..
kruti by radhabai
ಕಂಡು ಧನ್ಯನಾದೆ ಶ್ರೀ ರಾಘವೇಂದ್ರರಾ
ಕಂಡು ಧನ್ಯನಾದೆ ಭೂಮಂಡಲದೋಳ್ ಪ
ಅಧಿಕ ಮಹಿಮೆ ತೋರಿ ಮೆರೆಯುತಿರುವ
ಶ್ರೀ ಗುರುಸಾರ್ವಭೌಮ ರಾಘವೇಂದ್ರರಾ 1
ಕಲಿಯುಗದೋಳ್ ಭಕ್ತಜನರಾ ಉದ್ಧರಿಸಬೇಕು ಎಂಬ ಮನದಿ
ವರಮಂತ್ರಾಲಯದೊಳ್ ಬಂದು ನಿಂದಿಹ ಯತಿವರರಾ 2
ತುಂಗಭದ್ರೆಯ ಸ್ನಾನವಮಾಡಿ ಅಂಗದ ಕಶ್ಮಲನೀಗಿ
ಮಂಗಳಮೂರುತಿ ರಾಘವೇಂದ್ರರ ಬೃಂದಾವನ ಮನದಣೆಯೆ 3
ವಿಶಿಷ್ಟ ಜನರ ಕಷ್ಟಗಳನು ನಿಮಿಷಮಾತ್ರದಿ ಕಳೆದು ಸಲಹುವ
ಶ್ರೇಷ್ಟ ಗುರುಗಳ ದಿವ್ಯವಾದ ದರ್ಶನ ಭಾಗ್ಯಾ ದೊರೆಕಿತಿಂದು 4
ಆದಿವ್ಯಾಧಿಗಳೆಲ್ಲ ಹರಿಸಿ ಅಂಧ ಬಧಿರ ಮೂಕತ್ವ ತೊಲಗಿಸಿ
ಬಂದ ದುರಿತಗಳೆಲ್ಲ ಓಡಿಸಿ ಕಂದನಂದದಿ ಸಲಹುವ ಗುರುಗಳಾ5
ದಿನದಿನದೊಳ್ ಇವರ ಮಹಿಮೆ ಅಧಿಕವಾಗುತಿರಲು ಕಂಡು
ತಂಡ ತಂಡದ ಜನಗಳೆಲ್ಲ ಹಿಂಡು ಹಿಂಡಾಗಿ ಬರುತಲಿಹರೂ 6
ಹೆಜ್ಜೆ ಹೆಜ್ಜೆಗೆ ವಂದಿಸುತಲೀ ದಂಡೆ ಮುಡಿ ಉರುಳುತಲೀ
ಮಂಡೆಬಾಗಿ ನಮಿಸತಲಿ ಬಿಡದೆ ರಾಯರ ಕೊಂಡಾಡುತಲೀ 7
ಸುತ್ತ ಕೋಟಿಯೊಳಗೆ ಮೆರೆಯುತಾ ಸಮಸ್ತ
ಜನರೆನರವ ಕೊಡುತಾ
ಕಾಮಧೇನುವಂತೆ ಹೊಳೆಯುತಾ ಕಾಮಿತಾರ್ಥ
ಕೊಡುವ ದಾತಾ 8
ನಿತ್ಯ ನಿತ್ಯದಿ ಬ್ರಾಹ್ಮಣರ ವೇದ ಪುರಾಣ ನಡೆಯುತಿರುವುದು
ಕೇಳಿ ಭಕ್ತಿಯಿಂದ ಜನರಾನಂದ ಭರಿತರಾಗುತಿಹರು 9
ಕೇಳುತಿಹುದು ಮಂತ್ರಘೋಷ ಪೇಳುತಿಹ ಪುರಾಣ ರಹಸ್ಯ
ನೀಡುತಿಹರು ಗುರೂಪದೇಶ ಎಮಗಾಯಿತಿಂದು ಬಹುಸಂತೋಷ10
ಎಲ್ಲಿ ನೋಡಲು ಬೀದಿ ಶೃಂಗಾರಾ ಎಲ್ಲಿ
