Thursday, 5 August 2021

ಶ್ರೀಪಾದರಾಜಗುರು ಸಾರ್ವ sripadaraja charitrev ಶ್ರೀಪಾದರಾಜರ ಚರಿತೆ ankita prasannashreenivasa sripadaraja stutih

 ..


kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಶ್ರೀಪಾದರಾಜರ ಅಣು ಚರಿತೆ


ಪ್ರಥಮ ಕೀರ್ತನೆ

ಶ್ರೀ ಪಾದರಾಜಗುರು ಸಾರ್ವಭೌಮರ ಪಾದ

ನಾಪೊಂದಿ ಶರಣಾದೆ ಎಮ್ಮ ಪಾಲಿಪರು

ಶ್ರೀಪ ನರಹರಿ ಶಿಂಶುಮಾರ ಹಯಮುಖರಾಮ

ಗೋಪಿವಲ್ಲಭ ರಂಗ ಒಲಿದಿಹ ಮಹಂತ ಪ


ಶ್ರೀ ಹಂಸ ಲಕ್ಷ್ಮೀಶನಾಭಿ ಭವ ಸನಕಾದಿ

ಮಹಂತ ದೂರ್ವಾಸಾದಿಗಳ ಗುರು ಪರಂಪರೆಯ

ಮಹಾಪುರುಷೋತ್ತಮ ದಾಸ ಶ್ರೀ ಮಧ್ವವನ -

ರುಹ ಪಾದಗಳಲಿನಾ ಶರಣು ಶರಣಾದೆ 1

ಕಲಿಯುಗದಿ ಸಜ್ಜನರು ದುರ್ಜನರ ದುಸ್ತರ್ಕ

ಕಲುಷವಾದಗಳಲ್ಲಿ ಮನಸೋತು ಪೋಗೆ

ಳಾಳುಕನ ಪರಮಪ್ರಸಾದ ಹೊಂದುವ ಜ್ಞಾನ

ಇಳೆಯಲಿ ಮಧ್ವ ಬೋಧಿಸಿದ ಅವತರಿಸಿ 2

ಭಾರತೀಪತಿ ವಾಯು ಭಾವಿ ಬ್ರಹ್ಮನೇ ಮಧ್ವ

ಹರಿ ಆಜÉ್ಞಯಲಿ ಸುಜನರನುದ್ದರಿಸೆ ಜನಿಸಿ

ಪರಮ ಸತ್ತತ್ವವಾದ ಅರುಪಿ ಬದರಿಗೆ

ತೆರಳಿದನು ತತ್‍ಪೂರ್ವ ಶಿಷ್ಯರ ನೇಮಿಸಿದ್ದ 3

ವೈದಿಕ ಸದಾಗಮದಿ ಬೋಧಿತ ತಾತ್ವಿಕ

ದ್ವೈತ ಸಿದ್ಧಾಂತದ ಆದಿಗುರು ಮಧ್ವ

ಬದರಿಗೆ ತೆರಳಲು ಶ್ರೀ ಪದ್ಮನಾಭ -

ತೀರ್ಥರಾರೋಹಿಸಿದರು ಮಧ್ವಮಠ ಪೀಠ 4

ಈ ಆದಿಮಠ ಗುರು ಪರಂಪರೆಯು ನರಹರಿ

ತೀರ್ಥ ಮಾಧವತೀರ್ಥ ಅಕ್ಷೋಭ್ಯ ತೀರ್ಥ

