Monday, 2 August 2021

ಬಂದು ಪೊರೆಯೆಲೊ ಇಂದಿರೇಶಾ ಎನ್ನವಂದಿಸುವೆನೂ ankita indiresha

ಬಂದು ಪೊರೆಯೆಲೊ ಇಂದಿರೇಶಾ ಎನ್ನವಂದಿಸುವೆನೂ ಸಿಂಧುಶಯನ ಬೇಗ ಪ


ಶಿಷ್ಟರ ಸಂಗತಿ ಕೊಟ್ಟು ಕಾಯೊ ಮತಿಭ್ರಷ್ಟನಾದೆನತಿ ಧಿಟ್ಟ ರಘುಪತಿ 1

ಮುಕ್ತಿದಾಯಕನಾ ಭಕ್ತಿಯೊಳ್ ಭಜಿಪರೆಶಕ್ತಿ ಸಾಲದು ಶ್ರೀ ಭಕ್ತವತ್ಸಲನೆ 2

ವಂದಿತ ಭಕ್ತರ ಚಂದದಿಂ ಪಾಲಿಪಸುಂದರ ಮೂರುತಿ ಸಂದೇಹ ಮಾಡದೆ 3

ಹಿಂಡು ಬಾಲರೊಡಗೊಂಡು ಗೋಕುಲದಿಪುಂಡು ಮಾಡಿದ ಪ್ರಚಂಡ ಕೃಷ್ಣ ಬೇಗ 4

ಅಂಗನೆಯರ ವ್ರತ ಭಂಗಗೈಸಿ ತನ್ನಸಂಗವಿತ್ತು ಕಾಯ್ದ ರಂಗನಾಥ ಸ್ವಾಮಿ 5

****


No comments:

Post a Comment