..
kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಬುಧ ಸ್ತೋತ್ರ
ಸೂರಿ ಸಂಪ್ರಾಪ್ಯ ಶ್ರೀ ನಾರಾಯಣ ಪ್ರಿಯ ಬುಧನೇ
ನಮೋ ನಮೋ ನಮೋ ನಿನಗೆ ಪ
ಸೂರಿಪ್ರಿಯಕರ ವಿದ್ವಾನ್ ನಮೋ ಎನ್ನ ಕುಂದು
ನೀಗಿಸಿ ಪೊರೆ ಮಹಾದ್ಯುತಿಯೇ ಅ.ಪ
ಪ್ರಿಯಂಗುಕಲಿಕಾ ಶಾಮರೂಪಿಯೆ ಚಾರ್ವಾಂಗ -
- ಬುಧನೇ ನಿನಗೆಣೆಯುಂಟೇ
ಸೌಮ್ಯನೆ ಸೌಮ್ಯಗುಣವಂತನೇ ನಮೋ ಶಶಿಸುತ
- ದಯದಿಂ ಪಾಲಯಮಾಂ 1
ಅಂಬುವು ಚೂರ್ಣಪಿಂಡೀ ಭಾವ ಹೇತುವಾಗಿಹುದು -
- ನೀ ಅಂಬು
ಅಭಿಮಾನಿ ಮಹ ಪಂಡಿತನಾದುದರಿಂದ ಬೇಡುವೆ -
- ನಿನ್ನ ವಿನಯದಲಿ 2
ಅಂಬುವತ್ ಜ್ಞಾನಯುಕ್ ಸ್ನೇಹಾನುರಾಗ ಎಂಬ -
- ಭಕ್ತಿ ಅಂಬುಜನಾಭ ಬಿಂಬನಲಿ
ಅನುಕಂಪಯಾ ನೀ ಒದಗಿಸೊ ಎನಗೆ ಅಂಭ್ರಣಿಪತಿ
- ಶ್ರೀವ್ಯಾಸಗೆ ಪ್ರಿಯನೆ 3
ಮೂರ್ಲೋಕದಿ ಖ್ಯಾತ ವಿಧುಕುಲ ಪ್ರವರ ನೀ -
- ಬುದ್ಧಿ ಗಾಂಭೀರ್ಯದಿ ಶ್ರೇಷ್ಠನೆಂದು
ಮಾಲೋಲ ಆತ್ಮಜ ನಿನ್ನನು ಬುಧನೆಂದು -
- ನಾಮಕರಣವ ಮಾಡಿದನು 4
ಹೇಮಗರ್ಭನಪಿತ ಪ್ರಸನ್ನ ಶ್ರೀನಿವಾಸ ಪೂರ್ಣ -
- ಹೊಳೆಯುತಿಹ ನಿನ್ನಲ್ಲಿ
ನಾಮಾತ್ಮಿಕ ಉಷ ಶನಿ ಕರ್ಮಪ ಮೊದಲಾದವರಿಗೆ -
- ವರ ಬುಧನೇ ನಮೋ ನಮೋ 5
***
No comments:
Post a Comment