Thursday, 5 August 2021

ದಿಟ್ಟದಿ ನಿನ್ನಯ ಪದಪದ್ಮವನ್ನು ಮನಮುಟ್ಟಿ ankita tandevaradagopala vittala vadiraja stutih

 ..

kruti: tandevaradagopala vittala (ಪ್ರಹ್ಲಾದಗೌಡರು)

(ಶ್ರೀ ವಾದಿರಾಜರು)

ದಿಟ್ಟದಿ ನಿನ್ನಯ ಪದಪದ್ಮವನ್ನು ಮನಮುಟ್ಟಿ ಭಜಿಸುವೆ ಕೃಷ್ಣರಾಯ ಪ

ಸೃಷ್ಟಿ ನಿನ್ನಂಥ ಇಷ್ಟ ಪುಷ್ಟನ ಕಾಣೆ ಶ್ರೀ ಕೃಷ್ಣರಾಯ ಅ.ಪ

ಇಷ್ಟನು ದುಷ್ಟ ಪಾಪಿಷ್ಠನಾಗುವುದುಚಿತವೇ ಕೃಷ್ಣರಾಯಾ ನಿನ್ನ ದೃಷ್ಟೀಲಿ ನೋಡೆನ್ನ ಶ್ರೇಷ್ಠ ಶ್ರೀಷ್ಮಿಪನಿಷ್ಟ ಕೃಷ್ಣರಾಯಾ 1
ಬಾಲನ ವ್ಯಾಕುಲ ಪಲಾಯನಗೈಸಿದೆ ಕೃಷ್ಣರಾಯಾಕಾಲಕಾಲಕೆನ್ನ ಮನಾಲಯದೊಳು ನಿನ್ನ ಪಾಲನ ಪಾಲಿಪನನಿಲ್ಲಿಸಿದೇ ಕೃಷ್ಣರಾಯಾ 2
ತರಳನು ಮರಳಿ ಖಳರೆ ಕೂಡಿ ಗರಳ ಸೇವಿಸಲು ಕಂಡುತ್ಯಜಿಸಿದೆ ಕೃಷ್ಣರಾಯಾತರಳೆಗೆ ನೀ ನಿನ್ನ ಸುಧಿಮಳೆಗರೆಯುತ ಅರಳಿಸೊ ಕೃಷ್ಣರಾಯಾ3
ವಡವುಟ್ಟಿದವರಂತೆ ದುಷ್ಟ ಪಾಪಿಷ್ಟ ಬೆನ್ನಟ್ಟುವನೋ ಕೃಷ್ಣರಾಯಾಗುಟ್ಟದಿ ನಿನ್ನಯ ದೃಷ್ಟಿಲಿ ನೋಡಿ ಆ ದುಷ್ಟನ ಸುಟ್ಟು ಹಾಕೊ ಕೃಷ್ಣರಾಯಾ4
ಮಧ್ಯಾನ್ಹ ಸಮಯದಿ ಮಧ್ವದಾಸನ ಭೂಷಿಪ ಶೇಷನ ವೈರಿಯ ಕೃಷ್ಣರಾಯಾದಾನವ ಗೈದು ದೂತಿಯ ಕರದಿಂದ ದೋಷಿಯೆಂದೆನಿಸಾದೆಸಲಹಿದೊ ಕೃಷ್ಣರಾಯಾ 5
ಅರಿಯದೆ ಪೋಗಿ ನಾಥಾ ತ್ರಿನಾಮನ ಕೂಡ ಭುಂಜಿಸಿದೆ ಕೃಷ್ಣರಾಯಾಅರಿಯು ನೀನಲ್ಲದೆ ಅನ್ಯರ ನಾಕಾಣೆ ಮೈಗಣ್ಣ ಕೃಷ್ಣರಾಯಾ 6
ಎನ್ನ ತನುಮನ ಧನಧಾನ್ಯ ಮನೆಯ ಮಕ್ಕಳೆಲ್ಲಾ ನಿನ್ನ ಚರಣಾಲಯವೋ ಕೃಷ್ಣರಾಯಾನಿನ್ನ ಗುಣಗಣಗಳೆಲ್ಲಾ ಅಗಣಿತವೋ ಅನ್ನಪೂರ್ಣೆಗೆಕೃಷ್ಣರಾಯಾ7
ಆದಿ ಅನಾದಿ ಅನೇಕನಾದಿ ಜನುಮದಿ ಎನ್ನಲ್ಲಿದ್ಯೋ ಕೃಷ್ಣರಾಯಾ ದೇವ ದೇವೇಶ ನೀನೆಂದು ದಯದಿಂದ ತೋರೋಕೃಷ್ಣರಾಯಾ 8
ಚರಣದ ಚರ್ಮಲ ಚಂದಸುವಸನ ತೋದ್ರ್ಯೋ ಕೃಷ್ಣರಾಯಾ ಆಲಸ್ಯ ಮಾಡುತ ತಾಳದೆ ನಿನ್ನ ಬಲಿನ ತೋದ್ರ್ಯೋಕೃಷ್ಣರಾಯಾ 9
ನಾರಂಗಿ ಫಲವನ್ನು ತಿಂದು ನೀ ನವರಸ ಭರಿತದಿ ನಿಂತ್ಯೋ ಕೃಷ್ಣರಾಯಾ ನಾರಿಯ ಮನವ ನೀನರಿತು ನಿನ್ನ ಮನವನಿತ್ತೆ ಕೃಷ್ಣರಾಯಾ 10
