Audio by Mrs. Nandini Sripad
ರಚನೆ : ಶ್ರೀ ಜಗನ್ನಾಥ ದಾಸರು
for saahitya click ಹರಿಕಥಾಮೃತಸಾರ ಸಂಧಿ 1 to 32
ಶ್ರೀಜಗನ್ನಾಥದಾಸಾರ್ಯ ವಿರಚಿತ ಹರಿಕಥಾಮೃತಸಾರ
ಅಪರಾಧ ಸಹಿಷ್ಣು ಸಂಧಿ 22 ಭಕ್ತಾಪರಾಧ ಸಹಿಷ್ಣು ಸಂಧಿ 22 ರಾಗ - ರೇವತಿ
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||
ಶ್ರೀ ಲಕುಮಿವಲ್ಲಭಗೆ ಸಮ ಕರುಣಾಳುಗಳ ನಾಕಾಣೆನೆಲ್ಲಿ
ಕುಚೇಲನ ಅವಲಿಗೆ ಮೆಚ್ಚಿ ಕೊಟ್ಟನು ಸಕಲ ಸಂಪದವ
ಕೇಳಿದಾಕ್ಷಣ ವಸ್ತ್ರಗಳ ಪಾಂಚಾಲಿಗಿತ್ತನು
ದೈತ್ಯನುದರವ ಸೀಳಿ ಸಂತೈಸಿದನು ಪ್ರಹ್ಲಾದನ ಕೃಪಾಸಾಂದ್ರ||1||
ದೇವಶರ್ಮಾಹ್ವಾಯ ಕುಟುಂಬಕೆ ಜೀವನೋಪಾಯವನು ಕಾಣದೆ
ದೇವ ದೇವ ಶರಣ್ಯ ರಕ್ಷಿಸು ರಕ್ಷಿಸೆನೆ ಕೇಳಿ ತಾ ಒಲಿದು ಪಾಲಿಸಿದ ಸೌಖ್ಯ
ಕೃಪಾವಲೋಕನದಿಂದ ಈತನ ಸೇವಿಸದೆ
ಸೌಖ್ಯಗಳ ಬಯಸುವರು ಅಲ್ಪ ಮಾನವರು||2||
ಶ್ರೀನಿವಾಸನ ಪೋಲ್ವ ಕರುಣಿಗಳು ಈ ನಳಿನಜಾಂಡದೊಳು ಕಾಣೆ
ಪ್ರವೀಣರಾದವರು ಅರಸಿ ನೋಳ್ಪುದು ಶೃತಿಪುರಾಣದೊಳು
ದ್ರೋಣ ಭೀಷ್ಮ ಕೃಪಾದಿಗಳು ಕುರು ಸೇನೆಯೊಳಗಿರೆ
ಅವರ ಅವಗುಣಗಳು ಏನು ನೋಡದೆ ಪಾಲಿಸಿದ ಪರಮಾತ್ಮ ಪರಗತಿಯ||3||
ಚಂಡ ವಿಕ್ರಮ ಚಕ್ರ ಶಂಖವ ತೋಂಡಮಾನ ನೃಪಾಲಗಿತ್ತನು
ಭಾಂಡಕಾರಕ ಭೀಮನ ಮೃದ ಆಭರಣಗಳಿಗೊಲಿದ
ಮಂಡೆ ಒಡೆದ ಆಕಾಶರಾಯನ ಹೆಂಡತಿಯ ನುಡಿ ಕೇಳಿ ಮಗಳಿಗೆ ಗಂಡನೆನಿಸಿದ
ಗಹನ ಮಹಿಮ ಗದಾಬ್ಜಧರಪಾಣಿ||4||
ಗೌತಮನ ನಿಜಪತ್ನಿಯನು ಪುರುಹೂತನು ಐದಿರೆ ಕಾಯ್ದ
ವೃತ್ರನ ಘಾತಿಸಿದ ಪಾಪವನು ನಾಲ್ಕು ವಿಭಾಗ ಮಾಡಿದನು
ಶಾತಕುಂಭಾತ್ಮಕ ಕಿರೀಟವ ಕೈತವದಿ ಕದ್ದೊಯ್ದ ಇಂದ್ರಾರಾತಿ ಬಾಗಿಲ ಕಾಯ್ದ
ಭಕ್ತತ್ವೇನ ಸ್ವೀಕರಿಸಿ||5||
ನಾರನಂದ ವ್ರಜದ ಸ್ತ್ರೀಯರ ಜಾರಕರ್ಮಕೊಲಿದ
ಅಜ ಸುಕುಮಾರನು ಎನಿಸಿದ ನಂದಗೋಪಗೆ ನಳಿನಭವ ಜನಕ
ವೈರವರ್ಜಿತ ದೈತ್ಯರನ ಸಂಹಾರ ಮಾಡಿದ
ವಿಪಗಮನ ಪೆಗಲೇರಿದನು ಗೋಪಾಲಕರ ವೃಂದಾವನದೊಳಂದು||6||
ಶ್ರೀಕರಾರ್ಚಿತ ಪಾದಪಲ್ಲವ ಗೋಕುಲದ ಗೊಲ್ಲತಿಯರ ಒಲಿಸಿದ
ಪಾಕಶಾಸನ ಪೂಜ್ಯ ಗೋ ಗೋವತ್ಸಗಳ ಕಾಯ್ದ
ನೀಕರಿಸಿ ಕುರುಪತಿಯ ಭೋಜನ ಸ್ವೀಕರಿಸಿದನು ವಿದುರನೌತನ
ಬಾಕುಲಿಕನಂದದಲಿ ತೋರಿದ ಭಕ್ತವತ್ಸಲನು||7||
ಪುತ್ರನೆನಿಸಿದ ಗೋಪಿದೇವಿಗೆ ಭರ್ತೃವೆನಿಸಿದ ವೃಜದನಾರಿಯರ ಉತ್ರಲಾಲಿಸಿ
ಪರ್ವತವ ನೆಗದಿಹ ಕೃಪಾಸಾಂದ್ರ
ಶತ್ರುತಾಪನ ಯಜ್ಞ ಪುರುಷನ ಪುತ್ರಿಯರ ತಂದಾಳ್ದ
ತ್ರಿಜಗತ್ಧಾತ್ರ ಮಂಗಳಗಾತ್ರ ಪರಮ ಪವಿತ್ರ ಸುರಮಿತ್ರ||8||
