ಕಾಖಂಡಕಿ ಶ್ರೀ ಕೃಷ್ಣದಾಸರು
ಜ್ಞಾನ ಸಖೀಕೇಳೆ ಜ್ಞಾನಿಗಳಾರಾಧಿಸುವಾ | ಶ್ರೀನಿವಾಸನಾ ತಂದುತೋರೆ ತನುವಿನೋಳು ಪ
ಹಲವು ಸಾದಿನದಿಂದ ಬಳಲಿ ಹಂಬಲಿಸಿದೆ | ಜಲ ಜಾಕ್ಷ ಮೈಯ್ಯ ದೋರನೇ 1
ಕಣ್ಣಿಗೆ ಕಣ್ಣಾಗದನಕಾ ಬಣ್ಣ ಬಣ್ಣದ ಚಿತ್ಸುಖಾ | ಕನ್ನಿಕಾ ರನ್ನಳೆ ತಂದು ತೋರೇ 2
ಸೋಹ್ಯ ಸೊನ್ನಿಯ ದೋರಿಸಿ ಬಾಹ್ಯರಂಗ ಮರೆಸಿ | ಸಹ ಜಾನಂದದ ಕೂಡಿಸೇ 3
ಗುರು ಮಹಿಪತಿ ಸ್ವಾಮಿ ಸ್ಮರಿಸುವರಂತರ್ಯಾಮಿ | ನೆರೆದು ತಾನೇ ತಾನಾದನೇ 4
***
No comments:
Post a Comment