ಮಾಧ್ವಗ್ರಂಥಗಳಿಗೆ ಟೀಕೆಯ ಬರೆದಿರುವ

ಜಗತ್‍ಪ್ರಖ್ಯಾತ ಜಯತೀರ್ಥ ಸಾಧು ಮುನಿವರ್ಯ 5

ವಿದ್ಯಾಧಿರಾಜರು ಜಯತೀರ್ಥಜಾತರು

ವರ್ಧಿಸಿದರು ಈ ಆದಿ ಮಠವನ್ನ

ಆದಿಮಠ ಭಿನ್ನಾಂಶ ಮಠಗಳು ಪಂಕಜನಾಭ

ಮಾಧವಾಕ್ಷೋಭ್ಯರಿಂ ಪುಟ್ಟಿ ಇಹುದು 6

ಪದುಮನಾಭಾದಿ ಈ ಸರ್ವ ಗುರುಗಳಿಗೆ ನಾ

ಆದರದಿ ಶರಣಾದೆ ಸಂತೈಪರೆಮ್ಮ

ಪದುಮನಾಭರು ತಾವೇ ಸ್ಥಾಪಿಸಿದ ಮಠದಲ್ಲಿ

ಮೊದಲನೇಯವರು ಶ್ರೀ ಲಕ್ಷ್ಮೀಧರರು 7

ಶ್ರೀ ಲಕ್ಷ್ಮೀಧರ ತೀರ್ಥ ಸೂರಿಗಳ ವಂಶಜರು

ಮಾಲೋಲ ಶ್ರೀರಂಗನಾಥನ ಪ್ರಿಯ

ಶೀಲ ಯತಿವರ ಸ್ವರ್ಣವರ್ಣತೀರ್ಥರು ಅವರ

ಜಲಜಕರಜಾತ ಶ್ರೀಪಾದರಾಜಾರ್ಯ 8

ಶ್ರೀಲಕ್ಷ್ಮೀಧರ ತೀರ್ಥ ಮೊದಲಾದ ಸರ್ವರ

ಕಾಲಿಗೆ ಎರಗುವೆ ಕರುಣಾಶಾಲಿಗಳು

ಶ್ರೀ ಲಕ್ಷ್ಮೀನಾರಾಯಣಾರ್ಯರ ಪ್ರಭಾವವು

ಬಲ್ಲನೆ ನಾನು ವರ್ಣಿಸಲು ಘನತರವು 9

ಯತಿರಾಜರಿವರ ಮಹಿಮೆ ಬಹು ಬಹು ಬಹಳ

ವೇದ್ಯ ಎನಗೆ ಅತಿ ಸ್ವಲ್ಪವೇವೇ

ಅದರಲ್ಲೂ ಬಿಟ್ಟಿದ್ದು ಇಲ್ಲಿ ಪೇಳಿಹುದು

ಅತಿಕಿಂಚಿತ್ ಅಣುಮಾತ್ರ ಸುಜನರು ಆಲಿಪುದು 10

ಕನ್ನಡ ಪ್ರದೇಶದಲಿ ಮಹಿಸೂರು ರಾಜ್ಯದಲಿ

ಚೆನ್ನಪಟ್ಟಣಕೆರಡು ಕ್ರೋಶದೊಳಗೇವೇ

ಸಣ್ಣ ಗ್ರಾಮವು ಅಬ್ಬೂರು ಎಂಬುದುಂಟು

ಕಣ್ವತೀರ್ಥಾಭಿಧ ಪುಣ್ಯನದೀತೀರ 11

ವಿದ್ಯಾಧಿರಾಜರ ಕರಕಮಲೋತ್ಪನ್ನರು

ವೇದ ವೇದಾಂತ ಕೋವಿದರುಗಳು ಈರ್ವರು

ವಿದ್ಯಾಧಿರಾಜ ಈರ್ವರಲಿ ಪೂರ್ವಜರು

