Audio by Mrs. Nandini Sripad
ರಚನೆ : ಶ್ರೀ ಜಗನ್ನಾಥ ದಾಸರು
for saahitya click ಹರಿಕಥಾಮೃತಸಾರ ಸಂಧಿ 1 to 32
ಶ್ರೀಜಗನ್ನಾಥದಾಸಾರ್ಯ ವಿರಚಿತ ಹರಿಕಥಾಮೃತಸಾರ
ದೈತ್ಯತಾರತಮ್ಯ ಸಂಧಿ 30 ರಾಗ ಚಕ್ರವಾಕ
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||
ಶ್ರೀಶ ಮುಕ್ತಾಮುಕ್ತ ಸುರವರ ವಾಸುದೇವಗೆ ಭಕ್ತಿಯಲಿ
ಕಮಲಾಸನನು ಪೇಳಿದನು ದೈತ್ಯ ಸ್ವಭಾವ ಗುಣಗಳನು||
ಎನಗೆ ನಿನ್ನಲಿ ಭಕ್ತಿ ಜ್ಞಾನಗಳು ಎನಿತಿಹವೊ ಪ್ರಾಣನಲಿ ತಿಳಿಯದೆ
ಹನುಮದಾದಿ ಅವತಾರಗಳ ಭೇದಗಳ ಪೇಳುವವ ದನುಜ
ಘೋರಾಂಧಂತಮಸಿಗೆ ಯೋಗ್ಯನು ನಸಂಶಯ
ನಿನ್ನ ಬೈವರ ಕೊನೆಯ ನಾಲಿಗೆ ಪಿಡಿದು ಛೇದಿಪೆನು ಎಂದನು ಅಬ್ಜ ಭವ||1||
ಜ್ಞಾನ ಬಲ ಸುಖ ಪೂರ್ಣ ವ್ಯಾಪ್ತಗೆ ಹೀನ ಗುಣನೆಂಬುವನು
ಈಶ್ವರ ತಾನೇ ಎಂಬುವ ಸಚ್ಚಿದಾನಂದಾತ್ಮಗೆ ಉತ್ಪತ್ತಿ
ಶ್ರೀನಿತಂಬಿನಿಗೆ ಈಶಗೆ ವಿಯೋಗಾನು ಚಿಂತನೆ
ಛೇದ ಭೇದ ವಿಹೀನ ದೇಹಗೆ ಶಸ್ತ್ರಗಳ ಭಯ ಪೇಳುವವ ದೈತ್ಯ||2||
ಲೇಶ ಭಯ ಶೋಕಾದಿ ಶೂನ್ಯಗೆ ಕ್ಲೇಶಗಳು ಪೇಳುವವ
ರಾಮ ವ್ಯಾಸ ರೂಪಂಗಳಿಗೆ ಋಷಿ ವಿಪ್ರತ್ವ ಪೇಳುವವ
ದಾಶರಥಿ ಕೃಷ್ಣಾದಿ ರೂಪಕೆ ಕೇಶಖಂಡನೆ ಪೇಳ್ವ
ಮಕ್ಕಳಿಗೋಸುವ ಶಿವಾರ್ಚನೆಯ ಮಾಡಿದನು ಎಂಬುವವ ದೈತ್ಯ||3||
ಪಾಪ ಪರಿಹಾರಾರ್ಥ ರಾಮ ಉಮಾಪತಿಯ ನಿರ್ಮಿಸಿದ
ಭಗವದ್ರೂಪ ರೂಪಕೆ ಭೇದ ಚಿಂತನೆ ಮಾಳ್ಪ ಮಾನವನು
ಆಪಗಳು ಸದೀರ್ಥ ಗುರು ಮಾತಾಪಿತರ ಪ್ರಭು ಪ್ರತಿಮ ಭೂತ ದಯಾಪರರು
ಕಂಡವರೆ ದೇವರು ಎಂಬುವನೆ ದೈತ್ಯ||4||
ಸುಂದರ ಸ್ವಯಂವ್ಯಕ್ತವು ಚಿದಾನಂದ ರೂಪಗಳು ಎಂಬುವನು
ನರರಿಂದ ನಿರ್ಮಿತ ಈಶ್ವರಗೆ ಅಭಿನಮಿಸುತಿಹ ನರನು
ಕಂದುಗೊರಳ ದಿವಾಕರನು ಹರಿಯೊಂದೆ ಸೂರ್ಯ ಸುರೋತ್ತಮ
ಜಗದ್ವಂದ್ಯನೆಂಬುವ ವಿಷ್ಣು ದೂಷಣೆ ಮಾಡಿದವ ದೈತ್ಯ||5||
ನೇಮದಿಂದ ಅಶ್ವತ್ಥ ತುಳಸೀ ಸೋಮಧರನಲಿ ವಿಮಲ ಸಾಲಿಗ್ರಾಮಗಳನಿಟ್ಟು
ಅಭಿನಮಿಪ ನರ ಮುಕ್ತಿಯೋಗ್ಯ ಸದಾ
ಭೂಮಿಯೊಳು ಧರ್ಮಾರ್ಥ ಮುಕ್ತಿ ಸುಕಾಮ ಅಪೇಕ್ಷೆಗಳಿಂದ
ಸಾಲಿಗ್ರಾಮಗಳ ವ್ಯತಿರಿಕ್ತ ವಂದಿಸೆ ದುಃಖವೈದುವನು ||6||
ವಿತ್ತ ಮಹಿಮನ ಬಿಟ್ಟು ಸುರರಿಗೆ ಪೃಥಕು ವಂದನೆ ಮಾಳ್ಪ ಮಾನವ
ದಿತಿಜನೆ ಸರಿ ಹರಿಯು ತಾ ಸಂಸ್ಥಿತನು ಎನಿಸನಲ್ಲಿ
