..
kruti: tandevaradagopala vittala (ಪ್ರಹ್ಲಾದಗೌಡರು)
ತಾಯಿ ಅಲ್ಲವೇ ನೀನು ಹೆತ್ತ ಪ
ತಾಯಿಯಾದ ಮೇಲೆ ಕತ್ತೆಮರಿಯಾದರೂ ಪೊರೆಯಬೇಕುಎನ್ನ ಅ.ಪ.
ಸಾರ್ಥಕಾಗಲಿಲ್ಲ ಜನುಮವು ವ್ಯರ್ಥವಾಯಿತಲ್ಲಾಸಾಗುತಿದೆ ಆಯು ಸಹಿಸಲಾರೆ ಬಡಿಸೆ ಭವದ ನೋವು 1
ಸಾರವೆಲ್ಲಿದೆ ಸಂಸಾರ ಶರಧಿಯೊಳಗೆ ಮುಣುಗಿದೆ ಅಸಾರ ಸುಖವ ಸವಿದು ಘನ ಸಂಸಾರಿ ಎನಿಸಿ ಮೆರೆದೆ 2
ನಿಷ್ಠೆಯಿಂದ ನಿನ್ನ ಭಜಿಸಿದೆ ಭ್ರಷ್ಟನಾದೆ ಇನ್ನು ಶಿಷ್ಟರೊಡಯ ತಂದೆವರದಗೋಪಾಲವಿಠ್ಠಲನ ಮುಟ್ಟಿ ಭಜಿಪ ಎನ್ನ 3
***
No comments:
Post a Comment