..
ನೆರೆದು ಗೋಪಿಯರೆಲ್ಲರು - ಕೃಷ್ಣಯ್ಯನಕರವ ಪಿಡಿದುಕೊಂಡುಭರದಿಂದ ಬಂದು ಯಶೋದೆಗೆ ಚಾಡಿಯಅರುಹಿದರತಿ ವೇಗದಿ ಪ
ಬಲು ಕಳ್ಳ ನಿನ್ನ ಮಗ - ಯಶೋದೆ ಕೇಳೆಹಾಲು ಕರೆಯುತಿರಲುತೊಲೆಗೆ ನಿಚ್ಚಣಿಕೆಯನೆ ಹಾಕದೆ ಸುರಿದನುನೆಲುವಿನ ಪಾಲ್ಮೊಸರ 1
ಅಮ್ಮಯ್ಯ ಇಲ್ಲ ಕಾಣೆ - ಇವಳು ಎನ್ನಸುಮ್ಮನೆ ದೂರುವಳೆಹಮ್ಮಿಂದ ನಾನವಳ ಅಟ್ಟಕ್ಕೆ ನೆಗೆಯಲುಬೊಮ್ಮ ಜಟ್ಟಿಗನೇನಮ್ಮ2
ಮತ್ತೆ ಮುತ್ತಿನಂಥ - ನಿನ್ನೀ ಮಗಹತ್ತಿ ಗವಾಕ್ಷದಿಂದಎತ್ತಿಟ್ಟ ಬೆಣ್ಣೆಯನೆಲ್ಲದ ಮೆದ್ದನುಹೆತ್ತ ಮಕ್ಕಳಿಗಿಲ್ಲದಂತೆ 3
ಗಡಿಗೆ ಬೆಣ್ಣೆ ಮೆಲ್ಲಲು - ಎನ್ನ ಹೊಟ್ಟೆಮಡುವು ಭಾವಿಯೇನೆಹುಡುಗರಿಗರಿಯದೆ ಎತ್ತಿಟ್ಟ ಬೆಣ್ಣೆಯಹೊಡೆದರವರ ಮಕ್ಕಳು 4
ಮರೆತು ಮಂಚದ ಮೇಲೆ - ನಾ ಮಲಗಿರಲುಹರಿವ ಹಾವನೆ ತಂದುಅರಿಯದಂತೆ ಬಂದು ಮುಸುಕಿನೊಳಗಿಟ್ಟುಸರಸರ ಪೋದನಮ್ಮ 5
ಹರಿದಾಡುವ ಹಾವನು - ನಾ ಹಿಡಿಯಲುತರಳ ನಾ ತಡೆಗಾರನೆಹರಕೆಯ ಹೊತ್ತುದನೊಪ್ಪಿಸದಿರಲುಗುರುತು ತೋರಲು ಬಂತೇನೊ6
ಹಸುಮಗು ನೋಡಿದರೆ - ತಾಟಕನಿವಮೊಸರು ಕಡೆಯುತಿರಲುಮಿಸುಕದೆ ಬಂದು ಕಕ್ಕಸ ಕುಚಗಳಮುಸುಕಿನೊಳಗೆ ಹಿಡಿದ 7
ಕೇಳು ಕೇಳೆಲೆ ಅವ್ವ - ಇವಳು ಬೇ-ತಾಳನಂತಿರುವಳುಬಾಲಕ ನಾನವಳುದ್ದಕೆ ನೆಗೆವೆನೆಜೋಲುವ ತೊಗಲಿಗಾಗಿ 8
ಮಕ್ಕಳು ಪಡೆದವರು - ಇಲ್ಲದ ಕಳವಿಕ್ಕಬಹುದೆ ಕೃಷ್ಣಗೆಸಿಕ್ಕ ತಪ್ಪು ಸಮೇತ ಎಳೆತಂದರೆತಕ್ಕ ಬುದ್ಧಿಯ ಹೇಳುವೆ 9
ಅಣುಘನರೂಪ ಕಾಣೆ - ನಿನ್ನೀ ಮಗಚಿನುಮಯ ರೂಪ ಕಾಣೆಘನ ಮಹಿಮನು - ಇಂಗಳಗೊಂದಿಯಚೆನ್ನಕೇಶವರಾಯ ಕಾಣೆ 10
***
No comments:
Post a Comment