ಚತುರ ಮುಖ ಮೊದಲಾದ ಅಖಿಳ ದೇವತೆಗಳೊಳಗಿಹನೆಂದು
ಲಕ್ಷ್ಮೀಪತಿಗೆ ವಂದಿಸೆ ಒಂದರೆಕ್ಷಣ ಬಿಟ್ಟಗಲನು ಅವರ||7||
ಶೈವ ಶೂದ್ರ ಕರಾರ್ಚಿತ ಮಹಾದೇವ ವಾಯು ಹರಿ ಪ್ರತಿಮೆ
ವೃಂದಾವನದಿ ಮಾಸದ್ವಯದೊಳಿಹ ತುಳಸಿ
ಅಪ್ರಸವ ಗೋ ವಿವಾಹವರ್ಜಿತ ಅಶ್ವತ್ಥಾ ವಿಟಪಿಗಳ
ಭಕ್ತಿಪೂರ್ವಕ ಸೇವಿಸುವ ನರ ನಿತ್ಯ ಶಾಶ್ವತ ದುಃಖವೈದುವನು||8||
ಕಮಲ ಸಂಭವ ಮುಖ್ಯ ಮನುಜೋತ್ತಮರ ಪರ್ಯಂತರದಿ ಮುಕ್ತರು
ಸಮ ಶತಾಯುಷ್ಯ ಉಳ್ಳವನು ಕಲಿ ಬ್ರಹ್ಮನುಪಾದಿ
ಕ್ರಮದಿ ನೀಚರು ದೈತ್ಯರು ನರಾಧಮರ ವಿಡಿದು
ಕುಲಕ್ಷ್ಮಿ ಕಲಿ ಅನುಪಮರು ಎನಿಸುವರು ಅಸುರರೊಳು ದ್ವೇಷಾದಿ ಗುಣದಿಂದ||9||
ವನಜ ಸಂಭವನ ಅಬ್ದ ಶತ ಒಬ್ಬನೇ ಮಹಾ ಕಲಿ ಶಬ್ದ ವಾಚ್ಯನು
ದಿನದಿನಗಳಲಿ ಬೀಳ್ವರು ಅಂಧಂತಮದಿ ಕಲಿ ಮಾರ್ಗ
ದನುಜರೆಲ್ಲರ ಪ್ರತೀಕ್ಷಿಸುತ ಬ್ರಹ್ಮನ ಶತಾಬ್ದಾಂತದಲಿ
ಲಿಂಗವು ಅನಿಲನ ಗದಾ ಪ್ರಹಾರದಿಂದಲಿ ಭಂಗವೈದುವದು||10||
ಮಾರುತನ ಗದೆಯಿಂದ ಲಿಂಗ ಶರೀರ ಪೋದ ಅನಂತರ
ತಮೋ ದ್ವಾರವೈದಿ ಸ್ವರೂಪ ದುಃಖಗಳ ಅನುಭವಿಸುತಿಹರು
ವೈರ ಹರಿ ಭಕ್ತರಲಿ ಹರಿಯಲಿ ತಾರತಮ್ಯದಲಿ ಇರುತಿಹುದು ಸಂಸಾರದಲ್ಲಿ
ತಮಸ್ಸಿನಲ್ಲಿ ಅತ್ಯಧಿಕ ಕಲಿಯಲ್ಲಿ||11||
ಜ್ನಾನವೆಂಬುದೇ ಮಿಥ್ಯ ಅಸಮೀಚೀನ ದುಃಖ ತರಂಗವೇ
ಸಮೀಚೀನ ಬುದ್ಧಿ ನಿರಂತರದಿ ಕಲಿಗಿಹುದು
ದೈತ್ಯರೊಳು ಹೀನಳೆನಿಪಳು ಶತ ಗುಣದಿ ಕಲಿ ಮಾನಿನಿಗೆ ಶತ ವಿಪ್ರಚಿತ್ತಿಗೆ
ಊನ ಶತ ಗುಣ ಕಾಲನೇಮಿಯೇ ಕಂಸನೆನಿಸಿದನು||12||
ಕಾಲನೇಮಿಗೆ ಪಂಚ ಗುಣದಿಂ ಕೀಳು ಮಧು ಕೈಟಭರು
ಜನ್ಮವ ತಾಳಿ ಇಳೆಯೊಳು ಹಂಸಡಿಭಿಕ ಆಹ್ವಯದಿ ಕರೆಸಿದರು
ಐಳ ನಾಮಕ ವಿಪ್ರಚಿತ್ತ ಸಮಾಳುಯೆನಿಪ
ಹಿರಣ್ಯ ಕಶ್ಯಪು ಶೂಲ ಪಾಣೀ ಭಕ್ತ ನರಕಗೆ ಶತ ಗುಣ ಅಧಮನು||13||
ಗುಣಗಳ ತ್ರಯ ನೀಚರೆನಿಸುವ ಕನಕ ಕಸಿಪುಗೆ ಹಾಟಕಾಂಬಗೆ
ಎಣೆಯೆನಿಪ ಮಣಿಮಂತಗಿಂತಲಿ ಕಿಂಚಿದೂನ ಬಕ
ದನುಜವರ ತಾರಕನು ವಿಂಶತಿ ಗುಣದಿ ನೀಚನು
ಲೋಕ ಕಂಟಕನು ಎನಿಪ ಶಂಬರ ತಾರಕಾಸುರಗೆ ಅಧಮ ಷಡ್ಗುಣದಿ||14||
ಸರಿಯೆನಿಸುವರು ಸಾಲ್ವನಿಗೆ ಸಂಕರನಿಗೆ ಅಧಮನು ಶತಗುಣದಿ ಶಂಬರಗೆ
ಷಡ್ಗುಣ ನೀಚನೆನಿಪ ಹಿಡಿಂಬಕಾ ಬಾಣಾಸುರನು ದ್ವಾಪರ ಕೀಚಕನು
ನಾಲ್ವರು ಸಮರು ದ್ವಾಪರನೆ ಶಕುನೀ ಕರೆಸಿದನು ಕೌರವಗೆ
