Saturday, 1 May 2021

ಪ್ರಾಣಪತಿವಿಠಲ ಸಲಹೋ ಇವನಾ ankita tandemuddu mohana vittala pranapati vittala dasa stutih

 ಶ್ರೀ ತಂದೆ ಮುದ್ದು ಮೋಹನದಾಸರು ಬಾಗೇಪಲ್ಲಿ ಶ್ರೀ ಶೇಷದಾಸರಿಗೆ ವಿದ್ಯುಕ್ತವಾಗಿ " ಪ್ರಾಣಪತಿವಿಠಲ " ಎಂದು ಅಂಕಿತೋಪದೇಶ ಮಾಡಿ ಅವರನ್ನು ತಮ್ಮ ಪ್ರಪ್ರಥಮ ಶಿಷ್ಯರನ್ನಾಗಿ ಸ್ವೀಕಾರ ಮಾಡಿದರು. 

ಅಂಕಿತ ಪದ....

ರಾಗ : ಕಾಂಬೋಧಿ  ತಾಳ : ಝಂಪೆ


ಪ್ರಾಣಪತಿವಿಠಲ -

ಸಲಹೋ ಇವನಾ ।। ಪಲ್ಲವಿ ।।

ಮಾನಾಭಿಮಾನಕೆ -

ಒಡೆಯನೆಂದೆನಿಸಿ ಸಿರಿ ।। ಅ. ಪ ।।

ಮಾಡಬಾರದ ಕಾರ್ಯ -

ಮಾಡಿ ಇದ್ದರೂ ಇವನ ।

ರೂಢಿಯೊಳಗೆ ಕೈ-

ಬಿಡದೆ ಸಲಹಬೇಕೋ ।

ಕಾಡಬ್ಯಾಡಿವನನ್ನು 

ಒಡೆಯ ಸಿರಿ ನರಹರಿಯೇ ।

ಜೋಡಿಸಿ ಕರಗಳನು 

ಬೇಡಿಕೊಂಬುವೆ ನಿನಗೆ  ।। ಚರಣ ।।

ಹರಿ ಗುರುಗಳಲಿ ಸದ್ಭಕ್ತಿ 

ಹಿರಿದಾಗಿ ಇರಲೆಂದು ।

ಹರಿಸಬೇಕಿವನ ನೀ 

ಹರುಷದಿಂದ ।

ಸಿರಿಯರಸ 

ಭರದಿಂದ ಮಾಡಲು ।

ಕರುಣವಾರಿಧಿ ಯೆಂಬ ನುಡಿ-

 ಸಿದ್ಧವಾಗುವುದೋ ।। ಚರಣ ।।

ಹೀಗೆಂದು ಪ್ರಾರ್ಥಿಸುವೆ -

ಭೋಗಿಶಯನನೆ ನಿನಗೆ ।

ಬಾಗಿ ಕರಗಳು 

ಮುಗಿವೆ ಭಾಗ್ಯ ಪುರುಷಾ ।

ಯೋಗಿ ವಂದಿತ ತಂದೆ -

ಮುದ್ದುಮೋಹನವಿಠಲ ।

ಜಾಗು ಮಾಡದೆ ಇವನ -

ಕರುಣಿಸೋ ಸ್ವಾಮೀ   ।। ಚರಣ ।।

****

No comments:

Post a Comment