..
ಗುರುಗಳ ಭಜಿಸೋ | ದುರಿತ ತ್ಯಜಿಸೋ |
ವರ ಮಾನವಿ ಪುರದಿ ಮೆರೆವ ಪ
ಆದಿಯಲ್ಲಿ ಪ್ರಹ್ಲಾದನ ಸಹೋದರನೀತ |
ಯೋಧ ಶಲ್ಯ ದ್ವಾಪರದಿ ರಾಧೇಯಗೆ ಸೂತ |
ವಾದಿರಾಜ ಪುರಂದರ ದಾಸಾರ್ಯರ ಪ್ರೀತ |
ಸಾಧುರಂಗವೊಲಿದ ಭಾಗವತರತಿ ಖ್ಯಾತ 1
ತ್ವರವಾಟದಿ ಕರುಣಿಕ ನರಸಾರ್ಯರಪುತ್ರ |
ಧರೆಸುರ ಪರಿಪಾಲಕ ವರದೇಂದ್ರ ಛಾತ್ರ
ತುರ ರಕ್ಷಕ ದಾಸರಾಯರ ಕರುಣಕೆ ಪಾತ್ರ
ದುರಿತಾಟವಿ ವೀತಿ ಹೋತ್ರ ಘನ ಸುಚರಿತ್ರ 2
ಸೀಮದಿಂದ ಭಜಿಸುವರ ಕಾಮಿತ ಫಲವಾ |
ಪ್ರೇಮದಿಂದ ಗರೆಯಲು ಸ್ತಂಭ ದೊಳಿರುವಾ ||
ಶಾಮಸುಂದರ ಸ್ವಾಮಿಯ ಕಥೆಪೀಯೂಷರಸವ |
ಭೂಮಿ ವಿಬುಧ ಸ್ತೋಮಕೆರೆದ ಮಹಾನುಭಾವ 3
***
No comments:
Post a Comment