ರುಪನಾಮ ವಿಹೀನ ಗರ್ಗಾರೋಪಿತ ಸುನಾಮದಲಿ ಕರೆಸಿದ
ವ್ಯಾಪಕ ಪರಿಚ್ಚಿನ್ನ ರೂಪದಿ ತೋರ್ದ ಲೋಗರಿಗೆ
ದ್ವಾಪರಾಂತ್ಯದಿ ದೈತ್ಯರನು ಸಂತಾಪಗೊಳಿಸುವೆನೆಂದು
ಶ್ವೇತದ್ವೀಪ ಮಂದಿರನು ಅವತರಿಸಿ ಸಲಹಿದನು ತನ್ನವರ||9||
ಶ್ರೀ ವಿರಿಂಚಾದಿ ಅಮರನುತ ನಾನಾವತಾರವ ಮಾಡಿ ಸಲಹಿದ
ದೇವತೆಗಳನು ಋಷಿಗಳನು ಕ್ಷಿತಿಪರನು
ಮಾನವರ ಸೇವೆಗಳ ಕೈಕೊಂಡು ಫಲಗಳನೀವ
ನಿತ್ಯಾನಂದಮಯ ಸುಗ್ರೀವ ಧ್ರುವ ಮೊದಲಾದ ಭಕ್ತರಿಗಿತ್ತ ಪುರುಷಾರ್ಥ||10||
ದುಷ್ಟ ದಾನವಹರಣ ಸರ್ವೋತ್ಕೃಷ್ಟ ಸದ್ಗುಣ ಭರಿತ ಭಕ್ತ ಅಭೀಷ್ಟದಾಯಕ
ಭಯವಿನಾಶನ ವಿಗತ ಭಯಶೋಕ
ನಷ್ಟ ತುಷ್ಟಿಗಳಿಲ್ಲ ಸೃಷ್ಟಿ ಆದಿ ಅಷ್ಟ ಕರ್ತನಿಗೆ ಆವ ಕಾಲದಿ
ಹೃಷ್ಟನಾಗುವ ಸ್ಮರಣೆ ಮಾತ್ರದಿ ಹೃದ್ಗುಹ ನಿವಾಸಿ||11||
ಹಿಂದೆ ಪ್ರಳಯ ಉದಕದಿ ತಾವರೆ ಕಂದ ನಂಜಿಸಿ ಕಾಯ್ದ
ತಲೆಯಲಿ ಬಾಂದೊರೆಯ ಪೊತ್ತವಗೆ ಒಲಿದು ಪರ್ಯಂಕ ಪದವಿತ್ತ
ವಂದಿಸಿದ ವೃಂದಾರಕರ ಸತ್ವೃಂದಕೆ ಉಣಿಸಿದ ಸುಧೆಯ
ಕರುಣಾ ಸಿಂಧು ಕಮಲಾಕಾಂತ ಬಹು ನಿಶ್ಚಿಂತ ಜಯವಂತ||12||
ಸತ್ಯಸಂಕಲ್ಪ ಅನುಸಾರ ಪ್ರವರ್ತಿಸುವ ಪ್ರಭು ತನಗೆ ತಾನೆ ಭೃತ್ಯನೆನಿಸುವ
ಭೋಕ್ತ್ರು ಭೋಗ್ಯ ಪದಾರ್ಥದೊಳಗಿದ್ದು ತತ್ತದಾಹ್ವಯನಾಗಿ ತರ್ಪಕ
ತೃಪ್ತಿ ಪಡಿಸುವ ತತ್ವ ಪತಿಗಳ
ಮತ್ತರಾದ ಅಸುರರ್ಗೆ ಅಸಮೀಚೀನ ಫಲವೀವ||13||
ಬಿಟ್ಟಿಗಳ ನೆವದಿಂದಡಾಗಲಿ ಪೊಟ್ಟೆಗೋಸುಗವಾದಡಾಗಲಿ
ಕೆಟ್ಟರೋಗ ಪ್ರಯುಕ್ತವಾಗಲಿ ಅಣಕದಿಂದೊಮ್ಮೆ ನಿಟ್ಟುಸಿರಿನಿಂ ಬಾಯ್ದೆರೆದು
ಹರಿ ವಿಠಲಾ ಸಲಹೆಂದೆನಲು ಕೈಗೊಟ್ಟು ಕಾವ
ಕೃಪಾಳು ಸಂತತ ತನ್ನ ಭಕುತರನು||14||
ಈ ವಸುಂಧರೆಯೊಳಗೆ ಶ್ರೀ ಭೂದೇವಿಯ ಅರಸನ ಸುಗುಣ ಕರ್ಮಗಳ
ಆವ ಬಗೆಯಿಂದ ಆದಡಾಗಲಿ ಕೀರ್ತಿಸಿದ ನರರ
ಕಾವ ಕಮಲದಳಾಯತಾಕ್ಷ ಕೃಪಾವ ಲೋಕನದಿಂದ
ಕಪಿ ಸುಗ್ರೀವಗೆ ಒಲಿದಂದದಲಿ ಒಲಿದಭಿಲಾಷೆ ಪೂರೈಪ||15||
ಚೇತನಂತರ್ಯಾಮಿ ಲಕ್ಷ್ಮೀನಾಥ ಕರ್ಮಗಳ ಅನುಸರಿಸಿ
ಜನಿತೋಥ ವಿಷ್ಣೋಯೆಂಬ ಶ್ರುತಿ ಪ್ರತಿಪಾದ್ಯ ಯೆಮ್ಮೊಡನೆ ಜಾತನಾಗುವ ಜನ್ಮರಹಿತ
ಆಕೂತಿನಂದನ ಭಕ್ತರಿಂದ ಆಹೂತನಾಗಿ
ಮನೋರಥವ ಬೇಡಿಸಿಕೊಳದೀವ||16||
ನ್ರುಷತುಯೆನಿಸುವ ಮನುಜರೊಳು ಸುರ ಋಷಭ ಇಂದ್ರಿಯಗಳೊಳು
ತತ್ತತ್ವಿಷಯಗಳ ಭುಂಜಿಸುವ ಹೋತಾಹ್ವಯನು ತಾನಾಗಿ
ಮೃಷರಹಿತ ವೇದದೊಳು ಋತಸತು ಪೆಸರಿನಿಂದಲಿ ಕರೆಸುವ
ಜಗತ್ಪ್ರಸವಿತ ನಿರಂತರದಿ ಸಂತೈಸುವನು ಭಕುತರನು||17||
ಅಬ್ಜ ಭವ ಪಿತ ಜಲಧರಾದ್ರಿಯೊಳು ಅಬ್ಜ ಗೋಜಾದ್ರಿಜನೆನಿಸಿ
ಜಲದುಬ್ಬಳೀ ಪೀಯೂಷ ದಾವರೆ ಶ್ರೀಶಶಾಂಕದೊಳು
