Thursday, 1 July 2021

ವಿಜಯೀಂದ್ರರ ಪಾಡಿರೊ ಸುಜನರೆಲ್ಲರೂ ಮುದದಿ ankita venkatanatha vijayeendra teertha stutih

 ಆಚಾರ್ಯ ನಾಗರಾಜು ಹಾವೇರಿ......

ವಿಜಯೀ೦ದ್ರರ ಪಾಡಿರೊ ।

ಸುಜನರೆಲ್ಲರೂ ಮುದದಿ ।

ವಿಜಯೀ೦ದ್ರರ ಪಾಡಲು ।

ವಿಜಯ ಸಖ ಒಲಿವಾ ।। ಪಲ್ಲವಿ ।।


ವಿಬುಧೇಂದ್ರರೇ ವಿಠಲಾರ್ಯರು ।

ವಿಬುಧಮಣಿ ವಿಠಲಾರ್ಯರೇ -

ವಿಜಯೀದ್ರರು ।। ಅ ಪ ।।


ಗುರು ಸುರೇಂದ್ರರು ಕೇಳೇ ।

ಗುರು ವ್ಯಾಸಮುನಿಯು ಕೊಡೆ ।

ಗುರು ವಿಜಯೀ೦ದ್ರನಾಗಿ ।

ಗುರು ಸುಧೀಂದ್ರ ಪಿತನಾಗಿ -

ಮೆರೆದ ।। ಚರಣ ।।


ಚಾತುರ್ಯದಿ ಅಪ್ಪಯ್ಯನ ಜಯಿಸಿ ।

ಚತುರೋತ್ತರ ಶತ ಗ್ರಂಥ ವಿರಚಿಸಿ ।

ಚತುರಾಸ್ಯನುತನಿಗೆ ಮುದದಿ ಅರ್ಪಿಸಿ ।

ಚತುರಕುಲಜನಿಗೆ ಪ್ರಿಯರಾದ ।। ಚರಣ ।।


ವಿಜಯೀ೦ದ್ರತೀರ್ಥ ಶುಭತಮ ನಾಮವಿತ್ತರು ।

ವಿಜಯ ಶೀಲರಾದ ಸುರೇಂದ್ರರು ।

ನಿಜ ತತ್ತ್ವ ಸಿದ್ಧಾಂತ ಸ್ಥಾಪಿಸಿ ದುರ್ಮತ ।

ದುರ್ಜನ ದುರ್ವಾದ ಚೂರ್ಣ ಮಾಡಿದರು ।। ಚರಣ ।।


ವಿಜಯ ಸಖ ಮೂಲರಾಮೋSಭಿನ್ನ । 

ಅಜನ ಪಿತ ವೇಂಕಟನಾಥನ -

ಆರಾಧಕರು ।। ಚರಣ ।।

***


No comments:

Post a Comment