ಷಟ್ಪದಿ
ಹಾಟ ಗರ್ಭನ ರಾಣಿ ಸುರಗಣ |
ಕೂಟವಾಳುವ ಶ್ರೇಷ್ಠ ಶಾರದೆ |
ಸಾಟಿ ಯಾರೆಲೆ ವೇದ ಮಾನಿಯೆ ವಾಣಿ ಮಂದಿರೆಯೆ |
ಏಟು ತಿಂದೆನೆ ಭವದಿ ತಾಯಿಯೆ |
ಕೈಟ ಭಾರಿಯ ಭಕ್ತಿ ವೃಕ್ಷವ|
ನಾಟಿ ಹೃದಯದಿ ಬೆಳಸೆ ಶುಭಗುಣ ಖಣಿಯೆ ಮಂಗಳೆಯೆ 1
ಗಾನಕವಿಕುಲ ಹಂಸವ್ಯೂಹದಿ | ಹೀನ ಕಾಕನ
ಪೋಲ್ವ ಮೂಢನ |
ಮಾನ ಕಾಯುವ ಭಾರ ನಿನ್ನದೆ ದೀನ ವತ್ಸಲೆ ಯೆ|
ಏನು ಬೇಡೆನೆ ಅನ್ಯ ವಿಷಯವ | ಗಾನಕಲೆ
ಶುಭಮರ್ಮ ಕಳಿಸುತ |
ಶ್ರೀನಿವಾಸನ ಭಕ್ತಿ e್ಞÁನವಿರಕ್ತಿ ಕೊಡಿಸಮ್ಮ 2
ಮಾನ್ಯ ಕೋಕಿಲ ವಾಣಿ ಪು¸್ತಕ | ಪಾಣಿ ಸುಂದರ
ವೇಣಿ ವೀಣೆಯ |
ಗಾನ ನುಡಿಸುವ ಜಾಣೆ ವಿಧಿಮನ ಹಾರಿ ಕೋಮಲೆಯೆ |
ಹೀನ ಕಲಿಗುಣ ಶೂನ್ಯ ನಿತ್ಯದಿ | ಕಾಣ್ವೆ ಬಿಂಬನ
ಮೂರು ರೂಪಳೆ |
ಸಾನುರಾಗದಿ ವಲಿದು ಹರಿಪಥ ಸಿಗಿಸಿ ಪೊರೆಯಮ್ಮ 3
ಬೊಮ್ಮನಂಕೂಡುತ್ತೆ ಬಹುವಿಧ |
ರಮ್ಯರೂಪಗಳಿಂದ ನಾ ನಾ |
ರಮ್ಯಸೃಷ್ಟಿಗಳಿಗನುವಾಗುತ ಹರಿಯ ಸೇವಿಸಿದೆ |
ಅಮ್ಮ ಶ್ರುತಿತತಿ ಅರ್ಥಗಳ ಹರಿ| ಸಮ್ಮತ ತೆರದಿ
ನುಡಿಸಿ ಕರಿಸುವಿ |
ಯಮ್ಮ ಜಗದಿ ಸರಸ್ವತೀಯಂತೆಂದು ವಿಪಮಾತೆ 4
ಶಕಲ e್ಞÁನ ವಿದೂರೆ ವಿದ್ಯಾ | ಮುಕುಟ
ಧರಿಸಿಹೆಯಮ್ಮ ಬೋಧಿಸೆ | ಯುಕುತಿ ಶಾಸ್ತಗಳನ್ನು
ಮಾಯ್ಗಳ ಗೆಲ್ವ ಬಗೆ ತೋರು |
ಪ್ರಕಟ ಮಾಡುತ ಶಬ್ದ ನಿಚಯದಿ ಸಕಲ ರೊಡೆಯನ
ಮಾತೆ ಯೆನಿಸಿಹೆ
ವಿಕಟ ಜಗದವತಾರ ವರ್ಜಿತೆ ಶರಣು ಶ್ರೀ ಸೊಸೆಯೆ 5
ಶ್ರದ್ದೆ ಪ್ರದ್ಯುಮ್ನ ಕೃತಿ ಸುತೆಸು | ಮಧ್ವಶಾಸ್ತ್ರದಲಿ ಮನದಕು|
ಬುದ್ದಿಗಳ ಕಡಿಸಿ ಪ್ರಸಿದ್ಧಿಯ ನೀಡಿ ಸಾಕಮ್ಮ |
ಪದ್ಮನಾಭನ ವೇದ ಸಮ್ಮತಿ | ಯಿಂದ ಪಾಡುತ ಭಾಗ್ಯವಾಹುದೆ |
ಎಂದಿಗಾದರು ನೀನೆ ಮನದಲಿ ನಿಂತು ನುಡಿಸದಲೆ 6
ವೇದ ಶಾಸ್ತ್ರಗಳೊದಿ ಕೇಳದ | ಗಾಧ ಮೂಢ
ವಿನೋದ ಗೊಷ್ಠಿಯ |
ಹಾದಿ ಹಿಡಿದವಿವೇಕಿ ನಾನಲೆ ಕೇಳು ವಿಪತಾಯೆ |
ಮೋದದಿಂ ನೀಕಾಯದಿದ್ದರೆ ಚರಣವ |
ಮಾಧವನು ಸಿಗನಮ್ಮ |
ಆದರದಿ ಸಾರಿದೆನು ಕವಿಜನಗೇಯೆ ವಿಧಿಜಾಯೆ 7
ಅಂಬೆ ನೀರಜ ಬಿಂಬೆ ಸ್ವಾತಿಕೆ | ಬೊಂಬೆ
