..
kruti by Nidaguruki Jeevubai
ಸರಸಿಜನಾಭ ಶ್ರೀಹರಿಪಾದಕಾರತಿಯ ಬೆಳಗಿರೆ ಪ
ವಸುದೇವ ಸುತನೆಂದೆನಿಸಿ
ಅಸುರೆ ಪೂತನಿಯ ಸಂಹರಿಸಿ ಆನಂದ ಸುರಿಸಿ
ಕಾಳಿಮಡುವ ಧುಮುಕಿ ಫಣಿಯ
ಮೇಲೆ ನಾಟ್ಯವನಾಡಿದವಗೆ
ಸನಕಾದಿ ನಾರದ ಮುನಿವಂದ್ಯಗೆ
ಸುರ ರಮಣಿಯರು ಹರುಷದಿ 1
ಮಧುರೇಲಿ ಜನಿಸಿದವಗೆ
ಮಾವಕಂಸನ ತರಿದವಗೆ ಮಧುವೈರಿಹರಿಗೆ
ಮುರಳಿನಾದಗೈದು ಸ್ತ್ರೀಯರ
ಮರುಳುಗೊಳಿಸಿ ಆಡಿದವಗೆ
ಮುರವೈರಿ ಹರಿ ಮುಚುಕುಂದ
ವರದನ ಪಾಡುತಲಿ ಮುದದಲಿ2
ಗೋಪಾಲರೊಡಗೂಡುತಲಿ
ಗೋವರ್ಧನವೆತ್ತಿದವಗೆ ಗೋವಿಂದ ಹರಿಗೆ
ಗೋಪಿಯರ ಮನೆಯ ಪೊಕ್ಕು
ಬೇಕೆನ್ನುತ ಪಾಲ್ಬೆಣ್ಣೆ ಸವಿದ
ಶ್ರೀಕಾಂತ ಕಮಲನಾಭ ವಿಠ್ಠಲನಿಗೆಸುದತಿಯರು ತ್ವರಿತದಿ 3
***
No comments:
Post a Comment