ಸಹೋದರ ಮಾವನು ಅಹುದೆಂದು||15||
ನಮುಚಿಲ್ವರ ಪಾಕನಾಮಕ ಸಮರು ಬಾಣಾದ್ಯರಿಗೆ ದಶಗುಣ ನಮುಚಿ ನೀಚನು
ನೂರು ಗುಣದಿಂ ಅಧಮ ವಾತಾಪಿ
ಕುಮತಿ ಧೇನುಕ ನೂರು ಗುಣದಿಂದ ಅಮರರಿಪು ವಾತಾಪಿಗಧಮನು
ವಮನ ಧೇನುಕಗಿಂದಲಿ ಅರ್ಧ ಗುಣ ಅಧಮನು ಕೇಶಿ||16||
ಮತ್ತೆ ಕೇಶಿ ನಾಮಕ ತ್ರುಣಾವರ್ತ ಸಮ ಲವಣಾಸುರನು ಒಂಭತ್ತು ನೀಚ
ಅರಿಷ್ಟ ನಾಮಕ ಪಂಚ ಗುಣದಿಂದ
ದೈತ್ಯ ಸತ್ತಮ ಹಂಸ ಡಿಭಿಕ ಪ್ರಮತ್ತವೇನನು ಪೌಂಡ್ರಕನು
ಒಂಭತ್ತು ಗುಣದಿಂದ ಅಧಮ ಮೂವರು ಲವಣ ನಾಮಕರಿಗೆ||17||
ಈಶನೆ ನಾನೆಂಬ ಖಳ ದುಶ್ಯಾಶನ ವೃಷಸೇನ ದೈತ್ಯಾಗ್ರೇಸರ ಜರಾಸಂಧ ಸಮ
ಪಾಪಿಗಳೊಳು ಅತ್ಯಧಿಕ
ಕಂಸ ಕೂಪ ವಿಕರ್ಣ ಸರಿ ರುಗ್ಮೀ ಶತಾಧಮ
ರುಗ್ಮಿಗಿಂತ ಮಹಾಸುರನು ಶತಧನ್ವಿ ಕಿರ್ಮೀರರು ಶತಾಧಮರು||18||
ಮದಿರಪಾನೀ ದೈತ್ಯ ಗಣದೊಳಗೆ ಅಧಮರೆನಿಪರು ಕಾಲಿಕೇಯರು
ಅಧಿಕರಿಗೆ ಸಮರು ಅಹರು ದೇವ ಆವೇಶಬಲದಿಂದ
ವಾದನ ಪಾಣೀ ಪಾದ ಶ್ರೋತ್ರೀಯ ಗುದ ಉಪಸ್ಥ ಘ್ರಾಣ ತ್ವಕ್ಮನಕೆ
ಅಧಿಪ ದೈತ್ಯರು ನೀಚರೆನಿಪರು ಕಾಲಿಕೇಯರಿಗೆ||19||
ಜ್ಞಾನ ಕರ್ಮ ಇಂದ್ರಿಯಗಳಿಗೆ ಅಭಿಮಾನಿ ಕಲ್ಯಾದಿ ಅಖಿಳ ದೈತ್ಯರು
ಹೀನ ಕರ್ಮವ ಮಾಡಿ ಮಾಡಿಸುತಿಹರು ಸರ್ವರೊಳು
ವಾಣಿ ಭಾರತಿ ಕಮಲಭವ ಪವಮಾನರಿವರು ಅಚ್ಚಿನ್ನ ಭಕ್ತರು
ಪ್ರಾಣಾಸುರ ಆವೇಶ ರಹಿತರು ಆಖನಾಶ್ಮ ಸಮ||20||
ಹುತವಹಾಕ್ಷಾದಿ ಅಮರರೆಲ್ಲರು ಯುತರು ಕಲ್ಯಾವೇಶ
ವಿಧಿ ಮಾರುತಿ ಸರಸ್ವತಿ ಭಾರತಿಯ ಅವತಾರದೊಳಗಿಲ್ಲ
ಕೃತ ಪುಟ ಅಂಜಲಿಯಿಂದ ತನ್ನಯ ಪಿತನ ಸಮ್ಮುಖದಲ್ಲಿ ನಿಂದು ಆನತಿಸಿ
ಬಿನ್ನೈಸಿದನು ಎನ್ನೊಳು ಕೃಪೆಯ ಮಾಡೆಂದು||21||
ದ್ವೇಷಿ ದೈತ್ಯರ ತಾರತಮ್ಯವು ದೂಷಣೆಯು ಭೂಷಣಗಳೆನ್ನದೆ
ದೋಷವೆಂಬುವ ದ್ವೇಷಿ ನಿಶ್ಚಯ
ಇವರ ನೋಡಲ್ಕೆ ಕ್ಲೇಶಗಳನು ಐದುವನು ಬಹು ವಿಧ
ಸಂಶಯವು ಪಡ ಸಲ್ಲ ವೇದವ್ಯಾಸ ಗರುಡ ಪುರಾಣದಲ್ಲಿ ಪೇಳಿದನು ಋಷಿಗಳಿಗೆ||22||
ಜಾಲಿ ನೆಗ್ಗಿಲು ಕ್ಷುದ್ರ ಶಿಲೆ ಬರಿಗಾಲ ಪುರುಷನ ಭಾದಿಪವು
ಚಮ್ಮೊಳಿಗೆಯ ಮೆಟ್ಟಿದವಗೆ ಉಂಟೆ ಕಂಟಕಗಳ ಭಯ
ಚೇಳು ಸರ್ಪವ ಕೊಂದ ವಾರ್ತೆಯ ಕೇಳಿ ಮೋದಿಪರಿಗೆ ಇಲ್ಲವು ಅಘ
ಯಮನ ಆಳುಗಳ ಭಯವಿಲ್ಲ ದೈತ್ಯರ ನಿಂದಿಸುವ ನರಗೆ||23||