ಕಬ್ಬು ಕದಳಿ ಲತಾ ತೃಣ ದ್ರುಮ ಹೆಬ್ಬುಗೆಯ ಮಾಡುತಿಹ ಗೋಜನು
ಇಬ್ಬಗೆ ಪ್ರತೀಕ ಮಣಿಮೃಗ ಸೃಜಿಪ ಅದ್ರಿಜನು||18||
ಶ್ರುತಿವಿನುತ ಸರ್ವತ್ರದಲಿ ಭಾರತಿ ರಮಣನೊಳಗಿದ್ದು
ತಾ ಶುಚಿಷತುಯೆನಿಸಿ ಜಡ ಚೇತನರನ ಪವಿತ್ರ ಮಾಡುತಿಹ
ಅತುಳ ಮಹಿಮ ಅನಂತ ರೂಪ ಅಚ್ಯುತನೆನಿಸಿ ಚಿತ್ದೇಹದೊಳು
ಪ್ರಾಕೃತ ಪುರುಷನಂದದಲಿ ನಾನಾ ಚೇಷ್ಟೆಗಳ ಮಾಳ್ಪ||19||
ಅತಿಥಿಯೆನಿಸುವ ಅನ್ನಮಯ ಬಾರತಿ ರಮಣನೊಳು
ಪ್ರಾಣಮಯ ಪ್ರಾಕೃತ ವಿಷಯ ಚಿಂತನೆಯ ಮಾಡಿಸುವನು
ಮನೋಮಯನುಯತನ ವಿಜ್ಞಾನಮಯ ಬರಲದ ಜತನ ಮಾಡಿಸಿ
ಆತ್ಮ ಜಾಯಾ ಸುತರ ಸಂಗದಿ ಸುಖವನೀವ ಆನಂದಮಯನೆನಿಸಿ||20||
ಇನಿತು ರೂಪಾತ್ಮನಿಗೆ ದೋಷಗಳೆನಿತು ಬಪ್ಪವು ಪೇಳಿರೈ
ಬ್ರಾಹ್ಮಣ ಕುಲೋತ್ತಮರು ಆದವರು ನಿಷ್ಕಪಟ ಬುದ್ಧಿಯಲಿ
ಗುಣನಿಯಾಮಕ ತತ್ತದಾಹ್ವಯನೆನಿಸಿ ಕಾರ್ಯವ ಮಾಳ್ಪದೇವನ
ನೆನೆದ ಮಾತ್ರದಿ ದೋಷರಾಶಿಗಳು ಎಲ್ಲ ಕೆಡುತಿಹವು||21||
ಕುಸ್ಥನೆನಿಸುವ ಭೂಮಿಯೊಳು ಆಶಸ್ಥನೆನಿಸುವ ದಿಗ್ವಲಯದೊಳು
ಖಸ್ಥನೆನಿಪ ಆಕಾಶದೊಳು ಒಬ್ಬೊಬ್ಬರೊಳಗೆ ಇದ್ದು ವ್ಯಸ್ತನೆನಿಸುವ
ಸರ್ವರೊಳಗೆ ಸಮಸ್ತನೆನಿಸುವ ಬಳಿಯಲಿದ್ದು ಉಪಸ್ಥನೆನಿಪ
ವಿಶೋಧನ ವಿಶುದ್ಧಾತ್ಮ ಲೋಕದೊಳು||22||
ಜ್ಞಾನದನುಯೆಂದೆನಿಪ ಶಾಸ್ತ್ರದಿ ಮಾನದನುಯೆಂದೆನಿಪ ವಸನದಿ
ದಾನಶೀಲ ಸುಬುದ್ಧಿಯೊಳಗೆ ಅವದಾನ್ಯನೆನಿಸುವನು
ವೈನತೇಯ ಅವರೂಥ ತತ್ತತ್ಸ್ಥಾನದಲಿ ತತ್ತತ್ ಸ್ವಭಾವಗಳ ಅನುಸಾರ
ಚರಿತ್ರೆ ಮಾಡುತ ನಿತ್ಯನೆಲೆಸಿಪ್ಪ||23||
ಗ್ರಾಮಪನೊಳು ಅಗ್ರಣಿಯೆನಿಸುವನು ಗ್ರಾಮಿಣೀಯೆನಿಸುವರು ಜನರೊಳು
ಗ್ರಾಮ ಉಪಗ್ರಾಮಗಳೊಳಗೆ ಶ್ರೀಮಾನ್ಯನೆನಿಸುತಿಪ್ಪ
ಶ್ರೀ ಮನೋರಮ ತಾನೇ ಯೋಗಕ್ಷೇಮ ನಾಮಕನಾಗಿ ಸಲಹುವ
ಈ ಮಹಿಮೆ ಮಿಕ್ಕಾದ ದೇವರಿಗುಂಟೆ ಲೋಕದೊಳು||24||
ವಿಜಯಸಾರಥಿಯೆಂದು ಗರುಡಧ್ವಜನ ಮೂರ್ತಿಯ ಭಕ್ತಿಪೂರ್ವಕ ಭಜಿಸುತಿಪ್ಪ ಮಹಾತ್ಮರಿಗೆ
ಸರ್ವತ್ರದಲಿ ಒಲಿದು
ವಿಜಯದನು ತಾನಾಗಿ ಸಲಹುವ ಭುಜಗ ಭೂಷಣ ಪೂಜ್ಯ ಚರಣಾಂಬುಜ
ವಿಭೂತಿದ ಭುವನ ಮೋಹನರೂಪ ನಿರ್ಲೇಪ||25||
ಅನಭಿಮತ ಕರ್ಮಪ್ರವಹದೊಳಗೆ ಅನಿಮಿಷಾದಿ ಸಮಸ್ತ ಚೇತನ ಗಣವಿಹುದು
ತತ್ಫಲಗಳ ಉಣ್ಣದೆ ಸೃಷ್ಟಿಸಿದ ಮುನ್ನ
ವನಿತೆಯಿಂದ ಒಡಗೂಡಿ ಕರುಣಾವನಧಿ ನಿರ್ಮಿಸೆ
ತಮ್ಮತಮ್ಮಯ ಅನುಚಿತೋಚಿತ ಕರ್ಮಫಲಗಳ ಉಣುತ ಚರಿಸುವರು||26||
ಝಲ್ಲಡಿಯ ನೆಳಲಂತೆ ತೋರ್ಪುದು ಎಲ್ಲ ಕಾಲದಿ ಭವದ ಸೌಖ್ಯವು
ಎಲ್ಲಿ ಪೊಕ್ಕರು ಬಿಡದು ಬೆಂಬತ್ತಿಹುದು ಜೀವರಿಗೆ
