..
ಗಂಧವಾಹನ ಮತವ ಪೊಂದವರು
ಹಂದಿನಾಯಿಗಳಾಗಿ ಬಹುಕಾಲ ಕಳೆದಂತೆ ಪ
ಇಳೆಯಾಣ್ಮನಿಲ್ಲದಾ ನಾಡು ಶೋಭಿಸದಂತೆ
ಜಲವಿಲ್ಲದಾ ವಾಪಿ ಕೂಪದಂತೆ
ನಳಿನ ಬಾಂಧವ ಮಿತ್ರನುದಯಿಸದ ದಿನದಂತೆ
ಕುಲಹೀನನಾದವರ ಸಂಗಮಾಡಿದಂತೆ 1
ಕೋಣನಾ ಸಮ್ಮುಖದಿ ವೀಣೆ ಬಾರಿಸಿದಂತೆ
ಜಾಣತನವಿಲ್ಲದಾಮಾತ್ಯನಂತೆ
ವಾನರನ ಕೈಯಲ್ಲಿ ಮಾಣಿಕವ ಕೊಟ್ಟಂತೆ 2
ಶಾಮಸುಂದರನಾಮ ವರ್ಣಿಸದÀ ಕವಿಯಂತೆ
ಪಾಮರಗೆ ಪೌರಾಣ ಪೇಳಿದಂತೆ
ಕಾಮಾದಿಗುಣ ಬಿಡದೆ ಸನ್ಯಾಸಿಯಾದಂತೆ
ಕೋಮಲಾಂಗದ ಸತಿಗೆ ಕ್ಲೀಬ ದೊರಕಿದಂತೆ 3
***
No comments:
Post a Comment