Wednesday, 1 September 2021

ರಂಗ ಬಾರನ್ಹ್ಯಾಗೆ ಮಾಡಲಂಬುಜಾಕ್ಷಿಯೆ ರಂಗ ಬಾರನ್ಹ್ಯಾಗೆ ಮಾಡಲೆ ankita bheemesha krishna

 ..

ರಂಗ ಬಾರನ್ಹ್ಯಾಗೆ ಮಾಡಲಂಬುಜಾಕ್ಷಿಯೆ

ರಂಗ ಬಾರನ್ಹ್ಯಾಗೆ ಮಾಡಲೆ ಪ


ಈತನಿಲ್ಲದೆನ್ನ ಮನದ ತಾಪ ಹೋಗದು

ಶೀತ ಕಳೆವೊ ಸೂರ್ಯನಂತೆ ದ್ವಾರಾವತಿಯ ನಿಲಯನಮ್ಮ 1


ಅಕ್ಕ ರುಕ್ಮಿಣಿಯಲ್ಲಿ ನಕ್ಷತ್ರಮಧ್ಯಚಂದ್ರನಂತೆ

ಪೊಕ್ಕಳಿಂದಲಜನ ಪಡೆದ ಚಕ್ರಧಾರಿ ಅಕ್ಕರ ಪಡುವೊ 2


ಕರೆದುತಾಹೋರೊಬ್ಬರಿಲ್ಲ ಕರುಣಾನಿಧಿಯೆಂಬುವುದು ಸಲ್ಲ

ತರುಣಿ ಸತ್ಯಭಾಮೆಗಧಿಕ ತಿಳಿದು ತನ್ನ ರುಕ್ಮಿಣಿಯಲ್ಲಿರುವ 3


ಉಂಗುರದ ಹರಳಿನಂತೆ ಹೊಂದಿಕೊಂಡು ರುಕ್ಮಿಣಿಯನ್ನು

ಇಂದಿರೇಶ ಬಿಟ್ಟಿನ್ನೊಬ್ಬರ ಮಂದಿರಕ್ಕೆ ಬಂದಿಹನ್ಹ್ಯಾಗೆ 4


ಮಂದಮತಿಯು ಆದನೇನೆ ತಂದೆಯಾದ ಸತ್ರಾಜಿತನು

ತಂದುಕೊಟ್ಟನೆನ್ನ ಈ ಸುಂದರಳಾದ ಸೌ(ಸವ?) ತಿ ಕೆಳಗೆ 5


ಅಕ್ರೂರಜಮಿಳಂಬರೀಷ ಚಿಕ್ಕಧ್ರುವ ಪ್ರಹ್ಲಾದ ಗಜನು

ಭಕ್ತಿಯಿಂದ ಕರೆಯೆ ಕಣ್ಣೆತ್ತಿ ನೋಡನವರನೀಕಾಲಕ್ಕೆ 6


ಗಾಯನದಿ ಗಂಧರ್ವ ಬಂದು ನಾರದ ಸುದಾಮ ಬಂದು

ಬೇಡಿಕೊಂಡು ಕರೆಯಲವರ ನೋಡಿ ಮುಂದಕೆ ಬರುವನಲ್ಲ 7


ಸೋಳ ಸಾವಿರ ಸತಿಯರೆಲ್ಲ ಭಾಳ ಚಿತ್ರಭೂಷಿತರಾಗಿ

ಏಳು ಕೃಷ್ಣೇಳೆಂದು ನಾಲ್ಕು ತೋಳು ಪಿಡಿದು ಕರೆವೋಣೇನೆ 8


ಮಿತ್ರೆ ಕಾಳಿಂದಿ ಭದ್ರೆ ಲಕ್ಷಣಾ ನೀಲ ಜಾಂಬವಂತಿ

ಹಚ್ಚಿದ್ಹಗಲು ಬತ್ತಿಯಂತೆ ಸುತ್ತುಗಟ್ಟಿ ಕರೆವೋಣೇನೇ 9


ಪುತ್ಥಳ್ಯಂತ ರುಕ್ಮಿಣಿ ತೊಡೆಯಲಿಟ್ಟು ಕುಳಿತನಿಂದಿರೇಶ

ಬಿಟ್ಟರಾಕೆ ನಮ್ಮನು ಕಣ್ಣೆತ್ತಿ ನೋಡೋದಷ್ಟೆ ಹೊರತು 10


ಗೊಲ್ಲ ಸತಿಯರೆಲ್ಲ ತಮ್ಮಲ್ಲಿ ದಧಿಬೆಣ್ಣೆಗಳ ತಂದು

ಮೆಲ್ಲು ಕೃಷ್ಣಯೆಂದು ಕರೆಯೆ ಫುಲ್ಲನೇತ್ರ ತೆಗೆದುಕೊಂಡ11


ಅಷ್ಟರೊಳಗೆ ಪ್ರೀತಿಯುಳ್ಳ ಸೊಟ್ಟ ಕುಬ್ಜೆ ಕರದಿ ಗಂಧ

ಹಚ್ಚೇನೆಂದು ಕರೆಯೆ ಬೆನ್ಹತ್ತಿ ಬರುವನೇನೆ ಕೃಷ್ಣ 12


ಸಾಸಿರ್ಹೆಡೆಯ ಮಂಚವಿಳಿದು ಸರಸವಾದ ವಚನದಿಂದ

ಭೀಷ್ಮೆ ಭಿಡಿಯವೇನೆ ಭೀಮೇಶಕೃಷ್ಣನ ಕರೆವೋದಕ್ಕೆ13

***


No comments:

Post a Comment