sukruteendra teertha rayara mutt yati 1912 stutih
ಶ್ರೀ ಲಕುಮೀಶಾಂಕಿತ ಕುರುಡಿ ರಾಘವೇಂದ್ರಾಚಾರ್ಯರು., ಮಂತ್ರಾಲಯ..
ಶ್ರೀ ಸುಕೃತೀಂದ್ರರ
ನೀ ಸೇವಿಸೆ ವೈಕುಂಠ ।
ವಾಸುದೇವ ಒಲಿವ ।। ಪಲ್ಲವಿ ।।
ಹೇಸಿ ಭವ ಕ್ಲೇಶ ರಾಶಿ ಬಿಡಿಸಿ ।
ಶ್ರೀ ಸಮೀರರ ಶಾ
ಸ್ತ್ರ ಜ್ಞಾನವಿತ್ತು ।
ದೋಷಿ ಜನರ ಸಂಗ ಬಿಡಿಸುತ ।
ತೋಷದಿಂದಲಿ ಸತತ ರಕ್ಷಿಪ ।। ಅ ಪ ।।
ಮಧ್ವ ಶಾಸ್ತ್ರದ ಶ್ರೀ
ಉದ್ಧಾಮ ಬುಧರೆನಿಸಿ ।
ಗೆದ್ದು ದುರ್ವಾದಿಗಳ ।
ಮುದ್ದು ವೇಣುಗೋಪಾಲಾರ್ಯರೆನ್ನಿ ।
ಶ್ರದ್ಧೆಯಲಿ ಶ್ರೀ ಸುಪ್ರಜ್ಞೇ೦ದ್ರರ ।
ಪದ್ಮಕರ ಸಂಭೂತರೆನಿಸುತ ।
ಗದ್ದುಗೆಯಲ್ಲಿ ಮೆರೆದು
ಮಾನ್ಯರಾದ ।। ಚರಣ ।।
ಕ್ಷೇತ್ರ ಶ್ರೀಮುಷ್ಣ ಶ್ರೀರಂಗ
ಕುಂಭಕೋಣ ।
ಯಾತ್ರಾದಿಗಳ ಚರಿಸಿ ।
ಸೂತ್ರಭಾಷ್ಯ ಸುಧೆಯ ಬೋಧಿಸಿ ।
ಸೂತ್ರನಾಮಕ ಒಲಿಮೆಗಳಿಸಿ ।
ಮೂರ್ತಿ ಮೂಲರಾಮನ್ನ ಅರ್ಚಿಸಿ ।
ಕೀರ್ತಿಯ ಪಡೆದು
ಮಹಾತ್ಮರಾದ ।। ಚರಣ ।।
ಸಕಲ ವೈಭವದಿಂದ
ಸುಶೀಲೇಂದ್ರತೀರ್ಥರಿಗೆ ।
ನಿಖಿಳ ವಿಧಿಲಿ ಪಟ್ಟಗಟ್ಟಿ ।
ಸಕಲ ವೈಷ್ಣವ ಮಂತ್ರ ಬೋಧಿಸಿ ।
ಮುಕುತಿಗಾಗಿ ಪಥವ ತೋರಿಸಿ ।
ಸುಖ ಮುನಿಯ ಹೃದಯವಾಸ ಶ್ರೀ -
ಲಕುಮೀಶನ ದಯದಿ
ಬಾಳೆಂದು ।। ಚರಣ ।।
****
No comments:
Post a Comment