ವಾದಿಗಜ ಸಿಂಹ ರಾಜೇಂದ್ರ ಯತಿವರರು 12

ರಾಜೇಂದ್ರ ತೀರ್ಥಜ ಜಯಧ್ವಜರ ಹಸ್ತ

ಕಂಜ ಸಂಜಾತ ಪುರುಷೋತ್ತಮ ತೀರ್ಥರು

ರಾಜರಾಜೇಶ್ವರ ಪಟ್ಟಾಭಿರಾಮನ್ನ

ಪೂಜಿಸುತ ಇದ್ದರು ಅಬ್ಬೂರಿನಲ್ಲಿ 13

ಪುರುಷೋತ್ತಮಾರ್ಯರ ಮಹಿಮೆ ನರರಿಂದ

ಅರಿವುದಕೆ ಸಾಕಲ್ಯ ಶಕ್ಯವು ಅಲ್ಲ

ಶಿರಿವರನ ಪೂರ್ಣಾನುಗ್ರಹಕೆ ಪೂರ್ಣ

ಪಾತ್ರರಾಗಿಹ ಈ ಕರುಣಿಗೆ ಶರಣು 14

ಘೃಣಿ ಸೂರ್ಯ ಆದಿತ್ಯ ತೇಜಸ್ಸಲಿ ಬೆಳಗುವ

ವಿನಯ ಸಂಪನ್ನ ಸುಬುದ್ಧಿಮಾನ್ ಬಾಲನ್ನ

ತನ್ನ ಬಳಿ ಕರೆತರಿಸಿ ಬ್ರಹ್ಮಣ್ಯ ತೀರ್ಥಾಖ್ಯ

ಅನಘ ನಾಮವನಿತ್ತು ಪ್ರಣವ ಉಪದೇಶಿಸಿದರು 15

ವಾಜಿ ವಕ್ತ್ರನು ನರಸಿಂಹ ವಿಠಲನು

ಯಜ್ಞ ವರಾಹ ಶ್ರೀರಾಮ ಯದುಪತಿಯ

ಪೂಜಿಸುವ ಬಗ್ಗೆ ಮತ್ತೂಬ್ರಹ್ಮ ವಿದ್ಯಾ ಮಧ್ವ

ಸಚ್ಛಾಸ್ತ್ರ ಬೋಧಿಸುತ್ತಿಹರು ಬ್ರಹ್ಮಣ್ಯರ್ಗೆ 16

ಪುರುಷೋತ್ತಮರನ್ನ ಕಾಣಲು ಅಬ್ಬೂರನ್ನ

ಕುರಿತು ಬರುತಿಹರು ಸ್ವರ್ಣವರ್ಣ

ತೀರ್ಥರು ಆಗ ಸಾಯಂಕಾಲ ಇನ್ನೆಷ್ಟು

ದೂರವೋ ಎಂದು ಶಂಕಿಸಿದರು ಮನದಿ 17

ಮಾರ್ಗದಲಿ ದನಗಳ ಮೇಸುವ ಬಾಲಕರೊಳು

ಅಕಳಂಕ ವರ್ಚಸ್ವಿ ಹುಡುಗ ಓರ್ವನ್ನ

ತಾ ಕಂಡು ಪಲ್ಲಕ್ಕಿ ನಿಲ್ಲಿಸಿ ಕೇಳಿದರು

ಶ್ರೀಗಳು ಗ್ರಾಮಕ್ಕೆ ದೂರ ಎಷ್ಟೆಂದು 18

ಅಹಸ್ಪ್ರಾಂತ ಗಗನಸ್ಥಸೂರ್ಯನ್ನ ನೋಡಿ

ಬಹು ಸಣ್ಣ ವಯಸ್ಸಿನ ಎನ್ನನ್ನು ನೋಡಿ

ಅಹಂ ಮಾ ಎಂದು ಕೂಗೋ ಧೇನುಗಳ ನೋಡಿ