ಒಲ್ಲೆನೆಂದರೆ ಬಿಡದು ಹರಿ ನಿರ್ಮಾಲ್ಯ ನೈವೇದ್ಯವನು ಭುಂಜಿಸಿ
ಬಲ್ಲವರ ಕೂಡಾಡು ಭವ ದುಃಖಗಳ ನೀಡಾಡು||27||
ಕುಟ್ಟಿ ಕೊಯ್ದಿದನು ಅಟ್ಟು ಇಟ್ಟು ಅದಸುಟ್ಟು ಕೊಟ್ಟದ ಮುಟ್ಟಲು
ಅಘ ಹಿಟ್ಟಿಟ್ಟು ಮಾಳ್ಪದು ವಿಠಲುಂಡುಚ್ಚಿಷ್ಟ
ಸಜ್ಜನರ ಬಿಟ್ಟು ತನ್ನಯ ಹೊಟ್ಟೆಗೋಸುಗ ಥಟ್ಟನೆ ಉಣುತಿಹ ಕೆಟ್ಟ ಮನುಜರ
ಕಟ್ಟಿವೈದು ಯಮಪಟ್ಟಣದೊಳು ಒತ್ತಟ್ಟಲೆ ಇಡುತಿಹನು||28||
ಜಾಗುಮಾಡದೆ ಭೋಗದಾಸೆಯ ನೀಗಿ ಪರಮಾನುರಾಗದಿಂದಲಿ
ಭೋಗೀಶಯನನ ಆಗರದ ಹೆಬ್ಬಾಗಿಲಲಿ ನಿಂದು
ಕೂಗುತಲಿ ಶಿರಬಾಗಿ ಕರುಣಾ ಸಾಗರನೆ ಭವರೋಗ ಭೇಷಜ ಕೈಗೊಡು ಎಂದನೆ
ಬೇಗನೆ ಒದಗುವ ಭಾಗವತರಸ||29||
ಏನು ಕರುಣವೋ ತನ್ನವರಲಿ ದಯಾನಿಧಿಗೆ
ಸದ್ಭಕ್ತ ಜನರು ಅತಿ ಹೀನ ಕರ್ಮವ ಮಾಡಿದರು ಸರಿ ಸ್ವೀಕರಿಸಿ ಪೊರೆವ
ಪ್ರಾಣಹಿಂಸ ಲುಬ್ದಕಗೆ ಸುಜ್ಞಾನ ಭಕ್ತಿಗಳಿತ್ತು
ದಶರಥ ಸೂನು ವಾಲ್ಮೀಕಿ ಋಷಿಯ ಮಾಡಿದ ಪರಮ ಕರುಣಾಳು||30||
ಮೂಢ ಮಾನವ ಎಲ್ಲಕಾಲದಿ ಬೇಡಿಕೊಂಬ ಇನಿತೆಂದು ದೈನ್ಯದಿ
ಬೇಡದಂದದಿ ಮಾಡು ಪುರುಷಾರ್ಥಗಳ ಸ್ವಪ್ನದಲಿ
ನೀಡುವರೆ ನಿನ್ನ ಅಮಲಗುಣ ಕೊಂಡಾಡಿ ಹಿಗ್ಗುವ ಭಾಗವತರ ಒಡನೆ
ಆಡಿಸೆನ್ನನು ಜನ್ಮಜನ್ಮಗಳಲಿ ದಯದಿಂದ||31||
ಚತುರವಿಧ ಪುರುಷಾರ್ಥ ರೂಪನು ಚತುರ ಮೂರ್ತಿ ಆತ್ಮಕನಿರಲು
ಮತ್ತೆ ಇತರ ಪುರುಷಾರ್ಥಗಳ ಬಯಸುವರೆನು ಬಲ್ಲವರು
ಮತಿ ವಿಹೀನರು ಅಲ್ಪ ಸುಖ ಶಾಶ್ವತವೆಂದರಿದು ಅನುದಿನದಿ
ಗಣಪತಿಯೇ ಮೊದಲಾದ ಅನ್ಯ ದೇವತೆಗಳನೆ ಭಜಿಸುವರು||32||
ಒಮ್ಮಿಗಾದರು ಜೀವರೊಳು ವೈಷಮ್ಯ ದ್ವೇಷ ಅಸೂಯವಿಲ್ಲ
ಸುಧರ್ಮ ನಾಮಕ ಸಂತೈಸುವನು ಸರ್ವರನು ನಿತ್ಯ
ಬ್ರಹ್ಮ ಕಲ್ಪಾಂತದಲಿ ವೇದಾಗಮ್ಯ ಶ್ರೀ ಜಗನ್ನಾಥ ವಿಠಲ
ಸುಮ್ಮನೀವನು ತ್ರಿವಿಧರಿಗೆ ಅವರವರ ನಿಜಗತಿಯ||33||
********
harikathAmRutasAra gurugaLa karuNadindApanitu kELuve
parama BagavadBaktaru idanAdaradi kELuvudu||
SrI lakumivallaBage sama karuNALugaLa nAkANenelli
kucElana avalige mecci koTTanu sakala saMpadava
kELidAkShaNa vastragaLa pAncAligittanu
daityanudarava sILi santaisidanu prahlAdana kRupAsAndra||1||
dEvaSarmAhvAya kuTuMbake jIvanOpAyavanu kANade
dEva dEva SaraNya rakShisu rakShisene kELi tA olidu pAlisida sauKya
kRupAvalOkanadinda Itana sEvisade
