ಶ್ರೀ ಐಕೋರು ಆಚಾರ್ಯರ ಮೇಲೆ ಶ್ರೀ ಶ್ಯಾಮಸುಂದರದಾಸರ ರಚನೆ...
ikoor narasimhacharya 1700 stutih
ಶ್ರೀಮತ್ಕೃಷ್ಣ ತರಂಗ ನಿಲಯ ಐಕೂರು ಗ್ರಾಮ ನಿಲಯ
ಸ್ತಂಭೋದ್ಭವ ನಾಮಧೇಯ ದ್ವಯಭಾರ್ಯಾ ಸುಮನಃ ಪ್ರಿಯಃ ।
ಸದ್ಭಾಕ್ತಾರ್ತಿ ವಿದೂರ ವಿಮಲ ಹೃದಯ ಅತ್ಯಂತ ಕರುಣಾಮಯ
ಅಸ್ಮದ್ ಸದ್ಗುರುವರ್ಯ ಏಯೋ ನಮಗೆ ನೀ ನಿತ್ಯ ಸನ್ಮಂಗಳ ।। ೧ ।।
ಸಾರೋದ್ಧಾರ ಸುಗೀತ ಭಾರತಯುತ ವೇದಾರ್ಥ ಸಂಪೂರಿತ
ಸಲ್ಹಾದಾಂಶಜ ದಾಸವರ್ಯ ವಿರಚಿತ ಶ್ರೀ ಶೌರಿಕಥಾಮೃತ ।
ಪಾರಜ್ಣಂ ಸುಶಿಲೇಂದ್ರ ಮಮತ ಸಂಪೂರ್ಣ ಸಂಪಾದಿತ
ಅಸ್ಮದ್ ಸದ್ಗುರುವರ್ಯ ಏಯೋ ನಮಗೆ ನೀ ನಿತ್ಯ ಸನ್ಮಂಗಳ ।। ೨ ।।
ಅಷ್ಟಪದಲೋಷ್ಟ ಭಾವ ಸಮತ ಧೀಶ ಸನ್ಮಾನಿತ
ಅಷ್ಟೈಕಾಮಲ ಭಕ್ತಿ ಜ್ಞಾನ ಭರಿತ ವೈರಾಗ್ಯ ಸಂಶೋಭಿತ ।
ಸೃಷ್ಟ್ಯಾಂತರ್ಗತ ಬಿಂಬ ಮೂರ್ತಿ ಸತತ ಸಂದರ್ಶನಾ ನಂದಿತ
ಅಸ್ಮದ್ ಸದ್ಗುರುವರ್ಯ ಏಯೋ ನಮಗೆ ನೀ ನಿತ್ಯ ಸನ್ಮಂಗಳ ।। ೩ ।।
ಶೃಂಗಾರಾಂಗ ಸುನಾಮ ದ್ವಾದಶ ಧೃತ ಮುದ್ರಾಕ್ಷತಾಲಂಕೃತ
ಗಂಗಾನಂಗಪಿತಾಂಘ್ರಿ ಕಮಲಜ ಪಿತ ಪದ್ಮಾಕ್ಷಯಾಲಾಂಚಿತ ।
ಇಂಗಿತಜ್ಞ ಸುಸಾಧು ಸಂಗ ಸಹಿತ ಮುಕ್ತ್ಯಾಂಗನಾಲಂಗಿತ
ಅಸ್ಮದ್ ಸದ್ಗುರುವರ್ಯ ಏಯೋ ನಮಗೆ ನೀ ನಿತ್ಯ ಸನ್ಮಂಗಳ ।। ೪ ।।
ತಾಪತ್ರಯ ದೂರ ಪಾಪ ರಹಿತ ಕೋಪಾದಿ ಗುಣ ವರ್ಜಿತ
ಶಾಪಾನುಗ್ರಹಶಕ್ತ ಸುಜನ ಪ್ರೀತ ಸಂಸಾರಘನಮಾರುತ ।
ಗೋಪಾಲಾಖ್ಯದಾಸವರ್ಯ ಕವಿತಾ ಗೂಢಾರ್ಥ ಸಂಬೋಧಿತ
ಅಸ್ಮದ್ ಸದ್ಗುರುವರ್ಯ ಏಯೋ ನಮಗೆ ನೀ ನಿತ್ಯ ಸನ್ಮಂಗಳ ।। ೫ ।।
ಆಧ್ಯಾತ್ಮ ಸುವಿಚಾರ ಶಾಸ್ತ್ರ ಸತತ ಶ್ರುತ್ಯರ್ಥ ಬಹು ಗರ್ಭಿತ
ಸತ್ಯಾವಲ್ಲಭ ಸತ್ಯದೇವ ಚರಿತ ವಕ್ತಾರ ಬುಧ ಸಮ್ಮತ ।
ನಾಡ್ಯಂತರ್ಗತ ಸರ್ವತೀರ್ಥ ಸ್ನಾತ ತನ್ಮೂರ್ತಿ ಪ್ರತ್ಯಕ್ಷಕ
ಅಸ್ಮದ್ ಸದ್ಗುರುವರ್ಯ ಏಯೋ ನಮಗೆ ನೀ ನಿತ್ಯ ಸನ್ಮಂಗಳ ।। ೬ ।।
ಧರ್ಮಾಚಾರ ವಿಚಾರ ಶೀಲ ನಿರತ ಷಟ್ಕರ್ಮ ಸಂಭೂಷಿತ
ನಿರ್ಮತ್ಸರ ಮೋಹ ದೇಹ ಮಮತ ಸುಶರ್ಮ ಕುಲರಾಜಿತ ।
ಭರ್ಮೋದರವಾತಜಾತಪೋತ ಜಾತಾರಿ ಖತಿವರ್ಜಿತ
ಅಸ್ಮದ್ ಸದ್ಗುರುವರ್ಯ ಏಯೋ ನಮಗೆ ನೀ ನಿತ್ಯ ಸನ್ಮಂಗಳ ।। ೭ ।।
***
No comments:
Post a Comment