Thursday, 5 August 2021

ವಂದಿಸುವೆ ಶ್ರೀ ಸುಶೀಲೇಂದ್ರಾರ್ಯರತಂದೆ ankita bhupati vittala susheelendra teertha stutih

 ..

kruti by bhupati vittalaru ( kakhandaki Ramacharyaru) 


ವಂದಿಸುವೆ ಶ್ರೀ ಸುಶೀಲೇಂದ್ರಾರ್ಯರತಂದೆ ಗುರುರಾಘವೇಂದ್ರರ ಪಾದ ತೋರೆಂದು ಪ


ಗುರುಸರ್ವಭೌಮರ ಅಖಂಡ ಸೇವೆಯ ಮಾಡಿವರಸುಮಂತ್ರಾಲಯದಿ ವಾಸಮಾಡಿಸುರಪನಾಲಯವು ಮಂತ್ರಾಲಯವು ಎಂಬಂತೆಹರಿದಾಸರಾಶಯವ ನಿಜಮಾಡಿ ತೋರಿಸಿದ 1

ಉಡುಪಿಯೊಳು ಗುರುಸಾರ್ವಭೌಮರ ವೃಂದಾವನವಚತುರತನದಿಂದ ಪ್ರತಿಷ್ಠಾಪನೆಯ ಮಾಡಿಭರತಖಂಡದ ತೀರ್ಥಕ್ಷೇತ್ರಗಳ ಸಂಚರಿಸಿಭಕುತರಿಗೆ ಶ್ರೀ ಮಠದ ಮಹಿಮೆ ತೋರಿದ ಗುರು2

ಶ್ರೀ ಸಮೀರ ಸಮಯ ಸಂವರ್ಧಿನಿ ಸಭೆಯಸಂಸ್ಥಾಪನೆಯ ಮಾಡಿ ಪಂಡಿತರಿಗೆಭೂರಿ ಸಂಭಾವನೆ ಮೃಷ್ಟಾನ್ನ ಭೋಜನದಿತ್ಟುಗೊಳಿಸುತ ದೇಶ ದಿಗ್ವಿಜಯ ಮಾಡಿದ 3

ಶ್ರೀ ಮಠದ ಕೀರ್ತಿಯನು ಶಿಖರಕ್ಕೆ ಮುಟ್ಟಿಸಿಸ್ವರ್ಣಮಂಟಪರಚಿಸಿ ವೈಭವವ ಬೆಳೆಸಿಶ್ರೀಮೂಲರಾಮ ದಿಗ್ವಿಜಯ ಜಯರಾಮರನುಭಕ್ತಿುಂದ ಪೂಜಿಸಿದ ಭಾಗ್ಯಶಾಲಿ 4

ಗುರುಸಾರ್ವಭೌಮರಿಗೆ ಪರಮ ಪ್ರೀತಿಯ ಕಂದವರಮಧ್ವಮತ ಸುಧಾಂಬುಧಿಗೆ ಚಂದ್ರಪರಮಾತ್ಮ ಭೂಪತಿವಿಠ್ಠಲನ ಪೂಜಿಸುವಪರಮ ಪ್ರಶಾಂತ ಧೀರೆಂದ್ರ ಸನ್ನಿಧಿವಾಸ 5

***


No comments:

Post a Comment