sauKyagaLa bayasuvaru alpa mAnavaru||2||
SrInivAsana pOlva karuNigaLu I naLinajAnDadoLu kANe
pravINarAdavaru arasi nOLpudu SRutipurANadoLu
drONa BIShma kRupAdigaLu kuru sEneyoLagire
avara avaguNagaLu Enu nODade pAlisida paramAtma paragatiya||3||
canDa vikrama cakra SanKava tOnDamAna nRupAlagittanu
BAnDakAraka BImana mRuda ABaraNagaLigolida
manDe oDeda AkASarAyana henDatiya nuDi kELi magaLige ganDanenisida
gahana mahima gadAbjadharapANi||4||
gautamana nijapatniyanu puruhUtanu aidire kAyda
vRutrana GAtisida pApavanu nAlku viBAga mADidanu
SAtakuMBAtmaka kirITava kaitavadi kaddoyda indrArAti bAgila kAyda
BaktatvEna svIkarisi||5||
nArananda vrajada strIyara jArakarmakolida
aja sukumAranu enisida nandagOpage naLinaBava janaka
vairavarjita daityarana saMhAra mADida
vipagamana pegalEridanu gOpAlakara vRundAvanadoLandu||6||
SrIkarArcita pAdapallava gOkulada gollatiyara olisida
pAkaSAsana pUjya gO gOvatsagaLa kAyda
nIkarisi kurupatiya BOjana svIkarisidanu viduranautana
bAkulikanandadali tOrida Baktavatsalanu||7||
putranenisida gOpidEvige BartRuvenisida vRujadanAriyara utralAlisi
parvatava negadiha kRupAsAMdra
SatrutApana yaj~ja puruShana putriyara tandALda
trijagatdhAtra mangaLagAtra parama pavitra suramitra||8||
rupanAma vihIna gargArOpita sunAmadali karesida
vyApaka pariccinna rUpadi tOrda lOgarige
dvAparAntyadi daityaranu santApagoLisuvenendu
SvEtadvIpa mandiranu avatarisi salahidanu tannavara||9||
SrI virincAdi amaranuta nAnAvatArava mADi salahida
dEvategaLanu RuShigaLanu kShitiparanu
mAnavara sEvegaLa kaikonDu PalagaLanIva