ಬಹು ಸಮೀಪವು ಗ್ರಾಮ ಎಂದು ಸೂಚಿಸಿದ 19

ಕುಶಾಗ್ರ ಬುದ್ಧಿಯ ಸೂಕ್ಷ್ಮತ್ವವ ನೋಡಿ

ಆ ಸ್ವಾಮಿಗಳಿಗೇ ಈ ಹುಡುಗ ಯಾರೆಂದು

ಭಾಸವಾಗಿ ಲೋಕರೀತಿಯಲಿ ಕೇಳಿದರು

ಹೆಸರು ಏನು ಯಾರ ಮಗ ಮನೆ ಎಲ್ಲಿ 20

ನಮಿಸಿ ಸ್ವಾಮಿಗಳಿಗೆ ಕರಮುಗಿದು ಪೇಳಿದ

ಅಮ್ಮಗಿರಿಯಮ್ಮನು ತಂದೆಯು ಶೇಷಗಿರಿ

ಲಕ್ಷ್ಮೀನಾರಾಯಣಾಭಿದನು ತಾನೆಂದು

ಸಮೀಪಸ್ಥ ಹೊಲದಲ್ಲಿ ಮನೆಯ ತೋರಿಸಿದ 21

ಕ್ರಮದಿ ಬರೆ ಓದು ವಿದ್ಯೆ ಕಲಿಯದಿದ್ದರೂ

ಸೂಕ್ಮ ಬುದ್ಧಿ ದೇಹಕಾಂತಿ ಮುಖ ವರ್ಚಸ್ಸ

ಸುಮಹಾ ಪೂರ್ವಸಾಧನದಿ ಎಂದರಿತರು

ಈ ಮಹಾ ಸೂರಿವರ್ಯರು ಶ್ರೀಸ್ವಾಮಿಗಳು 22

ಅಬ್ಬೂರು ಸೇರಿ ಪುರುಷೋತ್ತಮರ ಕೈಯಿಂದ

ಉಪಚಾರಗಳನ್ನು ಕೊಂಡು ಬಾಲ

ತಪೋನಿಧಿ ಬ್ರಹ್ಮಣ್ಯರ ಕಂಡು ಅವರಂತೆ

ಒಬ್ಬ ಬಾಲನು ತಮಗೂ ಬೇಕೆಂದರು 23

ತಥಾಸ್ತು ಎನ್ನುತಲಿ ಪುರುಷೋತ್ತಮರ

ತಂದೆ ತಾಯಿಗಳನ್ನು ಕರೆತರಿಸಿ ಬೇಗ

ಮುದದಿ ಮಾಡಿದರು ಲಕ್ಷ್ಮೀನಾರಾಯಣಗೆ

ವೇದಾಧಿಕಾರ ಬರುವಂಥ ಉಪನಯನ 24

ಬಹ್ಮೋಪದೇಶಾದಿ ಮಂತ್ರೋಪದೇಶಗಳು

ವಿಹಿತ ರೀತಿಯಲ್ಲಿ ಆದ ತರುವಾಯ

ಬ್ರಹ್ಮಚಾರಿ ಆ ಬಾಲಕನಿಗೆ ಸಂನ್ಯಾಸ

ಮಹಾ ಪ್ರಣವ ಉಪದೇಶ ಕೊಟ್ಟರು ಗುರುವು 25

ಗುರು ಸ್ವರ್ಣವರ್ಣ ತೀರ್ಥರು ವಾತ್ಸಲ್ಯವ

ಎರೆಯುತ್ತ ಲಕ್ಷ್ಮೀನಾರಾಯಣ ತೀರ್ಥ

ಆಶ್ರಮೋಚಿತ ನಾಮ ಕೊಟ್ಟು ಬಾಲನ್ನ

ಸೇರಿಸಿಕೊಂಡರು ತಮ್ಮ ಪರಂಪರೇಲಿ 26