ಪುಣ್ಯ ಕರ್ಮವ ಪುಷ್ಕರಾದಿ ಹಿರಣ್ಯ ಗರ್ಭಾಂತರ್ಗತ
ಬ್ರಹ್ಮಣ್ಯ ದೇವನಿಗೆ ಅರ್ಪಿಸುತಲಿರು
ಕರ್ಮಗಳ ದುಃಖವ ಕಲಿ ಮುಖಾದ್ಯರಿಗೆ ಉಣ್ಣಲೀವನು
ಸಕಲ ಲೋಕ ಶರಣ್ಯ ಶಾಶ್ವತ ಮಿಶ್ರ ಜನರಿಗೆ ಮಿಶ್ರ ಫಲವೀವ||24||
ತ್ರಿವಿಧ ಗುಣಗಳ ಮಾಣಿ ಶ್ರೀ ಭಾರ್ಗವಿ ರಮಣ ಗುಣ ಗುಣಿಗಳೊಳಗೆ
ಅವರವರ ಯೋಗ್ಯತೆ ಕರ್ಮಗಳನು ಅನುಸರಿಸಿ ಕರ್ಮ ಫಲ
ಸ್ವವಶರು ಆದ ಅಮರಾಸುರರ ಗಣಕೆ ಅವಧಿಯಿಲ್ಲದೆ ಕೊಡುವ
ದೇವ ಪ್ರವರವರ ಜಗನ್ನಾಥ ವಿಠಲ ವಿಶ್ವ ವ್ಯಾಪಕನು||25||
******************
harikathAmRutasAra gurugaLa karuNadindApanitu kELuve
parama BagavadBaktaru idanAdaradi kELuvudu||
SrISa muktAmukta suravara vAsudEvage Baktiyali
kamalAsananu pELidanu daitya svaBAva guNagaLanu||
enage ninnali Bakti j~jAnagaLu enitihavo prANanali tiLiyade
hanumadAdi avatAragaLa BEdagaLa pELuvava danuja
GOrAndhantamasige yOgyanu nasaMSaya
ninna baivara koneya nAlige piDidu CEdipenu endanu abja Bava||1||
j~jAna bala suKa pUrNa vyAptage hIna guNaneMbuvanu
ISvara tAnE eMbuva saccidAnandAtmage utpatti
SrInitaMbinige ISage viyOgAnu cintane
CEda BEda vihIna dEhage SastragaLa Baya pELuvava daitya||2||
lESa Baya SOkAdi SUnyage klESagaLu pELuvava
rAma vyAsa rUpaMgaLige RuShi vipratva pELuvava
dASarathi kRuShNAdi rUpake kESaKanDane pELva
makkaLigOsuva SivArcaneya mADidanu eMbuvava daitya||3||
pApa parihArArtha rAma umApatiya nirmisida
BagavadrUpa rUpake BEda cintane mALpa mAnavanu
ApagaLu sadIrtha guru mAtApitara praBu pratima BUta dayApararu
kaMDavare dEvaru eMbuvane daitya||4||
sundara svayaMvyaktavu cidAnanda rUpagaLu eMbuvanu
nararinda nirmita ISvarage aBinamisutiha naranu