nityAnandamaya sugrIva dhruva modalAda Baktarigitta puruShArtha||10||
duShTa dAnavaharaNa sarvOtkRuShTa sadguNa Barita Bakta aBIShTadAyaka
BayavinASana vigata BayaSOka
naShTa tuShTigaLilla sRuShTi Adi aShTa kartanige Ava kAladi
hRuShTanAguva smaraNe mAtradi hRudguha nivAsi||11||
hinde praLaya udakadi tAvare kaMda nanjisi kAyda
taleyali bAndoreya pottavage olidu paryanka padavitta
vandisida vRundArakara satvRuMdake uNisida sudheya
karuNA sindhu kamalAkAnta bahu niScinta jayavanta||12||
satyasankalpa anusAra pravartisuva praBu tanage tAne BRutyanenisuva
BOktru BOgya padArthadoLagiddu tattadAhvayanAgi tarpaka
tRupti paDisuva tatva patigaLa
mattarAda asurarge asamIcIna PalavIva||13||
biTTigaLa nevadindaDAgali poTTegOsugavAdaDAgali
keTTarOga prayuktavAgali aNakadindomme niTTusiriniM bAyderedu
hari viThalA salahendenalu kaigoTTu kAva
kRupALu santata tanna Bakutaranu||14||
I vasundhareyoLage SrI BUdEviya arasana suguNa karmagaLa
Ava bageyinda AdaDAgali kIrtisida narara
kAva kamaladaLAyatAkSha kRupAva lOkanadinda
kapi sugrIvage olidandadali olidaBilAShe pUraipa||15||
cEtanantaryAmi lakShmInAtha karmagaLa anusarisi
janitOtha viShNOyeMba Sruti pratipAdya yemmoDane jAtanAguva janmarahita
AkUtinandana Baktarinda AhUtanAgi
manOrathava bEDisikoLadIva||16||
nruShatuyenisuva manujaroLu sura RuShaBa indriyagaLoLu
tattatviShayagaLa Bunjisuva hOtAhvayanu tAnAgi
mRuSharahita vEdadoLu Rutasatu pesarinindali karesuva
jagatprasavita nirantaradi santaisuvanu Bakutaranu||17||
abja Bava pita jaladharAdriyoLu abja gOjAdrijanenisi
jaladubbaLI pIyUSha dAvare SrISaSAnkadoLu