ಮೂರಾರು ಎರಡೊಂದು ನಿಂದಿಪ ಮತವನ್ನು ಛಂದದಿಖಂಡಿಸಿದೊ ಕೃಷ್ಣರಾಯಾಗಂಗಾದಿ ಕ್ಷೇತ್ರವು ಹಾಗದೇ ಚರಿಸಿ ತುಂಗದಿ ಬಂದು ಮೈಗಂಧ ತೋದ್ರ್ಯೋ ಕೃಷ್ಣರಾಯಾ 11
ಅಂಗದಿದ್ದುಕೊಂಡು ಪಂಚಭೇದವ ನರುಹಿದೆ ಕೃಷ್ಣರಾಯಾ ತಾರತಮ್ಯವನಿತ್ತು ನಿರುತದಿ ಸ್ಮರಿಸೆಂದು ತರುಳರಿಗುಪದೇಶಿಸಿದೆ ಕೃಷ್ಣರಾಯಾ 12
ಅರ್ಥಿಯಿಂದಲಿ ವೇದ ವೇದ್ಯತೀರ್ಥರ ಪ್ರಬಂಧ ತೀರ್ಥವ ತೋರಿ ನೀ ಕೃತಾರ್ಥನ ಮಾಡಿದೋ ಕೃಷ್ಣರಾಯಾಸತಿಸುತ ಜನನಿ ವಡಗೂಡಿ ವಿರೋಧಿಸೆ ಶಾಪವನಿತ್ತೆಕೃಷ್ಣರಾಯಾ 13
ಸತಿಜಾರನರಿತು ಮನದಲ್ಲಿ ಯೋಚಿಸಿ ಚೋರನಂದದಿ ಜರಿದು ಚರಿಸಿದಿ ಕೃಷ್ಣರಾಯಾಚರಿಸುತ ಧರೆಯೊಳು ಚೋರ ಜಾರನ ಪೊರೆದೆ ಕೃಷ್ಣರಾಯಾ14
ಅಂಗದಿ ಅಂಗಿತೊಟ್ಟು ಭಂಗವಿಲ್ಲದೆ ಕೂಡಲಗಿರಿಯಲಿ ಭುಂಜಿಸಿದೆ ಕೃಷ್ಣರಾಯಾತೀರ್ಥಗಿಂಡಿಯ ಮುಟ್ಟೆಂದು ಅಂಧಕರಾಯನು ಪೇಳಲು ಮುಟ್ಟಲಂಜದೆ ಗಾಡಿ ಧರಿಸಿದೆ ಕೃಷ್ಣರಾಯಾ 15
ತಂಡುಲವಿಲ್ಲದೆ ಪವಾಡತನದಿ ಕೂತುದ್ದಂಡ ಭೀಮನ ಸ್ಮರಿಸಿದೊ ಕೃಷ್ಣರಾಯಾ ತೊಂಡನ ಸತಿಯ ಕೈಗೊಂಡು ಪುಂಡ ಕಂಸಾರಿಯ ಸ್ಮರಿಸಿದೊ ಕೃಷ್ಣರಾಯಾ16
ಸ್ವಾದಿ ಕ್ಷೇತ್ರದಿ ಪೋಗಿ ಛತ್ರದಿ ಅರ್ಚಿಸಿಕೊಂಡ್ಯೋ ಕೃಷ್ಣರಾಯಾ ಮನವನ ಚರಿಸುತ ತಪವನೆಗೈಯುತ ಕಪಿಯನ್ನೇ ಪುಡುಕಿದ್ಯೊ ಕೃಷ್ಣರಾಯಾ 17
ಚಿಕ್ಕ ಬದಿರಲಿ ಪೋಗಿ ಬಲು ಅಕ್ಕರದಿ ನಿನ್ನ ಪಡೆದನ ಕಪ್ಪುಗೊರಳನ ರೂಪದಿ ಕಂಡ್ಯೋ ಕೃಷ್ಣರಾಯಾ ಸ್ವಪ್ನದಿ ಸರ್ವರ ಕಾಣುತ ಸ್ವಪದವಿಯನೇರಿದ್ಯೋಕೃಷ್ಣರಾಯಾ 18
ತಾಮಸ ಜೀವನು ಜವನಂತೆ ಜೂಜಿಸೆ ಜೀವನವರಿಸಿದ್ಯೋ ಕೃಷ್ಣರಾಯಾಲೇಖವು ಬರೆಯಲು ಲೋಕಾವಧರಿಸಿದ ವಾರುಣೀಶನಂತೆ ಪೌರುಷ ತೋರಿ ಫಣಿರೋಗ ನಿತ್ಯೋ ಕೃಷ್ಣರಾಯಾ 19
ಎನ್ನ ಜನ್ಮವಾದ ದಿನದಲ್ಲಿ ಜೀವೇಶರಾಯನ ಪೂಜಿಸಿದ್ಯೋ ಕೃಷ್ಣರಾಯಾಪೂಜಾದಿ ಪೂಜಿಸಿ ಪೂರ್ಣ ಆಯುವಿತ್ತು ಜೀವನುದ್ಧರಿಸಿ ಜೋಕೆಯೋ ಕೃಷ್ಣರಾಯಾ 20
ಅಕ್ಕನ ಕೈಯಲ್ಲಿ ದಿಕ್ಕಿಲ್ಲದವರಂತೆ ಸಿಕ್ಕು ಸುಖಬಟ್ಯೋ ಕೃಷ್ಣರಾಯಾ ದಿಟ್ಟದಿ ನಿನ್ನಯ ಗುಟ್ಟು ತಿಳಿಸಿ ಬೆಟ್ಟದೊಡೆಯ ತಂದೆವರದಗೋಪಾಲವಿಠಲನಪದಪದ್ಮಗಳನ್ನೆ ಮುಟ್ಟಿ ಭಜಿಸುವಂತೆ ದಿಟ್ಟನ ಮಾಡುಶ್ರೀ ಗುರು ಕೃಷ್ಣರಾಯಾ 21
***

No comments:

Post a Comment