Sunday, 1 August 2021

ಅಯ್ಯೊ ಸಾಕಿದೇನು ಚಂದಾ ಮೈ ಸೋಕದಿರೆಲೋ ಮುಕುಂದ ankita shreeda vittala

 ..kruti by Srida Vittala Dasaru  Karjagi Dasappa


ಅಯ್ಯೊ ಸಾಕಿದೇನು ಚಂದಾ ಮೈ

ಸೋಕದಿರೆಲೋ ಮುಕುಂದ ಪ


ಗಂಡನುಳ್ಳ ನಿಜ ಗರತೀ ಒಡ-

ಗೊಂಡು ಬದಿಗೆ ಕೈ ತರುತೀ ಬಲು

ಪುಂಡಾಟಗಳ ನೀನೆಸಗುತೀ1


ಹೆಚ್ಚು ನುಡಿಯದಿರು ನಂಟು ಕಂಡು

ಹುಚ್ಚು ಮಾಡುವದುಂಟೂ ನಡೆ

ಬಿಚ್ಚದಿರೆಲೊ ಮೊಲೆಗಂಟೂ 2


ಶ್ರೀದವಿಠಲ ಯದುರಾಯಾ ನಿನ್ನ

ಪಾದಕೆರಗುವೆನಯ್ಯಾ ನಡು-

ಬೀದಿಯೊಳಗೆ ಬಿಡು ಕೈಯ್ಯಾ 3

***


No comments:

Post a Comment