ರುದ್ರರ ಬಿಂಬೆ ಭಕ್ತರ |
ಸ್ತಂಭೆ ಶಾಂಭವಿ ವಂದ್ಯೆ ನಿತ್ಯದಿ | ಉಂಬೆ ಸುಖಗಳನೂ |
ತುಂಬೆ ಶಾಸ್ತ್ರದ ಸಾರ ಮನದಲಿ | ವೆಂಬೆ
ಹರಿಯಡಿ ಮನದಿ ಕಾಂಬುವ | ಹಂಬಲದ
ಕೈಗೊಡಿಸಮ್ಮ ಸಮೀರ ಗ್ಹೇಳುತಲಿ 8
ತತ್ವ ಪತಿಗಳ ನೆತ್ತಿ ಕುಣಿಸುವೆ | ಭೃತ್ಯ ನಾನೆಲೆ ನಿತ್ಯ ಭಕ್ತಳೆ |
ವಿತ್ತ ವನಿತಾ ವ್ಯಾಧಿ ಹರಿಸುತ ಚಿತ್ತ ಶುದ್ಧಿಯನು |
ಇತ್ತು ಹತ್ತಿಸು ನೆತ್ತಿಗೆಂಬುವೆ |
ಸಪ್ತ ಶಿವಗಳ ಮರ್ಮ ಬೇಗನೆ
ವತ್ತಿ ಮಿಥ್ಯಾe್ಞÁನ ತಿಮಿರವ ಭಕ್ತಿ ಭಾಸ್ಕರಳೆ 9
ನಳಿನ ನಾಭನ ವಲುಮೆ ಗಾಗಿಯೆ | ವಳಿತು
ಸುಖಗಳನುಂಬೆ ಭುಜಿವಿದಿ|
ತಳಿಹೆ ಪತಿತೆರದ್ವಿಶತ ಕಲ್ಪಗಳಲ್ಲಿ ಸಾಧನೆಯು |
ವಳಿದು ಸ್ಥಾನವ ನೀಡಿ ಅಂಗದಿ | ಕಳದೆ
ಶಾಪವ ಶ್ಯಾಮಲಾಶಚಿ |
ಗಳಿಗೆ ದ್ರೌಪತಿ ಇಂದ್ರ ಸೇನಾಕಾಳಿ ಚಂದ್ರಾಖ್ಯೆ 10
ಮೂರ್ತ ಮಾನಿಯೆ ಚಂದ್ರಮಾವಿ | ಖ್ಯಾತಳಾಗುತ
ನಿಂತು ಶಶಿಯಿಲ್|
ಭೂತ ಗುಪಚಯವಿತ್ತು ಸೃಷ್ಠಿಯ ಕಾರ್ಯಗನುವಾಹೆ |
ನೀತ ಪತಿ ಸಹವಾಸ ವೇಸ | ರ್ವತ್ರ
ನಿನಗಹುದಮ್ಮ ಕೊರತೆಯು |
ಯಾತರಿಂದಲು ಯಾವಕಾಲುಕು ಇಲ್ಲರಯಿ ನಿನಗೆ 11
ಮಾನ್ಯ ಮಧ್ವರ ಶಾಸ್ತ್ರ ಕನ್ಯಗೆ | ಚೆನ್ನ ಕನ್ನಡ
ಕವಚ ತೊಡಿಸುತ |
ಶ್ರೀನಿವಾಸನಭಕ್ತನಿಚಯಕ್ಕೆ ಕೈಮುಗಿದು
ಆನತಾಮರಧೇನು ಮುಖ್ಯ | ಪ್ರಾಣಮಂದಿರನಾದಶುಭಗುಣ
ಪೂರ್ಣಪೂರ್ಣಾನಂದ ತದ್ವನ ಬಾದರಾಯಣಗೆ 12
ದೈನ್ಯ ದಿಂದಸಮರ್ಪಿಸುತ ಪವಮಾನರಾಯನ ಕರುಣವೆಲ್ಲೆಡೆ
ಅನ್ಯ ವಿಷಯವ ಬೇಡದಂದದಿ ಮಾಡುತಲಿಯನ್ನ |
e್ಞÁನ ಭಕ್ತಿ ವಿರಕ್ತಿ ಸಂಪದ | ನೀನೆ ನೀಡುತ ಸಲಹೆ ಕೃತಿಸುತೆ |
ನೀನೆ ಸಾಸರಿ ನಮಿಪೆ ಬೃಹತೀಖ್ಯಾತ ಭಾರತಿಯೆ 13
ಸೂರಿ ಜಯ ಮುನಿ ವಾಯು ವಂತರ |
ಸೇರಿ ತಾಂಡವ ಮಾಡಿ
ಮೆರೆಯುವ | ಶ್ರೀ ರಮಾವರ ಕೃಷ್ಣವಿಠಲನ ಪಾದ ಪಂಕಜವ
ಸೂರಿ ಸಮ್ಮತ ವೇದ ಗಾನದಿ | ಸಾರಿ ಸಾರಿಸೆ ಸೇರು ವದನದಿ |
ನೀರ ಜಾಕ್ಷನ ಸೊಸೆಯೆ ಶುಚಿಶತಿ ನಮಿಪೆ ಭೂಯಿಷ್ಠ 14
****
No comments:
Post a Comment