Wednesday, 1 September 2021

ಜ್ಞಾನವೆಂಬುದಕೇನು ಕ್ಷಣ ನಡಿಯು ಕಠಿಣ ಅನುಭವದ ನಿಜಖೂನ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಜ್ಞಾನವೆಂಬುದಕೇನು ಕ್ಷಣ ನಡಿಯು ಕಠಿಣ ಅನುಭವದ ನಿಜಖೂನ ಅಗಮ್ಯ ಸ್ನಾನ pa


ಅಹಂ ಬ್ರಹ್ಮಾಸ್ಮಿ ಎಂಬ ಸೋಹ್ಯ ತಿಳುವದೆ ಗುಂಭ ಬಾಹ್ಯ ರಂಜನದೆ ಡಂಭ ದೇಹದಾರಂಭ ಸೋಹ್ಯ ತಿಳಿದುಕೊಂಬ ಗುಹ್ಯಗುರುತದ ಇಂಬ ಮಹಾಮಹಿಮೆಲೆ ಉಂಬ ಸಹಸ್ರಕೊಬ್ಬ 1 

ಮೂರ್ತಿ ಶ್ರೀಪಾದ ಬೋಧ ಆದಿತತ್ವದ ಭೇದಿಸದಲ್ಲದ ಭೇದ ಮದಮತ್ಸರದ ಕ್ರೋಧ ಹಾದಿ ತಿಳಿಯದು ವಸ್ತುದ ಉದಯಸ್ತಿಲ್ಲದ 2 

ಜ್ಞಾನಕ ಜ್ಞಾನೊಡಮೂಡಿ ಖೂನಕ ಬಾವ್ಹಾಂಗ ಮಾಡಿ ನಾ ನೀನೆಂಬುದು ಈಡಾಡಿ ಅನುಭವ ನೋಡಿ ಮನೋನ್ಮದ ನಡಿ ಅನುದಿನವೆ ಕೊಂಡಾಡಿಘನಕ ಮಹಿಪತಿ ನೀ ಕೂಡಿ ನೆನಿಯೊ ಬೆರೆದಾಡಿ 3

***


No comments:

Post a Comment