ಹಿಂದೆ ಶೇಷಗಿರಿಯಪ್ಪ ಗಿರಿಯಮ್ಮ ದಂಪತಿಯ

ಕಂದನು ದನ ಮೇಸೋ ಲಕ್ಷ್ಮೀನಾರಾಯಣ

ಇಂದು ಲಕ್ಷ್ಮೀನಾರಾಯಣ ತೀರ್ಥರಾಗಿ

ವೇದಾಂತ ಸಾಮ್ರ್ರಾಜ್ಯ ಯುವರಾಜನಾದ 27

ವಿದ್ಯಾಧಿ ರಾಜ ರಾಜೇಂದ್ರ ಜಯಧ್ವಜ ಪುರು -

ಷೋತ್ತಮ ಬ್ರಹ್ಮಣ್ಯರಿಗೆ ನಮೋ ಲಕ್ಷ್ಮೀ

ಧರಾದಿ ಗುರುಗಳಿಗೂ ಸುವರ್ಣವರ್ಣರಿಗೂ

ಸದಾ ನಮೋ ಲಕ್ಷ್ಮಿನಾರಾಯಣ ತೀರ್ಥರಿಗೂ 28

ರಾಜೀವ ಭವ ಪಿತ ರಾಜರಾಜೇಶ್ವರನು

ರಾಜೀವಾಲಯ ಪತಿಯ ಪ್ರಸನ್ನ ಶ್ರೀನಿವಾಸ

ಪ್ರಜ್ವಲಿಸುತಿಹ ಮಧ್ವರಾಜ ಸಹ ಶ್ರೀಪಾದ

ರಾಜರೊಳು ಇವರಲ್ಲಿ ಶರಣು ಶರನಾದೆ29 ಪ

-ಪ್ರಥಮ ಕೀರ್ತನೆ ಸಂಪೂರ್ಣಂ-

***


ದ್ವಿತೀಯ ಕೀರ್ತನೆ

ಶ್ರೀ ಪಾದರಾಜಗುರು ಸಾರ್ವಭೌಮರ ಪಾದ

ನಾಪÉÇಂದಿ ಶರಣಾದೆ ಎಮ್ಮ ಪಾಲಿಪರು

ಶ್ರೀಪ ನರಹರಿ ಶಿಂಶುಮಾರ ಹಯಮುಖರಾಮ

ಗೋಪೀವಲ್ಲಭ ರಂಗ ಒಲಿದಿಹ ಮಹಂತ ಪ


ಸ್ವರ್ಣವರ್ಣರೂ ಲಕ್ಷ್ಮೀನಾರಾಯಣರಿಗೆ

ಆಮ್ನಾಯ ನಿಗಮಾಂತ ವಿದ್ಯೆಗಳ ಕಲಿಸೆ

ಘನ ಮಹಾಪಾಂಡಿತ್ಯ ಪ್ರೌಢಿಮೆಯನು ಹೊಂದಿ

ಸಣ್ಣ ಯತಿ ಪ್ರಖ್ಯಾತರಾದರು ಜಗದಿ 1

ವಿಭುದೇಂದ್ರ ರಘುನಾಥ ಮೊದಲಾದ ಯತಿವರರು

ಈ ಬಾಲಯತಿಯ ಪಾಂಡಿತ್ಯ ಪ್ರಭಾವವ

ಬಹು ಬಹು ಶ್ಲಾಘಿಸಿ ರಘುನಾಥರಿವರಿನ್ನ

'ಶ್ರೀಪಾದ ರಾಜರು’ ಎಂದು ವರ್ಣಿಸಿದರು 2

ಅಂದಿನಾರಭ್ಯ ಈ ಲಕ್ಷ್ಮೀ ನಾರಾಯಣರ

ಮಂದಿಗಳು ವಿದ್ವಜ್ಜನರು ಸಜ್ಜನರು

'ಆನಂದ ಉತ್ಸಾಹದಿ ಶ್ರೀಪಾದರಾಜ’

