..
kruti by ಲಕ್ಷ್ಮೀನಾರಯಣರಾಯರು Lakshminarayanaru
ಕಾಪಾಡು ಎನ್ನನು ಕೃಪಣ ವತ್ಸಲ ನಿನ್ನ
ಶ್ರೀಪಾದಾರ್ಚನೆಯನಿತ್ತು ಪ
ಅಪಾರ ಜನುಮದ ಪಾಪೌಘ ಬೆನ್ನಟ್ಟಿ
ತಾಪಗೊಳಿಸುತ್ತಿದೆ ಈ ಪರಿಭವದೊಳು ಅ.ಪ.
ಪತಿತ ನಾನಾದರೂ ಪತಿತ ಪಾವನ ನೀನು
ಪಶುಪತಿ ಪಾಪಹರ
ಗತಿಹೀನರಿಗೆ ನೀನೆ ಗತಿದರ್ಶಕನೆಂದು
ತುತಿಸುತ್ತಿಹುದು ವೇದತತಿ ಸಮ್ಮತವಾಗಿ 1
ಭವಭವದಲಿ ಬಂದು ಬವಣೆಗಳಲಿ ಬೆಂದು
ಬಳಲಿದೆ ಭಕ್ತ ಬಂಧು
ಭವಹರ ನೀನೆಂಬುದನು ಭವಿಗಳಿಂ ನಿತ್ಯ
ಶ್ರವಣದಿ ಕೇಳಿ ನಿನ್ನವರವನೆನಿಸಿದೆ 2
ಗೌರಿ ಮನೋಹರ ಗೌರಾಂಗ ಭಕ್ತರು
ದ್ಧಾರಿಯೆ ಶೂಲಧರ
ಸಾರಿದೆ ನಿನ್ನಂಘ್ರಿವಾರಿಜಯುಗಳವ
ಕಾರುಣ್ಯದಲಿ ನೋಡು ಅಭಯವ ನೀಡು 3
ಮುಪ್ಪುರಹರ ಮುಕ್ಕಣ್ಣ ಗಂಗಾಧರ
ಮೃತ್ಯು ಮೃತ್ಯುವೆ ಶಂಕರಾ
ಸರ್ಪಭೂಷಣ ಅಪಮೃತ್ಯು ನಿವಾರಣ
ಕಪ್ಪುಗೊರಳ ಕೃತ್ತಿವಾಸ ಸುರೇಶ 4
ಅಜ ಸಂತನಧ್ವರ ಭಜನೆಯ ಕೆಡಿಸಿದ
ವಿಜಯ ವಿಗ್ರಹ ಶರೀರ
ಸುಜನರ ಹೃದಯಾಂಬುಜದಲ್ಲಿ ಮಿನುಗುವ
ರಜದೂರ ಶ್ರೀಕಾಂತ ನಿಜಭಕ್ತ ಗುರುವರ 5
***
No comments:
Post a Comment