susheelendra teertha rayara mutt yati 1926 stutih
ರಾಗ : ತೋಡಿ ತಾಳ : ರೂಪಕ
ಇಂದು ನೋಡಿದೆ
ಸುಶೀಲೇಂದ್ರ ಗುರುಗಳ ।। ಪಲ್ಲವಿ ।।
ಕುಂದಣದ ಶಿಖರ । ಮೌಕ್ತಿಕ ।
ದಿಂದ ವಿರಾಜಿಸುವ ರಜತ ।
ಅಂದಣವನೇರಿ । ಸಂಭ್ರಮ ।
ದಿಂದ ಮೆರೆದು
ಬರುವ ಗುರುಗಳ ।। ಆ. ಪ ।।
ಧ್ವಜ ಪತಾಕೆ ಶ್ವೇತ ಛತ್ರ ।
ರಜತ ವರ್ಣ ಚವರ ಚಾಮರ ।
ಭಜಿಪ ಭಟರ ಸಂದಣಿ ಮಧ್ಯ ।
ರಜನಿಪತಿಯ ತೆರದಿ
ಶೋಭಿಪರಿಂದು ।। ಚರಣ ।।
ಭೇರಿ ಕಹಳೆ ವಾದ್ಯನೇಕ ।
ಚಾರುತರ ಶೃಂಗಾರವಾದ ।
ವಾರಣಗಳು ಎಡ ಬಲದಲಿ ।
ಸಾರಿ ಬರುವ
ಸಂಭ್ರಮವನು ।। ಚರಣ ।।
ಎಲ್ಲಿ ನೋಡೆ ಪಾಠ ಪ್ರವಚನ ।
ಎಲ್ಲಿ ನೋಡೆ ವೇದಶಾಸ್ತ್ರ ।
ಎಲ್ಲಿ ನೋಡಲಲ್ಲಿ । ಲಕುಮಿ ।
ನಲ್ಲನ ಸತ್ಕಥಾಲಾಪ ।। ಚರಣ ।।
ಆ ಮಹಾ ಸುಶೋಭಿತವಾದ ।
ಹೇಮ ಮಂಟಪ ಮಧ್ಯ । ಮೂಲ ।
ರಾಮಾರ್ಚನೆ ಗೈವವಂದ ।
ಪ್ರೇಮದಿ ನೋಡಿ
ಧನ್ಯನಾದೆ ।। ಚರಣ ।।
ಆ ಮಹಾ ಗುರುವರ್ಯರ ಪದ ।
ತಾಮರಸವ ಪೊಂದಿದ ಭಕ್ತರ ।
ನೇಮದಿಂ ವರದೇಶವಿಠಲ ।
ಕಾಮಿತಾರ್ಥಗಾರೆವ್ವ ಸತ್ಯ ।। ಚರಣ ।।
****
No comments:
Post a Comment