ಕಾಖಂಡಕಿ ಶ್ರೀ ಮಹಿಪತಿರಾಯರು
ಜ್ಞಾನಭ್ಯಾಸವ ಮಾಡಿ ಹೀಗೆ ತಾನೊಲಿದು ಜ್ಞಾನ ಗುರು ಖೂನಾಗುವ್ಹಾಂಗೆ pa
ಮನದಲಿ ಬಾವ್ಹಾಂಗ ನೆನೆದಲಿ ಕಾಂಬ್ಹಾಂಗೆ ತನುವಿನಲಿ ನಿಜಗೊಂಡು ತಾ ನೆಲೆಯಗೊಂಬ್ಹಾಂಗೆ ಅನುದಿನನದಲ್ಯನುಭವಿಸುವ್ಹಾಂಗೆ ಕನಗರಸಿದಲಿ ಮನೋಹರ ಮಾಡುವ್ಹಾಂಗೆ 1
ಅರ್ವಿನಲಿರುವ್ಹಾಂಗೆ ಕುರುಹುದೋರುವ್ಹಾಂಗೆ ಇರುವ್ಹ ನೆಲೆಗೊಂಡು ತಾನೆವೆ ಸ್ಥಿರವಾಗುವ್ಹಾಂಗೆ ಮರವು ಮರದೀಡ್ಯಾಡುವ್ಹಾಂಗೆ ಗುರು ಚರಣ ಕಮಲವನು ಗುರುತಾಗುವ್ಹಾಂಗೆ 2
ಧ್ಯಾಸ ನೀಜ ಬಲುವ್ಹಾಂಗೆ ವಾಸನೆ ಪೂರಿಸುಹಾಂಗೆ ಭಾಸ್ಕರ ಕೋಟಿ ಪ್ರಕಾಶ ಭಾಸಿಸುವ್ಹಾಂಗೆ ಭಾಸ್ಕರ ಬಾಹ್ಯಾಂತ್ರಲಿವ್ಹಾಂಗೆ ಲೇಸಾಗಿ ಮಹಿಪತಿ ಸ್ವಾಮಿಒಲುವ್ಹಾಂಗೆ 3
***
No comments:
Post a Comment