ರೆಂದು ಕರೆಯುವುದು ಅದ್ಯಾಪಿ ಕಾಣುತಿದೆ 3

ರಂಗಕ್ಷೇತ್ರಕೆ ಬಂದು ಶ್ರೀ ಪಾದರಾಜ ಸಹ

ರಂಗನಾಥನ್ನ ಕಂಡು ಸ್ಥಾಪಿಸಿ ಮಠವ

ಭಂಗವಿಲ್ಲದೇ ಪೂಜಾ ಪ್ರವಚನವ ಗೈಯುತ್ತ

ತುಂಗಯತಿ ಸ್ವರ್ಣವರ್ಣರು ಕುಳಿತರಲ್ಲೇ 4

ವರುಷಗಳು ಜರಗಿತು ಶ್ರೀಪಾದರಾಜರು

ಊರು ಊರಿಗೆ ದಿಗ್ವಿಜಯವ ಮಾಡುತ್ತ

ಪರ ಪಕ್ಷ ಕುಮತಗಳ ಛೇದಿಸಿ ಸತ್ತತ್ವ

ಆರುಪಿದರು ಯೋಗ್ಯಾಧಿಕಾರಿಗಳಿಗೆ 5

ಮುಳಬಾಗಿಲು ಎಂದು ಆಧುನಿಕರು ಕರೆವಂಥ

ಒಳ್ಳೇ ಕ್ಷೇತ್ರಕ್ಕೆ ಬಂದು ಮಠದಲ್ಲಿ ಇರುತ್ತ

ಬಾಲಕರು ವೃದ್ಧರು ಯತಿಗಳಿಗೂ ಸದ್ವಿದ್ಯಾ

ಕಲಿಸುತ್ತಿದ್ದರು ತಾವೇ ಪಾಠ ಹೇಳುತ್ತಾ 6

ಮುಳಬಾಗಿಲು ಕ್ಷೇತ್ರದಲ್ಲಿ ಹನುಮಂತ

ಶ್ರೀ ಲಕ್ಷ್ಮೀಪತಿಯನ್ನು ಸೇವಿಸುತ ಇಹನು

ಬಾಲೇಂದು ಶೇಖರನು ಗಿರಿಜಾ ಸಮೇತ

ಶೈಲ ತೋಟಗದ್ದೆ ಅಟವಿಗಳು ಇಹವು 7

ಊರಿಗೆ ಕ್ರೋಶ ಮಾತ್ರದಿ ಇರುವ ಸ್ಥಳದಲಿ

ವರ ಮಧ್ವಸಿದ್ಧಾಂತ ಜಯ ಶಿಲಾ ಲಿಖಿತ

ಇರುವುದು ಅದ್ಯಾಪಿ ಕಾಣ ಬಹುದು ಅಲ್ಲೇ

ಭಾರಿತರ ವಾದವು ನಡೆಯಿತು ಹಿಂದೆ 8

ಶ್ವೇತಕೇತು ಉದ್ದಾಲಕರ ಸಂವಾದ

ತತ್ವಮಸಿ ವಾಕ್ಯವೇ ವಾದ ವಿಷಯ

ವಾದಿಸಿದರು ವಿದ್ಯಾರಣ್ಯ ಅಕ್ಷೋಭ್ಯರು

ವೇದಾಂತ ದೇಶಿಕರ ಮಧ್ಯಸ್ಥ ತೀರ್ಮಾನ 9

ಛಾಂದೋಗ್ಯ ಉಪನಿಷತ್ತಲಿರುವ ವಾಕ್ಯ

ಸ ಆತ್ಮಾ ತತ್ವಮಸಿ ಎಂಬುವಂಥಾದ್ದು

ಭೇದ ಬೋಧಕವೋ ಅಭೇದ ಬೋಧಕವೋ

ಎಂದು ವಾದವು ಆ ಈರ್ವರಲ್ಲಿ 10

ಆತ್ಮ ಶಬ್ದಿತ ನಿಯಾಮಕಗೂ ನಿಯಮ್ಯ ಜೀವನಿಗೂ

ಭೇದವೇ ಬೋಧಿಸುವುದು ಆ ವಾಕ್ಯವೆಂದು

ಸಿದ್ಧಾಂತ ಅಕ್ಷೋಭ್ಯರು ಸ್ಥಾಪಿಸಿದರು

ಸೋತಿತು ವಿದ್ಯಾರಣ್ಯರ ಐಕ್ಯವಾದ 11

ಮಧ್ಯಸ್ಥರಾಗಿದ್ದ ವೇದಾಂತ ದೇಶಿಕರು

ವಿದ್ಯಾರಣ್ಯ ಎಂಬುವ ಮಹಾರಣ್ಯವ

ತತ್ವಮಸಿ ಅಸಿಯಿಂದ ಅಕ್ಷೋಭ್ಯರು