kabbu kadaLi latA tRuNa druma hebbugeya mADutiha gOjanu
ibbage pratIka maNimRuga sRujipa adrijanu||18||
Srutivinuta sarvatradali BArati ramaNanoLagiddu
tA SuciShatuyenisi jaDa cEtanarana pavitra mADutiha
atuLa mahima ananta rUpa acyutanenisi citdEhadoLu
prAkRuta puruShanandadali nAnA cEShTegaLa mALpa||19||
atithiyenisuva annamaya bArati ramaNanoLu
prANamaya prAkRuta viShaya cintaneya mADisuvanu
manOmayanuyatana vij~jAnamaya baralada jatana mADisi
Atma jAyA sutara sangadi suKavanIva Anandamayanenisi||20||
initu rUpAtmanige dOShagaLenitu bappavu pELirai
brAhmaNa kulOttamaru Adavaru niShkapaTa buddhiyali
guNaniyAmaka tattadAhvayanenisi kAryava mALpadEvana
neneda mAtradi dOSharASigaLu ella keDutihavu||21||
kusthanenisuva BUmiyoLu ASasthanenisuva digvalayadoLu
Kasthanenipa AkASadoLu obbobbaroLage iddu vyastanenisuva
sarvaroLage samastanenisuva baLiyaliddu upasthanenipa
viSOdhana viSuddhAtma lOkadoLu||22||
j~jAnadanuyendenipa SAstradi mAnadanuyendenipa vasanadi
dAnaSIla subuddhiyoLage avadAnyanenisuvanu
vainatEya avarUtha tattatsthAnadali tattat svaBAvagaLa anusAra
caritre mADuta nityanelesippa||23||
grAmapanoLu agraNiyenisuvanu grAmiNIyenisuvaru janaroLu
grAma upagrAmagaLoLage SrImAnyanenisutippa
SrI manOrama tAnE yOgakShEma nAmakanAgi salahuva
I mahime mikkAda dEvarigunTe lOkadoLu||24||
vijayasArathiyendu garuDadhvajana mUrtiya BaktipUrvaka Bajisutippa mahAtmarige
sarvatradali olidu
vijayadanu tAnAgi salahuva Bujaga BUShaNa pUjya caraNAMbuja
viBUtida Buvana mOhanarUpa nirlEpa||25||
anaBimata karmapravahadoLage animiShAdi samasta cEtana gaNavihudu
