..
ಗರುಡದೇವರು
ರಕ್ಷಿಸೆನ್ನನು ಪಕ್ಷೀಂದ್ರನೆ ನೀನು ಪ
ರಕ್ಷಿಸೆನ್ನನು | ಪಕ್ಷಿಪ ಕರುಣಿಕ
ವಾಕ್ಷದಿಂದೀಕ್ಷಿಸು | ತೀಕ್ಷಣ ಬಿಡದೆ ಅ.ಪ
ತಂದೆಯನುಜ್ಞದಿ | ಸಿಂಧೂರ ಕೂರ್ಮ
ದ್ವಂದ್ವ ಪ್ರಾಣಿಗಳ | ತಿಂದ ಮಹಾತ್ಮ ||
ಅಂದು ಪೀಯೂಷವ | ತಂದು ಮಾತೆಯ
ಬಂಧನ ಬಿಡಿಸಿದ ಬಂಧುರ ಮಹಿಮ
ಗಗನ ಗಮನ ಪನ್ನಪನೆ ಪ್ರಾರ್ಥಿಪೆ
ಮಿಗೆ ಕರುಣದಿ ಯನ್ನಘು ದೂರೋಡಿಸಿ 1
ಧಾರಣಿಯೊಳವತಾರ ರಹಿತ ಶೃಂ
ಗಾರವಾದ ಬಂಗಾರ ಶರೀರ 2
ವಂದಿಪೆ ವಿನುತ ನಂದನ ಶಾಮ
ಸುಂದರವಿಠಲನ | ಶ್ಯಂದನ ಶೂರ 3
***
No comments:
Post a Comment