ಶ್ರೀ ಗುರುಗೋಪಾಲದಾಸರ ಶಿಷ್ಯರಾದ ಶ್ರೀ ಜನಾರ್ದನವಿಠಲರು ಶ್ರೀ ಪ್ರೇಮದಾಸರಿಗೆ " ಹೇವಳ೦ಬಿ ನಾಮ ಸಂವತ್ಸರ ವೈಶಾಖ ಶುದ್ಧ ದ್ವಿತೀಯ ಶುಕ್ರವಾರದಂದು " ಅಭಿನವ ಜನಾರ್ದನ ವಿಠಲ " ಎಂಬ ಅಂಕಿತದೊಂದಿಗೆ ದಾಸ ದೀಕ್ಷೆ ಕೊಟ್ಟರು. ಆ ಅಂಕಿತ ಪದ ಹೀಗಿದೆ...
ರಾಗ : ಕಾಂಬೋಧಿ ತಾಳ : ಝ೦ಪೆ
ಅಭಿನವ ಜನಾರ್ದನ ವಿಠಲ ಯೆನ್ನ ।
ಗಭೀರ ವಚನವ ಲಾಲಿಸೈಯ್ಯಾ ಗಮನಕದಿ ವೇಗ ।। ಪಲ್ಲವಿ ।।
ಒಡಿಯ ನೀನಹುದೆಂದು ಅಡಿಗಡಿಗೆ ಚರಣಗಳ ।
ಬಿಡದೆ ನಂಬಿಕೊಂಡು ಪೊಡವಿಯೊಳಗೆ ।
ನಡತಿವಂತರ ಕೂಡ ಬಿಡದೆ ಆಡುವ ನರಗ ।
ಪಡಿನಾಮ ಅಮೃತವನೇ ಪಾಲಿಸಿ ರಕ್ಷಿಪುದು ।। ಚರಣ ।।
ಅಪರಾಧವೆಣಿಸದಲೇ ಅಪವರ್ಗದಾ ಜನರ ।
ನಿಪುಣರನ ಮಾಡುವಾ ನೀತಿವಂತಾ ।
ಕಪಟ ಕುಚೇಷ್ಟಗಳ ಪ್ರಕಟ ಬಾಹ್ಯಾಂತರದಿ ।
ವಪುವಿಲಿದ್ದದು ಕಳೆದು ಉಪಜೀವ್ಯ ನೀನಾಗಿ ।। ಚರಣ ।।
ಶ್ರೀ ಗುರು ಗೋಪಾಲ ದಾಸರಾಯರ ಪಾದ ।
ಜಾಗುರೂಕದಿ೦ದ ಭಜಿಸಿ ಜಗದಿ ।
ಯೋಗನೆಸಗಲಿ ಮನಕೆ ಯೋಗೀಶ ಭಕ್ತಿಯಲಿ ।
ಭಾಗೀರಥಿ ಪಿತ ಜನಾರ್ದನವಿಠಲೈಯ್ಯಾ ।। ಚರಣ ।।
*****
No comments:
Post a Comment