..
kruti by radhabai
ಕೂಸನು ಕಂಡೀರ್ಯಾ ನಮ್ಮ ಕೂಸನು ಕಂಡೀರ್ಯಾ ಪ
ಹತ್ತಾವತಾರದಿ ಭಕ್ತರ ಸಲಹುವ ಚಿತ್ತಜನೈಯ್ಯ
ಶ್ರೀಕೃಷ್ಣನ ಸೇವಿಪ ಅ.ಪ.
ಭೂಮಂಡಲವೆಲ್ಲಾ ತಿರುಗಿ ಬಂದಿಹ ಕೂಸು ದಂಡಕ
ಮಂಡಲ ಪಿಡಿದಿಹ ಕೂಸು
ಬಂದ ಬಂದವರ ಅಭೀಷ್ಟಸಲಿಸುತ ಮಂದಹಾಸದಿ
ನಗುತಿಹ ಕೂಸು1
ತುಂಗಾ ತಡಿಯಿಲ್ಲಿ ಬಂದಿಹ ಕೂಸು ಕಂಡ ಕಂಡಲ್ಲಿ
ಕರೆದರೆ ಬರುವಂಥ ಕೂಸು
ಕಾರುಣ್ಯನಿಧಿ ನಮ್ಮ ಗುರುರಾಜರೆಂಬ ಕೂಸು 2
ಬೇಡಿದವರಗಳ ಬಿಡದೆ ನೀಡುತಲಿ ಭಕ್ತ ಕೋಟಿಗೆ ರವಿ
ಕಿರಣದಂತ್ಹೊಳೆಯುತ
ಮುಕ್ತಿ ಮಾರ್ಗಕೆ ದಾರಿ ತೋರಿಸಿತಿರುವಂಥ
ಭಕ್ತಶಿರೋಮಣಿ ಶ್ರೀ ರಾಘವೇಂದ್ರರೆಂಬೊ ಕೂಸು3
***
No comments:
Post a Comment