ಛೇದಿಸಿದರೆಂದು ಬರೆದಿಹರು ತಮ್ಮ ಗ್ರಂಥದಲಿ 12

ಶ್ರೀಪಾದರಾಜರ ಮಠವು ಆ ಸ್ಥಳಕೆ

ಸಮೀಪವೇ ಅಲ್ಲುಂಟು ನರಸಿಂಹ ತೀರ್ಥ

ಸುಪವಿತ್ರತ್ರ್ಯೆ ಲೋಕ್ಯಪಾವನೆಗಂಗಾ

ಸುಪ್ರಸನ್ನಳು ಇಲ್ಲಿ ತೋರಿಹಳು ಸ್ಮರಿಸೇ 13

ದಿಗ್ವಿಜಯ ಕ್ರಮದಲ್ಲಿ ಕಾಶೀ ಪಂಢರೀಪುರ

ಮುಖ್ಯ ಕ್ಷೇತ್ರಗಳಿಗೆ ಪೋಗಿ ಅಲ್ಲಲ್ಲಿ

ಭಗವಂತ ಶ್ರೀಪತಿಯ ಒಲಿಸಿಕೊಳ್ಳುವ ಮಾರ್ಗ

ಭಾಗವತ ಧರ್ಮ ಸಚ್ಛಾಸ್ತ್ರ ಬೋಧಿಸಿದರು 14

ಅಲ್ಲಲ್ಲಿ ವಾದಿಸಿ ದುರ್ವಾದಿ ಕುಮತಿಗಳ

ಸುಳ್ಳು ಸೊಲ್ಲುಗಳನ್ನು ಬಳ್ಳಿಗಳ ತೆರದಿ

ಸೀಳಿ ಛೇದಿಸಿ ಸ್ಥಾಪಿಸಿದರು ಮಧ್ವಮತ

ಶೀಲತ್ವ ಔನ್ನತ್ಯ ವೇದ ಸನ್ನತಿಯ 15

ಅಬ್ಬೂರಲ್ಲಿ ಶ್ರೀ ಸ್ವರ್ಣವರ್ಣ ತೀರ್ಥರು

ಶ್ರೀ ಪುರುಷೋತ್ತಮ ತೀರ್ಥರ ಕೈಯಿಂದ

ಸುಪ್ರೌಢ ಪಾಂಡಿತ್ಯ ಹೊಂದಿ ಪೀಠವ ಏರಿ

ಪರಿಪಾಲಿಸುತ್ತಿದ್ದರು ಯತಿ ಧರ್ಮ 16

ಮಹಾಮಹಿಮ ಶ್ರೀ ಪರುಷೋತ್ತಮರು ತಮ್ಮಯ

ಗುಹೆಯೊಳು ಕುಳಿತರು ಏಕಾಗ್ರ ಚಿತ್ತದಲಿ

ಮಹಾರ್ಹ ಕೇಶವನ ಆರಾಧಿಸುತಿಹರು

ಬಾಹ್ಯ ಜನರ ಸಂಪರ್ಕವಿಲ್ಲದಲೇ 17

ಬ್ರಹ್ಮಣ್ಯ ತೀರ್ಥರು ಉದಾರ ಕರುಣಿಗಳು

ಬ್ರಾಹ್ಮಣ ಶ್ರೇಷ್ಠನ್ನ ಬದುಕಿಸಿ ಅವನ

ಗೃಹಿಣಿಗೆ ಮಾಂಗಲ್ಯ ಭಾಗ್ಯ ವರ್ಧಿಸಿ

ಮಹಾತ್ಮ ಪುತ್ರನ ಹಡೆಯೆ ವರ ನೀಡಿದರು 18

ತಮಗೆ ಆ ಮಗುವನ್ನು ಕೊಡಬೇಕು ಎಂದು

ಬ್ರಹ್ಮಣ್ಯರು ಪೇಳಿದ್ದ ಅನುಸರಿಸಿ

ಆ ಮಗುವ ದಂಪತಿಗಳ್ ನೀಡೆ ಶಿಶುವು

ಶ್ರೀ ಮಠದಿ ಬೆಳೆಯಿತು ಗುರುಗಳ ಪಾಲನದಿ 19

ಶ್ರೀ ಹರಿಗೆ ಅಭಿಷೀಕ್ತ ಹಾಲುಂಡು ಶಿಶು ಬೆಳೆದು

ಶ್ರೀ ಹರಿ ನೈವೇದ್ಯದಿಂ ವರ್ಧಿಸಿ ಬಾಲ

ವಿಹಿತ ವಯಸ್ಸಲ್ಲೇವೇ ಉಪನಯನವು ಆಗಿ

(incomplete)

***


No comments:

Post a Comment