ಕಾಖಂಡಕಿ ಶ್ರೀ ಮಹಿಪತಿರಾಯರು
ಜ್ಞಾನದ ನಡಿಬ್ಯಾರೆ ತತ್ವಜ್ಞಾನದ ನಡಿ ಬ್ಯಾರೆ pa
ದೇಹದಂಡನೆ ಮಾಡಿದರೇನು ಬಾಹ್ಯಾರಂಜನೆ ದೋರಿದರೇನು 1
ಶಬ್ದ ಜ್ಞಾನ ಸೂರಾಡಿದರೇನು ಲಭ್ದಾ ಲಬ್ಧೇಲಾಡಿದರೇನು 2
ರಿದ್ದಿ ಸಿದ್ದಿಯ ದೋರಿದರೇನು ಗೆದ್ದು ಮಂತ್ರಾಂತ್ರಸೋಲಿಪರೇನು 3
ಗೀರ್ವಾಣ ಆಡಿದರೇನು ಭೂತ ಭವಿಷ್ಯ ಹೇಳಾಡಿದರೇನು 4
ವ್ರತ ತಪ ತೀರ್ಥಾಶ್ರೈಸಿದರೇನು ಕೃತ ಕೋಟ್ಯಜ್ಞಾವ ಮಾಡಿದರೇನು 5
ಯೋಗಾಯೋಗಾಚರಿಸಿದರೇನು ಭೋಗ ತ್ಯಾಗ ಮಾಡಿದರೇನು6
ಏನು ಸಾಧನೆ ಮಾಡಿದಫಲವೇನು ಖೂನ ದೋರದೆ ಮಹಿಪತಿಗುರುತಾನು7
***
No comments:
Post a Comment