tatPalagaLa uNNade sRuShTisida munna
vaniteyinda oDagUDi karuNAvanadhi nirmise
tammatammaya anucitOcita karmaPalagaLa uNuta carisuvaru||26||
JallaDiya neLalante tOrpudu ella kAladi Bavada sauKyavu
elli pokkaru biDadu beMbattihudu jIvarige
ollenendare biDadu hari nirmAlya naivEdyavanu Bunjisi
ballavara kUDADu Bava duHKagaLa nIDADu||27||
kuTTi koydidanu aTTu iTTu adasuTTu koTTada muTTalu
aGa hiTTiTTu mALpadu viThalunDucciShTa
sajjanara biTTu tannaya hoTTegOsuga thaTTane uNutiha keTTa manujara
kaTTivaidu yamapaTTaNadoLu ottaTTale iDutihanu||28||
jAgumADade BOgadAseya nIgi paramAnurAgadindali
BOgISayanana Agarada hebbAgilali nindu
kUgutali SirabAgi karuNA sAgarane BavarOga BEShaja kaigoDu endane
bEgane odaguva BAgavatarasa||29||
Enu karuNavO tannavarali dayAnidhige
sadBakta janaru ati hIna karmava mADidaru sari svIkarisi poreva
prANahiMsa lubdakage suj~jAna BaktigaLittu
daSaratha sUnu vAlmIki RuShiya mADida parama karuNALu||30||
mUDha mAnava ellakAladi bEDikoMba initendu dainyadi
bEDadandadi mADu puruShArthagaLa svapnadali
nIDuvare ninna amalaguNa konDADi higguva BAgavatara oDane
ADisennanu janmajanmagaLali dayadinda||31||
caturavidha puruShArtha rUpanu catura mUrti Atmakaniralu
matte itara puruShArthagaLa bayasuvarenu ballavaru
mati vihInaru alpa suKa SASvatavendaridu anudinadi
gaNapatiyE modalAda anya dEvategaLane Bajisuvaru||32||
ommigAdaru jIvaroLu vaiShamya dvESha asUyavilla
sudharma nAmaka santaisuvanu sarvaranu nitya
brahma kalpAntadali vEdAgamya SrI jagannAtha viThala
summanIvanu trividharige avaravara nijagatiya||33||
*********
No comments:
Post a Comment