Saturday 1 May 2021

ಬಾರಯ್ಯ ಬಾರಯ್ಯಾ ಸೂರಿವರಿಯ ಐಕೋರು ankita shyamasundara ikoor narasimhacharya stutih

 " ಶ್ರೀ ಶ್ಯಾಮಸುಂದರದಾಸರ ಕಣ್ಣಲ್ಲಿ ಗುರುಗಳಾದ ಶ್ರೀ ಐಕೋರು ನರಸಿಂಹಾಚಾರ್ಯರು "

ರಾಗ : ಪೂರ್ವಿ ತಾಳ : ತ್ರಿವಿಡಿ


ಬಾರಯ್ಯಾ ಬಾರಯ್ಯಾ ।

ಸೂರಿವರಿಯ ಐಕೋರು ನಿಲಯ ಗುರು ।। ಪಲ್ಲವಿ ।।


ನೀನಾಕಿದ ಸುಜ್ಞಾನದ ಸಸಿಗಳು ।

ಮ್ಲಾನವಾಗುತಿವೆ ಸಾನುರಾಗದಲಿ ।। ಚರಣ ।।


ಸಲೆ ತವ ಕರುಣ ಸಲಿಲವ ಎರದು ।

ಘಳಿಲನೆ ವೃದ್ಧಿಯಗೊಳಿಸಿ ಸಲಹಲು ।। ಚರಣ ।।


ನಾಟಿದ ಸಸಿಗಳು ನೀಟಾಗುವ ಪರಿ ।

ತೋಟಿಗ ನೀ ಕೃಪೆ ನೋಟದಿ ಸಲುಹಲು ।। ಚರಣ ।।


ಕೋವಿದವರ ನೀ ಕಾವಲಿ ಇರಲು । ಕು ।

ಜೀವಿಗಳಿಂದಲಿ ಹಾವಳಿಯಾಗದು ।। ಚರಣ ।।


ನೀ ಮರೆದರೆ ಸುಕ್ಷೇಮವಾಗುದು ।

ಶ್ಯಾಮ ಸುಂದರನ ಪ್ರೇಮದ ಪೋತ ।। ಚರಣ ।।

*****

No comments:

Post a Comment