..
kruti by ಲಕ್ಷ್ಮೀನಾರಯಣರಾಯರು Lakshminarayanaru
ಕರುಣಕೆ ಎಣೆಗಾಣೆ ಶ್ರೀಕಾಂತನ ಪ
ಧರೆಯಿರೇಳರೊಳರಸಿ ನಾ ನೋಡಲು
ಸರಿಯಾರಿಹರಿನ್ನು ಶ್ರೀಕಾಂತಗೆ ಅ.ಪ.
ಕಚ್ಚಿದ ಕಾಳಿಯ ಕೆಚ್ಚನು ಎಣಿಸದೆ
ಮೆಚ್ಚುಕೊಟ್ಟನು ವರವ ಶ್ರೀಕಾಂತನು 1
ಬೈದ ಚೈದ್ಯನಪರಾಧವ ನೋಡದೆ
ಸೋದರದಲಿ ಇಟ್ಟನು ಶ್ರೀಕಾಂತನು 2
ಕೃದ್ಧನಾಗಿ ಬಂದು ಒದ್ದ ಭೃಗುಮುನಿಗೆ
ಎದ್ದುಪಚರಿಸಿದನು ಶ್ರೀಕಾಂತನು 3
***
No comments:
Post a Comment