kandugoraLa divAkaranu hariyoMde sUrya surOttama
jagadvandyaneMbuva viShNu dUShaNe mADidava daitya||5||
nEmadiMda aSvattha tuLasI sOmadharanali vimala sAligrAmagaLaniTTu
aBinamipa nara muktiyOgya sadA
BUmiyoLu dharmArtha mukti sukAma apEkShegaLiMda
sAligrAmagaLa vyatirikta vaMdise duHKavaiduvanu ||6||
vitta mahimana biTTu surarige pRuthaku vandane mALpa mAnava
ditijane sari hariyu tA saMsthitanu enisanalli
catura muKa modalAda aKiLa dEvategaLoLagihanendu
lakShmIpatige vandise ondarekShaNa biTTagalanu avara||7||
Saiva SUdra karArcita mahAdEva vAyu hari pratime
vRuMdAvanadi mAsadvayadoLiha tuLasi
aprasava gO vivAhavarjita aSvatthA viTapigaLa
BaktipUrvaka sEvisuva nara nitya SASvata duHKavaiduvanu||8||
kamala sanBava muKya manujOttamara paryantaradi muktaru
sama SatAyuShya uLLavanu kali brahmanupAdi
kramadi nIcaru daityaru narAdhamara viDidu
kulakShmi kali anupamaru enisuvaru asuraroLu dvEShAdi guNadinda||9||
vanaja saMBavana abda Sata obbanE mahA kali Sabda vAcyanu
dinadinagaLali bILvaru andhaMtamadi kali mArga
danujarellara pratIkShisuta brahmana SatAbdAntadali
lingavu anilana gadA prahAradindali Bangavaiduvadu||10||
mArutana gadeyinda linga SarIra pOda anantara
tamO dvAravaidi svarUpa duHKagaLa anuBavisutiharu
vaira hari Baktarali hariyali tAratamyadali irutihudu saMsAradalli
tamassinalli atyadhika kaliyalli||11||
jnAnaveMbudE mithya asamIcIna duHKa tarangavE
