..
kruti by radhabai
ಕರುಣದಿ ಕಾಯಬೇಕೆನ್ನಾ ನೀಪರಮದಯಾಳು
ವೆಂದೆನುತ ಬಂದೆನು ನಾ ಪ
ಬಂದಾ ಬಂದಜನಕಾನಂದ ಕೊಡುತಲಿ
ಬೃಂದಾವನ ದೊಳು ಬಂದು ನಿಂದಿರುವೇ
ವಂದಿಸಿ ಭಜಿಪರಘಂಗಳ ಕಳೆದು
ಸಲಹುವಿಯೋ ಸದ್ಗುರು ರಾಘವೇಂದ್ರಾ 1
ಭೂತÀ ಪ್ರೇತಗಳಿಂದ ಬಾಧೆ ಪಡುವಜನ
ಭೀತರಾಗುತ ನಿನ್ನಡಿಗಳ ಸೇವಿಸಲು
ಆದರದಿಂದಲವರ ಭವ-ಭಯವ ಪರಿಹರಿಸಿ
ಸಲಹಿ ಉದ್ಧರಿಸುವೆ ಗುರುರಾಘವೇಂದ್ರಾ 2
ದುಷ್ಟ ಜನರು ಕೂಡಿ ಕೆಟ್ಟಯೋಚನೆ ಮಾಡಿ
ಗುಟ್ಟಾಗಿ ನಿಮ್ಮ ಪರೀಕ್ಷಿಸ ಬೇಕೆಂಧು
ಜೀವ ವಿದ್ದವನ ನಿರ್ಜೀವನೆನುತ ತರಲು
ಸತ್ಯದಿ ನಿರ್ಜೀವನನ್ನಾಗಿ ಮಾಡಿದೆ ಪ್ರಭವೆ 3
ಕುಹಕಿ ಜನರು ಎಲ್ಲಿ ವನಕೆತುಂಡನು ತಂದು
ಚಿಗುರಿಸ ಬೇಕೆನುತಲಿ ಕೇಳಲು
ಕಮುಂಡದೊಳಿದ್ದ ದಿವ್ಯೋದಕ ಪ್ರೋಕ್ಷಿಸಿ
ಚಿಗುರಿಸಿ ಫಲ ಮಾಡ್ದೆ ಅದ್ಭುತ ಮಹಿಮಾ 4
ಮಾವಿನರಸದೊಳು ಮುಳುಗಿ ಮೃತನಾದಾ
ಬಾಲಕನಿಗೆ ಪ್ರಾಣಗಳನಿತ್ತೆ ದಯದೀ
ಭುವಿಯೊಳು ನಿಮ್ಮ ಮಹಿಮೆಗೆಣೆಕಾಣೆ
ಮಂತ್ರಾಲಯದೊರೆ ಗುರು ರಾಘವೇಂದ್ರಾ 5
``ಶ್ರೀರಾಘವೇಂದ್ರಾಯ ನಮಃ'' ಎಂಬ ದಿವ್ಯನಾಮವ
ಮನುಜನು ಪ್ರತಿದಿನ ಭಜಿಸುತ್ತಲಿರಲು
ಘೋರ ದುರಿತಗಳೆಲ್ಲ ದೂರವ ಮಾಡಿ
ನಿನ್ನ ಚರಣಸೇವಕರನ್ನು ಸಲಹುವಿಯೋಗುರುವೇ6
ಶ್ರೀ ರಘುರಾಮನ ಪ್ರಿಯಭಕ್ತನಾದ
ಶ್ರೀ ಗುರು ರಾಘವೇಂದ್ರರ ಚರಣ ಭಜಿಸಿರೊ
ನಂಬಿದ ಭಕ್ತರ ಬೆಂಬಿಡದೆ ಸಲಹುವ
ಘನ್ನಕೃಪಾನಿಧಿ ನಮ್ಮ ಗುರು ರಾಘವೇಂದ್ರಾ 7
***
kruti by radhabai
ಕರುಣೆ ತೋರಬಾರದೇನೋ ಮಾಧವಾ
ಹರಿಯೇ ಧೊರೆಯೇ ಪ
ಕಂದನ ನುಡಿಕೇಳಿ ಕಂಬದಿಂದ ಬಂದೆ
ಅಂದು ಅಹಲ್ಯೆಯ | ಬಂಧನ ಬಿಡಿಸಿದೆ
ಕರಿಮೊರೆಯಿಡಲಾಕ್ಷಣ ಬಂದು ನೀ
ನಕ್ರನ್ನ ಸೀಳಿದ ಚಕ್ರಧರನೆ ನೀನು 1
ತರಳ ಧೃವನ್ನಾ ತೊಡೆಯಿಂದ ನೂಕಲು
ಕಡುಭಯದಿಂದ ವನದಲ್ಲಿ ಚರಿಸುತ್ತ
ಘನತಪಗೈಯಲು ಧೃಡ ಭಕುತಿಗೆ ಮೆಚ್ಚಿ
ಒಡನೆ ಓಡಿ ಬಂದು ಘನತರ ಸಂಪದವತ್ತೆ 2
ಪರಿಪರಿಯಲಿ ದೇವ ಭಕ್ತರ ಕಾವ
ಪರಮ ಪುರುಷೋತ್ತಮ ನೀನಲ್ಲವೆ
ಮೊರೆಹೊಕ್ಕೆನು ನಿನ್ನ ಕರುಣಿಗಳರಸನ್ನ
ತ್ವರಿತದಿಂದಲಿ ಕಾಯೊ ವೆಂಕಟವಿಠಲಾ 3
***
No comments:
Post a Comment