Thursday, 5 August 2021

ವಂದಿಪೆವು ಶ್ರೀ ಜಗನ್ನಾಥ ದಾಸರಿಗೆಬಂಧು ankita bhupati vittala jagannatha dasa stutih

 ..

kruti by bhupati vittalaru ( kakhandaki Ramacharyaru) 


ವಂದಿಪೆವು ಶ್ರೀ ಜಗನ್ನಾಥ ದಾಸರಿಗೆಬಂಧು ಬಳಗವ ಕೂಡಿಕೊಂಡು ಸದ್ಭಕ್ತಿಯಲಿ ಪ


ಹರಿಕಥಾಮೃತಸಾರ ಉದ್ಗ್ರಂಥವನು ರಚಿಸಿಧರೆಗೆ ಮಹದುಪಕಾರ ಮಾಡಿದವಗೆವರಮಧ್ವಸಿದ್ದಾಂತ ಸಾರ ಸರ್ವಸ್ವವನುತಿಳಿಯಾದ ಭಾಷೆಯಲಿ ತಿಳಿಸಿದ ಸಮರ್ಥನಿಗೆ 1

ಪಾಂಡಿತ್ಯ ಮದದಿ ಸ್ವೋತ್ತವರ ದ್ರೋಹವಮಾಡಿತತ್ಫಲವನುಂಡು ಮನಗಂಡು ಬೆಂದುಬೆಂಡಾಗಿಬಂದು ಶರಣೆಂದು ಪಾದಕೆಬೀಳೆ'ಜಯ ಗೋಪಾಲ ದಾಸರು ಅನುಗ್ರ'ಸಿದರು 2

ಸದ್ಭಕ್ತ ಸುಜ್ಞಾನ ವೈರಾಗ್ಯ ಆಯುಷ್ಯದಯಪಾಲಿಸಿದು ದಾಸ ದ್ವಯರಿಗೆವೈರಾಗ್ಯ ಒಡಮೂಡಿ ಪಾಂಡಿತ್ಯ ಮದ ಓಡಿಹರಿದಾಸ ದಿಕ್ಷೆಯನು ಪಡೆದಾಗ ಶ್ರೀನಿವಾಸಚಾರ್ಯ ಹರಿದಾಸ ನಾದ 3

ಗುರು ಆಜ್ಞೆ ಕೊಡಲು ಪಂಢರಿಗೆ ಹೋದರು ಅಲ್ಲಿರುಕ್ಮಿಣಿ ಪಾಂಡುರಂಗನ ಔತಣಚಂದ್ರಭಾಗಿಯಲಿ 'ಜಗನ್ನಾಥವಿಠಲ'ನೆಂಬ ಅಂಕಿತವು ದೊರಕಿತು ಸ್ನಾನಕಾಲದಲಿ 4

ನಿತ್ಯ ಹರಿನಾಮ ಸಂಕೀರ್ತನವು ಹಗಲಿರಳು ನಿತ್ಯನೂತನ ಪದ ಸುಳಾದಿಗಳ ಸುಗ್ಗಿನಿತ್ಯ ಸದ್ಭಕತರಿಗೆ ಪಾಠ ಪ್ರವಚನಭಕ್ತರಾಧೀನ ಭೂಪತಿವಿಠ್ಠಲನು ಕುಣಿದ 5

***


No comments:

Post a Comment