samIcIna buddhi nirantaradi kaligihudu
daityaroLu hInaLenipaLu Sata guNadi kali mAninige Sata vipracittige
Una Sata guNa kAlanEmiyE kaMsanenisidanu||12||
kAlanEmige panca guNadiM kILu madhu kaiTaBaru
janmava tALi iLeyoLu haMsaDiBika Ahvayadi karesidaru
aiLa nAmaka vipracitta samALuyenipa
hiraNya kaSyapu SUla pANI Bakta narakage Sata guNa adhamanu||13||
guNagaLa traya nIcarenisuva kanaka kasipuge hATakAMbage
eNeyenipa maNimaMtagintali kiMcidUna baka
danujavara tArakanu viMSati guNadi nIcanu
lOka kaMTakanu enipa SaMbara tArakAsurage adhama ShaDguNadi||14||
sariyenisuvaru sAlvanige sankaranige adhamanu SataguNadi SaMbarage
ShaDguNa nIcanenipa hiDiMbakA bANAsuranu dvApara kIcakanu
nAlvaru samaru dvAparane SakunI karesidanu kauravage
sahOdara mAvanu ahudendu||15||
namucilvara pAkanAmaka samaru bANAdyarige daSaguNa namuci nIcanu
nUru guNadiM adhama vAtApi
kumati dhEnuka nUru guNadinda amararipu vAtApigadhamanu
vamana dhEnukagiMdali ardha guNa adhamanu kESi||16||
matte kESi nAmaka truNAvarta sama lavaNAsuranu oMBattu nIca
ariShTa nAmaka panca guNadiMda
daitya sattama haMsa DiBika pramattavEnanu pauMDrakanu
oMBattu guNadinda adhama mUvaru lavaNa nAmakarige||17||
ISane nAneMba KaLa duSyASana vRuShasEna daityAgrEsara jarAsandha sama
pApigaLoLu atyadhika
kaMsa kUpa vikarNa sari rugmI SatAdhama
rugmiginta mahAsuranu Satadhanvi kirmIraru SatAdhamaru||18||
madirapAnI daitya gaNadoLage adhamareniparu kAlikEyaru
