ಹಿಂಗಾಯಿತಲ್ಲಾ ಏನಿದು ಹರಿಹರಿ ಪ
ಮಂಗನ ತೆರ ಈ ಅಂಗವ ವಿಷಯತ
ರಂಗೆ ವಡ್ಡುತ ರಂಗನ ಮರೆತಿಹೆ ಅ.ಪ.
ಬರಿದೆಯೆ ಹೋಗುತ್ತಿರುವುದು ಹೊತ್ತು
ಹರಿಧ್ಯಾನಕೆ ಸಾಲದು ಪುರಸೊತ್ತು
ತಿರುಗಲು ಮನೆಮನೆ ಸಾಲದು ಹೊತ್ತು
ಸರಸಿಜನಾಭನೆ ಇದಕ್ಕೇನು ಮದ್ದು 1
ಶ್ರೀ ಕಮಲೇಶನ ಪೂಜೆಯ ಮಾಡನೆ
ಆಕಳಿಸುತ ಮೈ ಕೈ ಮುರಿಯುವೆನು
ಸ್ವೀಕರಿಸಲು ಸವಿ ಪಾನೀಯಂಗಳ
ಮುಖಸಹತೊಳೆಯದೆನೂಕುತ ಮುಖ ಪ್ರಕ್ಷಾಳನೆ ಬಿಡುವೆ2
ಸ್ನಾನವ ಮಾಡೆನು ಸಂಧ್ಯಾ ತಿಳಿಯೆನು
ಧ್ಯಾನವು ಯೆಂತೆನೆ ಕೂಳಿನ ಚಿಂತೆಯು
ಆನನ ಮುಸುಕುತ ಬರಿಪಿಚಿಯೆಂದು ನಿ
ಧಾನದಿ ಜಪಸರ ನೂಕುವೆನಲ್ಲಾ 3
ಮಂತ್ರವು ಬಾರದು ಸ್ತ್ರೋತವು ಬಾರದು
ತಂತ್ರದಿ ನೂಕುವೆ ದೇವರ ಪೂಜೆಯ
ವಿಧಿಗಳ ಮೌನದಿ ಕರ್ಮಗಳೆಲ್ಲವ
ಮಂತ್ರಿಯ ಮಡಿದಿಯು ಪೇಳಿದ ತೆರದೂಳು
ಯಂತ್ರ ವಿಧಾನದಿ ನುಡಿಯುವೆ ದಿನವಹಿ4
ಹೀನಕ ವೃತ್ತಿಗಳಿಂದಲಿ ಜೀವನ
ವರ್ಣವಿವೇಕವ ನಡಿಸಲಸಾಧ್ಯವು
ಜನ್ಮದಿ ವಿಪ್ರನು ನಾನಿಹೆ ಬರಿಸರಿ
ತಿನ್ನುತ ಕುಡಿಯುತ ತಳ್ಳುವೆ ಆಯುಷ್ಯ5
ಊಟದ ಚಪಲವು ತಿಂಡಿಯ ಚಪಲವು
ನೋಟದ ಚಪಲವು ಚಪಲ ಕಂದರ್ಪನ
ಕಾಟದಿ ಸಿಲುಕಿಹೆ ಕೈಟಭಮರ್ದನ
ದಾಟುವೆದೆಂತೋ ಭವವನು ಕಾಣೇ 6
ಏರಿದೆ ಬಹುನಿತ್ರಾಣವು ಗಾತ್ರದಿ
ಮೀರಿದವಯ ಶಾಸ್ತ್ರಾಭ್ಯಾಸಕೆ
ಕಾರುವರೈ ವಿಷ ಬಾಂಧವರೆಲ್ಲರು
ಆ ರವಿಸುತನಾಳ್ಗಳಗು ನಾನಿಹೆ 7
ಮಡದೀ ಮಕ್ಕಳ ಪಾಶದಿ ಬಿದ್ದಿಹೆ
ದುಡಿಯದ ಕಾರಣ ದುಗುಡವ ತೋರ್ಪರು
ನಡೆಯದು ತುಸನನ್ನ ಮಾತೇನಿಲ್ಲ
ಮಿಡುಕುತ ಮಿಡುಕುವೆ ಮುಪ್ಪಿನ ಹಿಡಿತದಿ 8
ತೋಡಿದರೂ ಎದೆ ಕಾಣೆನು ಭಕ್ತಿಯ
ಕಾಡನು ಸೇರಲೊ ಬಾವಿಗೆ ಬೀಳಲೋ
ಜೋಡಿಯು ಆಗಲೊ ಜೋಳಿಗೆ ಪಿಡಿಯಲೊ
ಓಡದು ಬುದ್ಧಿಯು ತೋರಿಸು ಹಾದಿ 9
ಕರುಣಾಮಯ ನೀನೆಂಬುವ ಬಿರುದನು
ಹಿರಿಯರ ಮುಖದಿಂ ಕೇಳಿಹೆ ಸ್ವಾಮಿಯೆ
ಭರವಸೆ ಎನಗಿಹದೊಂದೇ ನಿಶ್ಚಯ
ಶರಣನ ಬಿಡದಿರು ಆಪದ್ಬಾಂಧವ 10
ಪಾಮರ ನಿಹೆಬಹು ಕಲುಷಿತ ಚಿತ್ತನು
ಭೀಮಾರ್ಚಿತ ಪದಯಗ ನಂಬಿಹೆ
ಪ್ರೇಮವ ಸುರಿಸುತ ಕಾಯೈ ಬೇಗನೆ
ಸಾಮನೆ ಶರಣೈ “ಶ್ರೀ ಕೃಷ್ಣವಿಠಲಾ” 11
****
No comments:
Post a Comment