" ವರದರಾಜಾಂಕಿತ " ಶ್ರೀ ತರಂಗಿಣೀ ರಾಮಾಚಾರ್ಯರ ವದನಾರವಿಂದದಲ್ಲಿ ಹೊರಹೊಮ್ಮಿದ - ತಮ್ಮ ವಿದ್ಯಾ ಗುರುಗಳಾದ ಶ್ರೀ ವಿಜಯೀ೦ದ್ರ ತೀರ್ಥರ ಸ್ತೋತ್ರ "
ರಾಗ : ಆನಂದಭೈರವಿ ತಾಳ : ರೂಪಕ
ವಿಜಯೀ೦ದ್ರ ಗುರುರಾಯರ ಅನುದಿನ ।
ಪೂಜಿಸಿದೈ ಮುದದಿ ।। ಪಲ್ಲವಿ ।।
ಯಾಚಕ ಭಕ್ತರ ಕಲ್ಪಭೂಜನಾಗಿ ಪುಟ್ಟಿ ।
ವ್ಯಾಸರಾಯರನುಗ್ರಹ ಪಡೆದು -
ಜಗದಿ ಮೆರೆವ ।। ಅ ಪ ।।
ಮುಂದೆ ಬೊಮ್ಮನಾಗಿ । ಪುಟ್ಟುವಾ ।
ನಂದತೀರ್ಥರ ಗ್ರಂಥಗಳಂದ ।
ಚಂದರೀಕಾಚಾರ್ಯರಿಂದ ತಳಿದು -
ನಲಿದು ಲೋಕದೊಳು ಮೆರೆದು ।
ಸುಂದರಾಂಗ ಶ್ರೀ ಮೂಲರಾಮ -
ಚಂದ್ರನ ಚರಣಾರವಿಂದ ।
ಅಂದದಿಂದ ಭಜಿಸುತ್ತ -
ಬಂದು ಕುಂಭಕೋಣದಿ -
ನಿಂತ ।। ಚರಣ ।।
ಪಂಕಜಧರೋತ್ತಮನೆಂಬೋ-
ಸುಧಾಮೋದಗಳಿಂದ ।
ಹಿಂಗದೆ ಶಿಷ್ಯರಿಗರುಹುತ -
ಶ್ರುತಿ ಸ್ಮೃತಿಗಳಿಂದ ಕೂಡಿ ।
ಶಂಕಿಸುತ ಬರುವ ಮಾಯಾಮತ -
ಕಿಂಕರರ ಕರಗಳ ।
ಬಿಂಕದಿ ಮಧ್ವಸಿದ್ಧಾಂತ-
ದಂಕುಶದಿಂದ ಸದೆದ ।। ಚರಣ ।।
ಶೀಲ ಭಕ್ತ ಮನ । ಕ ।
ಮಲ ಭಾನುಧೇನುವಾಗಿ ಸೇವಕರ ।
ಪಾಲಿಸಿ ಸಂತಾನ ಕೊಡುವ ನೋಡಿ -
ಬೇಡಿ ಈಡಿಲ್ಲಧಾ೦ಗೆ ।
ಇಳಿಯುತ ಕಾಂಚೀಪುರದಾ -
ನೆಲದಿ ಶೇಷಶಯನನಾದ ।
ಚಲುವ ವರದರಾಜನ ನೋಡಿ -
ನಲಿದು ನಲಿದು -
ಕುಣಿದಾಡುವ ।। ಚರಣ ।।
***
No comments:
Post a Comment