..
kruti by ಲಕ್ಷ್ಮೀನಾರಯಣರಾಯರು Lakshminarayanaru
ಕೋಪ ಮಾಡುವರೆ - ಕೃಪಾಳು ನೀನು
ಕೋಪ ಮಾಡುವರೆ ಪ
ಕೋಪ ಮಾಡುವರೇನೋ ಸಂಸøತಿ
ಕೂಪದೊಳು ಬಿದ್ದ್ಹೊರಳುತಿಹನ
ನೀ ಪರಾಮರಿಸಿನ್ನು ಕೀರ್ತಿ ಕ-
ಲಾಪವನು ಕಾಪಾಡಿಕೊಳ್ಳದೆ ಅ.ಪ.
ನಾಥನು ನೀನು ಎಂದೆಂದಿಗೂ
ದೂತನು ನಾನು ಸಿದ್ಧಾಂತವು | ನೀತವಿದಿನ್ನು
ಕೋತಿ ಕುಣಿವುದು ಕೊರವ ಕುಣಿಸಿದ
ರೀತಿಯಲಿ ಜಗತೀತಳದಿ - ವಿ
ಖ್ಯಾತಿಯಲ್ಲವೆ ಮಾತು ಪುಸಿಯೇ
ನೀ ತಿಳಿದು ಕರುಣಿಸದೆ ಬರಿದೆ 1
ಅರಿತವ ನೀನು - ಷಡ್ವರ್ಗದಿ
ಬೆರತವ ನಾನು - ಚರಣಂಗಳಿಗೆರಗುವೆನಿನ್ನು
ಅರಿತು ನೆನೆಯೆ ಪ್ರಪನ್ನರೊಮ್ಮೆಗೆ
ಎರವು ಮಾಡದೆ ಪೊರೆವೆನೆಂಬುವ
ಬಿರುದನುಳಿದು ಕರುಣವಿಲ್ಲದೆ
ಮರೆಯ ಹೊಕ್ಕವರೊಡನೆ ಕೆರಳಿ 2
ಏನಾದರೇನು - ನೀನಲ್ಲದೆ
ಕಾಣೆ ಮತ್ತೇನು - ಕೊಲ್ಲು ಕಾಯಿ ನಾನು ನಿನ್ನವನು
ಪ್ರಾಣ ಸತಿಸುತ ದ್ರವ್ಯ ಮಾನಪ-
ಮಾನ ಅಭಿಮಾನಗಳು ನಿನ್ನವು
ದೀನ ಜನ ಮಂದಾರ ಗುಣಗಳ
ಪೂರ್ಣ ಲಕ್ಷ್ಮೀಕಾಂತ ಪ್ರಭುವೆ 3
***
No comments:
Post a Comment