ನೀಲ ಕಣ್ಣು ಚಂದನ್ನ ಎಳಸಿನ ಮೂಗುಉನ್ನತದ ಹಣೆಮೇಲೆ ಸೊನ್ನಿ ಕತ್ತುರಿ ತಿಲಕಸೊನ್ನ ಮುಕುಟವ ಧರಿಸಲಿನ್ನುಳಿದ ಕರಿಗುರುಳು 4
ಎನ್ನೆದುರು ನಿಂತಿರಲು ಚಿನ್ನುಮಯ ರೂಪನೆಕುನ್ನಿ ಮಾನವ ನಾನು ಇನ್ನೆಂತು ಬಣ್ಣಿಸುವೆನಿನ್ನ ಕೃಪೆಯಿಲ್ಲದಿದನೆನ್ನಲಪ್ಪುದೆ ದೇವಚನ್ನ ಗದುಗಿನ ವೀರನಾರಾಯಣನೆ ಮಣಿವೆ 5
***
No comments:
Post a Comment