ಬರುವ ಹಾದಿಯ ಪೇಳೆ ಶ್ರೀಹರಿಬರುವ ಹಾದಿಯ ಪೇಳೆ ಪ
ಬರುವ ಹಾದಿಯ ಪೇಳೆ ಬರುವೆನು ಅಲ್ಲಿಗೆ ಪರಮ ಮಂಗಳ ದ್ರವ್ಯ ಕರದಿ ತೆಗೆದುಕೊಂಡು ಅ.ಪ.
ಉತ್ತರ ದಿಕ್ಕಿನಲ್ಲಿ ಇರುತಿಹ ಉತ್ತಮ ಪುರದಲ್ಲಿಮುಕ್ತ ಜನರು ಅವನ್ಹತ್ತಿರ ಇರುವರು ಇತ್ತ ಬಿಡುವರೇನೇ ಏನೇ 1
ಗರುಡನ ಏರಿಹನೆ ತೊಡಿಯೊಳು ತರುಣಿಯ ಕೂಡಿಹನೆಶರಣಾಗತರನು ಪೊರೆವಗೋಸುಗ ತನ್ನ ಪುರವಬಿಟ್ಟಿಹನೇನೇ ಏನೇ 2
ಛತ್ರವ ಪಿಡಿದಿಹರೆ ಚಾಮರ ಸುತ್ತಲು ಬೀಸುವರೇಮತ್ತೆ ಘನ್ನೋದಕ ದಾಟಿ ಬ್ರಹ್ಮನ ಮನಿ ಹತ್ತಿರಬಂದಿಹನೇ ಏನೇ 3
ಸುರಪುರ ಬಿಟ್ಟಿಹನೆ ಕರಿಪುರ ಹತ್ತಿರ ಬಂದಿಹನೆಸ್ಮರಿಸಿ ದ್ವಾರಕೆಯನು ಕುರುಕುಲದಲ್ಲಿ ವಸ್ತಿ ಇರಳುಮಾಡಿದನೇನೇ ಏನೇ 4
ಇಂದು ಈ ಪುರದಲ್ಲಿ ಮನ್ಮನ ಮಂದಿರ ಮಧ್ಯದಲೀಇಂದಿರೇಶನು ಕೃಷ್ಣ ಸುಂದರ ಮೂರುತಿ ಬಂದು ತೋರುವನೇ ನೇ 5
****
No comments:
Post a Comment