..
ಸೀಸಪದ್ಯ
kruti by Nidaguruki Jeevubai
ಸುಂದರಾಂಗನ ಪಾದಕೊಂದಿಸುತ ಭಕ್ತಿಯಲಿ
ಮಂದರೋದ್ಧಾರ ಮುಚುಕುಂದ ವರದ
ನೆಂದು ಸ್ತುತಿಸುವ ಭಕ್ತವೃಂದವನು ರಕ್ಷಿಸುವ
ಕುಂದನೆಣಿಸದಲೆ ನಾರಸಿಂಹ ಹರಿಯು 1
ಇಂದಿರಾರಮಣಗೆ ಜಯ ಗೋವಿಂದ ಗೋಪಕುಮಾರ-
ನೆಂದವರ ಬಂಧನವ ಬಿಡಿಸಿ ಕಾಯ್ವ
ಕಂದರ್ಪಜನಕ ಕಮಲಾಕ್ಷ ಹರಿ ಗತಿ ಎನುತ
ಬಂದವನ ಕೈ ಬಿಡನು ಇಂದಿರೇಶ 2
ದುಂದುಭಿ ವತ್ಸರದಿ ಸುಜನರೆಲ್ಲ
ತಂದೆ ಕಮಲನಾಭ ವಿಠ್ಠಲನೆನುತ
ಒಂದೆ ಮನದಲಿ ಭಜಿಸಿ ಸ್ತುತಿಪ ಜನರ
ಚಂದದಲಿ ಕಾಯ್ವ ನಾರಸಿಂಹ ಹರಿಯು3
***
No comments:
Post a Comment