Monday, 2 August 2021

ಯದುನಾಥ ಯದುನಾಥ ಮುದದಿಂದಲಿ ಪೊರೆ ಪದುಮಿಣಿ ವಲ್ಲಭ ankita gopalakrishna vittala

ಯದುನಾಥ ಯದುನಾಥ

ಮುದದಿಂದಲಿ ಪೊರೆ ಪದುಮಿಣಿ ವಲ್ಲಭ ಪ.


ಪೊಡವಿಯೊಳಗೆ ಪಡುಗಡಲೆಡೆವಾಸ

ತಡವೇತಕೆ ಪಾಲ್ಕಡಲಶಯನ ಪೊರೆ 1

ಅಣುಮಹ ಕಾಲಾತ್ಮಕ ಸರ್ವೇಶ್ವರ

ಗುಣಗಣಪೂರ್ಣನೆ ಸರ್ವವ್ಯಾಪಕ 2

ಚಿಂತನೆದೂರ ಅಚಿಂತ್ಯ ಮಹಿಮ ಗುಣ

ವಂತ ಅನಂತ ಮಹಂತ ಕಾಲಾಂತಕ 3

ಸ್ಥಾವರ ಜಂಗಮ ಜೀವರ ಬಿಂಬ ಶ್ರೀ

ಪಾವಮಾನಿ ಮತ ಸುಜನೋದ್ಧಾರಕ 4

ಬಾಲರೂಪ ಕಡಗೋಲ ಪಿಡಿದ ಗೋ

ಪಾಲಕೃಷ್ಣವಿಠ್ಠಲ ಉಡುಪೀಶ 5

****


No comments:

Post a Comment