Monday, 2 August 2021

ಹರಿದಾಸನ ಮಾಡಿಕೊಂಬುವಿಯ ಎನ್ನ ankita krishnavittala

ಹರಿದಾಸನ ಮಾಡಿಕೊಂಬುವಿಯ ಎನ್ನ ಪ


ಪರಮಕರುಣಾಶರಧಿ ಭಕ್ತ ಪ್ರಸನ್ನ ಅ.ಪ.


ತಂಬೂರಿ ಹಿಡಿಸುತ ಕೈಲಿ-ಪರಮಸಂಭ್ರಮದಿಂದ

ಪಾಡುವ ಶೈಲಿ ತಿಳಿಸಿ

ತುಂಬಿ ಹರಿಗುರು ಭಕ್ತಿ ಗಾಳಿ ಹೃದಯ ಬಿಂಬನ

ನೋಡಿ ಕುಣಿದು ಕುಣಿಯುವ 1


ಹಿಂದಿನ ದುರುಳ ಕಥೆಗಳ ಅಳಿಸೀ-ಮುಂದಿನ

ಸುಖಕೆ ದಾರಿಯ ತಿಳಿಸೀ

ಎಂದೆಂದು ಅಹಂಮಮತೆ ಕೊಡದೆ-ನಂದ ದಿಂದ

ಪಥ ಸಾಗಿಸಿ ಬಿಡದೇ 2


ಗೆಜ್ಜಿಕಟ್ಟಿಸಿ ಕಾಲುಗಳಲ್ಲೀ ಭರದಿ-ಭರ್ಜಿಸಿ ವಿಷಯ

ಕಜ್ಜಿಗಳನು ನಿರುತ

ಉಜ್ಜಲಿಸುತ್ತ ಭಕ್ತಿಯ ದೀಪ ಪರರು ಸಜ್ಜನ ಸಂಗ

ದಿರಿಸಿ ಕಾಯುತ ಲೀಗ 3


ಕಿರಿಯದಾಸನು ಎಂದು ಜರಿಯದೆಲೆನಗೆ ಹಿರಿಯ ದಾಸರ

ಕರುಣ ಕವಚವ ತೊಡಿಸಿ

ಪರಮ ಅದ್ಬುತ ಚರಿತೆ ವಿಶೇಷ ನುಡಿಸಿ-ಹರಿಸಿ ಕಲಿಗಣ

ಬಾಧೆ ತಟ್ಟದ್ಹಾಂಗೆ 4


ದಿಟ್ಟಜಯಮುನಿ ವಾಯು ಹೃಸ್ಥ ಸಿರಿ ಪ್ರೇಷ್ಠತನು

ಶ್ರೀಕೃಷ್ಣವಿಠಲ ಪರಮೋ-

ತೃಷ್ಟ ದೈವವೆಂದಾರ್ಭಟಿಸಿ ನಿನಗಿಷ್ಟದಾಸನಾಗಿ

ಚರಿಸಿ ನಲಿವಂಥ 5

****


No comments:

Post a Comment