ನೋಡಲು ಹೂವು ಸಿಂಗರ
ಮತ್ತೆಲ್ಲಿ ನೋಡಲು ಮಂಗಳಕರ ಕಂಡೆ
ಗುರುಗಳ ಮನಸಾರಾ11
ಬಂದ ಭಕ್ತಬೃಂದಕೆಲ್ಲ ಬೇಡಿ ದೊರಗಳ ನೀಡುತ ಸಲಹಿ
ಉಣಿಸಿದಣಿಸಿ ಹರಸಿ ಅವರ ಆನಂದದಿಂದ ಕಳುಹುತಿಹರು 12
ಭಕ್ತರಸವ ಪಾನಮಾಡಿಸಿ ಮುಕ್ತಿ ಮಾರ್ಗಕೆ ದಾರಿ ತೋರಿಸಿ
ಕರ್ತೃ ಶ್ರೀಹರಿ ಹೊರತುಯಿಲ್ಲೆಂದು ಸತ್ಯವಾಕ್ಯ ವ್ಯಾಕ್ತಪಡಿಸುತಿಹರು13
ಭಕ್ತಜನರ ಪೊರೆಯಲಿವರ ಸರಿಗಾಣೆನೀಧರೆಯೊಳಗೆ
ತಂದೆಯಂದದಿ ಬಿಡದೆ ಕಾಯ್ವರು ಸಾರ್ವಭೌಮ ಶ್ರೀ ರಾಘವೇಂದ್ರರು 14
ಎಷ್ಟು ಜನ್ಮದ ಸುಕೃತದ ಫಲವೋ ಶ್ರೇಷ್ಟಗುರುಗಳ ದರ್ಶನವಾಯಿತು
ಕಂಗಳಿಂದಲಿ ಕಂಡು ಮನದ ಕ್ಲೇಶವೆಲ್ಲ ಪರಿಹಾರವಾಯಿತು 15
ಹಿಂದೆ ಪ್ರಹ್ಲಾದರಾಜರೆನಿಸಿ ಬಂದು ಮಂಚಾಲೆಯಾಂಬಿಕೆ ದರ್ಶನ
ಕೊಂಡು ಗುರುಗಳ ದರ್ಶನ ಮಾಡಿಸೆಂದು ಭಕ್ತಿಲಿಜನ ಬೇಡುತಿಹರು 16
ದೇಶ ದೇಶದ ಜನರಿಗೆಲ್ಲ ವಿಸ್ತಾರದಿಂದ ಎಲೆಗಳ್ಹಾಕಿ
ಭಕ್ಷ್ಯ ಪಾಯಸಾನ್ನಗಳನು ತೃಪ್ತಿಯಿಂದ ಉಣಿಸುತಿಹರು 17
ಶ್ರೀ ರಾಘವೇಂದ್ರಾಯ ನಮಃ ಎಂದರೆ ದುರಿತಗಳೆಲ್ಲವದೂರಮಾಳ್ವರು
ಸ್ಮರಣ ಮಾತ್ರದಿ ಸಕಲಪಾಪಗಳೆಲ್ಲ ನಾಶಗೊಳಿಸೋರು18
ಗುರುವಾರ ಪೂಜಾ ಸಂಭ್ರಮದಿಂದ ನಮಗಾಯಿತು ಇಂದು
ಬಹು ಆನಂದ ರಾಯರು ರಥವೇರಿ ಬರುವುದು ಚಂದ
ಮುಂದೆ ನಮಿಸಲು ಭಕ್ತವೃಂದಾ 19
ಜಯ ಜಯತು ಗುರುರಾಜ ಜಯ ಜಯತು ಸುರಭೂಜ
ಜಯ ಜಯತು ಸುಧೀಂದ್ರ ಸುತ ಜಯ
ಜಯತು ಶ್ರೀ ರಾಘವೇಂದ್ರಾ
ಜಯ ಜಯತು ಜಯ ಜಯತು ಜಯ ಜಯಾ 20
***
No comments:
Post a Comment