adhikarige samaru aharu dEva AvESabaladinda
vAdana pANI pAda SrOtrIya guda upastha GrANa tvakmanake
adhipa daityaru nIcareniparu kAlikEyarige||19||
j~jAna karma indriyagaLige aBimAni kalyAdi aKiLa daityaru
hIna karmava mADi mADisutiharu sarvaroLu
vANi BArati kamalaBava pavamAnarivaru accinna Baktaru
prANAsura AvESa rahitaru AKanASma sama||20||
hutavahAkShAdi amararellaru yutaru kalyAvESa
vidhi mAruti sarasvati BAratiya avatAradoLagilla
kRuta puTa anjaliyinda tannaya pitana sammuKadalli nindu Anatisi
binnaisidanu ennoLu kRupeya mADeMdu||21||
dvEShi daityara tAratamyavu dUShaNeyu BUShaNagaLennade
dOShaveMbuva dvEShi niScaya
ivara nODalke klESagaLanu aiduvanu bahu vidha
saMSayavu paDa salla vEdavyAsa garuDa purANadalli pELidanu RuShigaLige||22||
jAli neggilu kShudra Sile barigAla puruShana BAdipavu
cammoLigeya meTTidavage unTe kanTakagaLa Baya
cELu sarpava konda vArteya kELi mOdiparige illavu aGa
yamana ALugaLa Bayavilla daityara nindisuva narage||23||
puNya karmava puShkarAdi hiraNya garBAntargata
brahmaNya dEvanige arpisutaliru
karmagaLa duHKava kali muKAdyarige uNNalIvanu
sakala lOka SaraNya SASvata miSra janarige miSra PalavIva||24||
trividha guNagaLa mANi SrI BArgavi ramaNa guNa guNigaLoLage
avaravara yOgyate karmagaLanu anusarisi karma Pala
svavaSaru Ada amarAsurara gaNake avadhiyillade koDuva
dEva pravaravara jagannAtha viThala viSva vyApakanu||25||
*********
No comments:
Post a Comment