Saturday, 1 May 2021

ಭಾವಿ ಭಾರತೀ ರಮಣ ಬಾ ಬ್ಯಾಗನೆ ankita krishna vittala vadiraja stutih

 ರಾಗ : ಆನಂದಭೈರವಿ ತಾಳ : ರೂಪಕ


ಭಾವಿ ಭಾರತೀ ರಮಣ -

ಬಾ ಬ್ಯಾಗನೆ । ಕರು ।

ವಾರಿಧಿಯೆಂದು ಕರದೆ ।

ಭಾವಿಸಿ ಬೇಡಿದ ಭಕ್ತರ್ಗೆ ।

ನವರತ್ನ ರಾಷಿಗಳಿತ್ತಾದ್ದು -

ಬಲ್ಲೆ ತಡವ್ಯಾತಕೋ ।। ಪಲ್ಲವಿ ।।


ಭಾವಿ ರುದ್ರಗೆ ಕೊಟ್ಟಿ 

ಭಾವಿ ಇಂದ್ರಗೆ ಕೊಟ್ಟೆ ।

ಭಾವಿ ರವಿಚಂದ್ರ-

ರಿಗಿತ್ತಿದೆಯೋ ।

ಭಾವ ಶುದ್ಧಿಯಿಂದ 

ಬೇಡುವೆ । ನಾ ।।

ನೋರ್ವ ನಿನ ಪಾದಾ ।

ಸೇವಿಪ ದಾಸರಾ 

ದಾಸರಣುಗ ಬಲ್ಲಿ ।। ಚರಣ ।।


ಅವರಿಗೆ ಕೊಟ್ಟಾಗೆ -

ಕೊಡುಯೆಂದು । ಬೇ ।

ಡುವನಲ್ಲೊ ಜಿನಸಿ-

ಗೊಂದೊಂದೇ 

ಕೊಡು ಯೆನಗೆ ।

ನವರತ್ನ ಮಾಲಿಯು 

ಕಟ್ಟಿ ನಿನ ಕೊರಳಿಗೆ ।।

ಸವಿ ಮಾಡಿ ಹಾಕಿದೆ ।

ಇವು ಅಷ್ಟು ಕಟ್ಟಿ ನಿನ್ನ 

ಪಾದಕೆ ಅರ್ಪಿಸಿದೆ ।

ದಿವಾನಿಶಿಯೊಳುಯಾ-

ದರದಿಂದ ನೋಡುವೆ ।। ಚರಣ ।।


ಕೃಷ್ಣವಿಠ್ಠಲ ಶ್ರೀನಿವಾಸನ 

ಗೃಹದಲ್ಲೇ ।

ಇದ್ದ ರತ್ನಗಳನಷ್ಟು 

ನೀ ವೈದಿದಿ ।

ಅಷ್ಟುರೂ ಪೇಳುವರು 

ಪಟ್ಟಣದವರೆಲ್ಲ ।।

ಕೊಟ್ಟರೊಳಿತು ಕಾಲು ।

ಕಟ್ಟಿಕೊಂಬುವೆ 

ಗುರುವೇ ।। ಚರಣ ।।

****


No comments:

Post a Comment